Advertisement

ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ ದಾಂಡೇಲಿಯ ಏಕೈಕ ಚಿತ್ರಮಂದಿರ ಶ್ರೀಹರಿ ಟಾಕೀಸ್

01:29 PM Mar 09, 2024 | Team Udayavani |

ದಾಂಡೇಲಿ : ದಾಂಡೇಲಿಯ ಜನತೆಗೆ ಕಳೆದ 38- 45 ವರ್ಷಗಳಿಂದ ಚಲನಚಿತ್ರಗಳ ಪ್ರದರ್ಶನಗಳ ಮೂಲಕ ಸಾಂಸ್ಕೃತಿಕ ಮನೋರಂಜನೆಯನ್ನು ನೀಡುತ್ತಾ ಬಂದಿರುವ ನಗರದ ಜೆ.ಎನ್.ರಸ್ತೆಯಲ್ಲಿರುವ ಅಶೋಕ ಚಿತ್ರಮಂದಿರವು ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿ ಅನೇಕ ವರ್ಷಗಳು ಸಂದಿವೆ. ಆನಂತರ ಮೊನ್ನೆ ಮೊನ್ನೆಯವರೆಗೆ ನಗರ ಹಾಗೂ ನಗರದ ಸುತ್ತಮುತ್ತಲ ಜನತೆಗೆ ಸಾಧ್ಯವಾದಷ್ಟು ಮಟ್ಟಿಗೆ ಚಲನಚಿತ್ರ ಪ್ರದರ್ಶನವನ್ನು ನಿಸ್ವಾರ್ಥವಾಗಿ ನೀಡುತ್ತಾ ಬಂದಿರುವ ಹೆಗ್ಗಳಿಕೆ ಶ್ರೀಹರಿ ಚಿತ್ರಮಂದಿರಕ್ಕಿದೆ.

Advertisement

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತಾದದಾರೂ, ಈ ಚಿತ್ರಮಂದಿರದ ಸಿಬ್ಬಂದಿಗಳನ್ನು ಮಾತ್ರ ಚಿತ್ರಮಂದಿರದ ಮಾಲಕರು ಕೈ ಬಿಡದೆ ಸಲಹಿದ್ದರು. ಹಾಗೆ ನೋಡಿದರೆ, ಇಲ್ಲಿಯ ಚಿತ್ರಮಂದಿರದಿಂದ ಕಳೆದ ಹಲವಾರು ವರ್ಷಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೂ ದಾಂಡೇಲಿಯ ಜನತೆಗೆ ಸಾಂಸ್ಕೃತಿಕವಾದ ಮನೋರಂಜನೆಯನ್ನು ನೀಡಬೇಕು ಮತ್ತು ಸಿಬ್ಬಂದಿಗಳ ಬದುಕು ಅತಂತ್ರವಾಗಿರಬಾರದೆಂದು ಚಲನಚಿತ್ರ ಪ್ರದರ್ಶನವನ್ನು ಮಾಡುತ್ತಲೇ ಬರಲಾಗಿದೆ.

ಆದರೆ ಎಷ್ಟು ದಿನಾಂತಾ ಕೈಯಿಂದ ಹಣ ಖರ್ಚು ಮಾಡಿ ಚಿತ್ರಮಂದಿರವನ್ನು ನಡೆಸುವುದು. ಅದು ಈಗಂತೂ ಕೈಗೆರಡು ಮೊಬೈಲ್ ಎಂಬಂತಹ ವಾತಾವರಣವಿರುವುದರಿಂದ ದಾಂಡೇಲಿಯಲ್ಲಂತೂ ಚಿತ್ರಮಂದಿರಕ್ಕೆ ಹೋಗಿ ಚಲನಚಿತ್ರವನ್ನು ನೋಡುವುದು ಬೆರಳಣಿಕೆಯಷ್ಟೆ ಮಂದಿ ಎನ್ನುವುದನ್ನು ಹೆಚ್ಚು ವಿವರಿಸುವ ಅಗತ್ಯವಿಲ್ಲ.

ಹೌದು ಕಾಲ ಬದಲಾಗಿದೆ, ಬದಲಾದ ಕಾಲಕ್ಕೆ ತಕ್ಕಂತೆ ಪರಿವರ್ತನೆ ಸಹಜ ಪ್ರಕ್ರಿಯೆ. ಹಾಗಾಗಿ ಇಲ್ಲಿ ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಮುಂದೇನು? ಕಾದು ನೋಡಬೇಕಾಗಿದೆ.

ಏನೇ ಇರಲಿ, ಸದ್ರಿ ಜಾಗವನ್ನು ತೆಗೆದುಕೊಳ್ಳುವಾಗ ಮಾಡಲಾದ ಷರತ್ತಿನಂತೆ ಈ ಜಾಗ ಸದ್ಬಳಕೆಯಾಗಲಿ ಎನ್ನುವುದೇ ಆಶಯ.

Advertisement

ಇದನ್ನೂ ಓದಿ: INDvsENG; ಮೂರನೇ ದಿನದಾಟದಲ್ಲಿ ಆಡಲು ಬಾರದ ರೋಹಿತ್ ಶರ್ಮಾ!

Advertisement

Udayavani is now on Telegram. Click here to join our channel and stay updated with the latest news.

Next