Advertisement

Shree Swarnavalli Matha; ಸ್ವಸಹಾಯ ಸಂಘಗಳ ಸಮಾವೇಶ ಸಮಾರೋಪ‌

11:00 PM Aug 13, 2023 | Team Udayavani |

ಶಿರಸಿ: ಸ್ವಸಹಾಯ ಸಂಘಗಳಿಗೆ ವರದಿ ಹಾಗೂ ಲೆಕ್ಕ ಮಹತ್ವದ್ದು. ಸಂಘದ ಎರಡು ಮುಖಗಳು ಅವು ಎಂದು‌ ಸೋಂದಾ ಸ್ವರ್ಣವಲ್ಲೀ ಮಹಾ‌ ಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ‌ಸ್ವಾಮೀಜಿಗಳು‌ ನುಡಿದರು.

Advertisement

ಸ್ವರ್ಣವಲ್ಲೀ‌ ಮಹಾ‌ ಸಂಸ್ಥಾನದಲ್ಲಿ ರವಿವಾರ ಗ್ರಾಮಾಭ್ಯುದಯ ಸಂಸ್ಥೆ ಹಮ್ಮಿಕೊಂಡ ಸ್ವಸಹಾಯ ಸಂಘಗಳ ಸಮಾವೇಶದ ಸಮಾರೋಪ‌ ಸಮಾರಂಭದಲ್ಲಿ ಸಾನ್ನಿಧ್ಯ ನೀಡಿ‌ ಆಶೀರ್ವಚನ ನುಡಿದರು.

ಮನುಷ್ಯನಿಗೆ ಮನಸ್ಸು ಹಾಗೂ ಬುದ್ದಿ ಸರಿಯಾಗಿದ್ದರೆ ವ್ಯಕ್ತಿ ಪರಿಪೂರ್ಣ ಆಗುತ್ತಾನೆ‌. ವ್ಯಕ್ತಿಗೆ ಈ ಎರಡು ಮುಖವಾದರೆ, ಸ್ವಹಾಯ ಸಂಘಕ್ಕೆ ವರದಿ, ಲೆಕ್ಕ ಸರಿ‌ ಇಡಬೇಕು. ಕಾರ್ಯಕ್ರಮ‌ ಮಾಡಿ ಲೆಕ್ಕ ಸರಿ ಇಡದೇ ಹೋದರೆ ಕಷ್ಟ, ಪ್ರಯೋಜನ ಇಲ್ಲ ಎಂದರು.

ವರದಿ ನೋಡಿದರೆ ಸ್ವ ಸಹಾಯ ಸಂಘಗಳ ಮನಸ್ಥಿತಿ ಅರ್ಥವಾಗುತ್ತದೆ. ಸಂಘಟನೆಯ‌ ಜೀವಂತಿಕೆ ಇರುವದು ಕಾರ್ಯಕ್ರಮ‌ಗಳ ಜೀವಂತಿಕೆಯದ್ದಾಗಿದೆ. ಕಾರ್ಯಕ್ರಮ‌ ನಿಂತರೆ ಸಂಘಟನೆ ಜೀವಂತಿಕೆ ಇರುವುದಿಲ್ಲ ಎಂದರು.

ಯಾವತ್ತೂ ನಮ್ಮ ಕ್ರಿಯಾ ಶಕ್ತಿಗಳು ಜಾಗೃತರಾಗಿರಬೇಕು. ಮನುಷ್ಯನಿಗೆ ಮೂರು ಶಕ್ತಿ ಪ್ರಮುಖವಾಗಿರುತ್ತವೆ. ಅವೇ
ಜ್ಞಾನ, ಇಚ್ಛಾ ಹಾಗೂ ಕ್ರಿಯಾ ಶಕ್ತಿ ಇರುತ್ತದೆ. ಜ್ಞಾನ ಶಕ್ತಿ, ತಿಳುವಳಿಕೆ, ಇಚ್ಚಾ ಶಕ್ತಿ ಎಂದರ್ಥ. ನಂತರ ಆಚರಣೆ ಶಕ್ತಿ. ಮೂರನೆ ಶಕ್ತಿ ಮಾತ್ರ ಎಲ್ಲರ ಗಮನಕ್ಕೆ ಬರುತ್ತದೆ. ಕ್ರಿಯಾ ಶಕ್ತಿ‌ ಮೂಲಕವೇ ಉಳಿದ ಎರಡು ಶಕ್ತಿ ಅರ್ಥವಾಗುತ್ತದೆ ಎಂದರು.

Advertisement

ಗೋವಿನ ಉತ್ಪನ್ನಗಳ ಸಿದ್ದತೆ ಮಾಡಬೇಕು. ಸ್ವಸಹಾಯ ಸಂಘಗಳು ಉತ್ಪಾದನಾ ಚಟುವಟಿಕೆ ಜೊತೆ ಧಾರ್ಮಿಕ ಚಟುವಟಿಕೆ ಕೂಡ ಹೆಚ್ಚಿಸಬೇಕು ಎಂದರು.

ಶಾಸಕ ಭೀಮಣ್ಣ‌ ನಾಯ್ಕ ಮಾತನಾಡಿ, ಸ್ವ ಸಹಾಯ ಸಂಘಗಳ ಮೂಲಕ ಸಮುದಾಯದ ಅಭಿವೃದ್ದಿಗೆ ಮಠ, ಶ್ರೀಗಳು ನೀಡಿದ ಕೊಡುಗೆ ಅನನ್ಯ. ಶ್ರೀಗಳ‌ ಆಶಯದಂತೆ‌ ನಡೆದರೆ ಬದುಕು ನೆಮ್ಮದಿ, ಹಿತವಾಗಿರುತ್ತದೆ ಎಂದರು.

ಆರ್ಥಿಕ ಹಿಂದುಳಿಕೆ ಇದ್ದವರು ಮರ್ಯಾದೆಯಿಂದ ಬದುಕು ನಡೆಸಲು ಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳಲು ಸ್ವ ಸಹಾಯ ಸಂಘ ಬಳಸಿಕೊಳ್ಳಬೇಕು. ಆದರೆ, ಪಡೆದ ಹಣವನ್ನು ಆ ಉದ್ದೇಶಕ್ಕೆ ಬಳಸಬೇಕು. ಇಲ್ಲವಾದರೆ ಆರ್ಥಿಕ‌ ಮುಗ್ಗಟ್ಟಿಗೆ ಬಲಿಯಾಗುವ ಆತಂಕ ಇದೆ. ವ್ಯವಹಾರ ನಿರ್ವಹಣೆ ಅಚ್ಚುಕಟ್ಟಾಗಿ‌ ಮಾಡಬೇಕು ಎಂದು‌ ಹೇಳಿದ ಅವರು, ಗೋವಿನ ರಕ್ಷಣೆ ಮಾಡಬೇಕಿದೆ ಎಂದರು.

ಮಠದ ಕಾರ್ಯಾಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಪ್ರಮುಖರಾದ ಎಂ.ಸಿ.ಹೆಗಡೆ ಶಿರಸಿಮಕ್ಕಿ, ಎಲ್.ಎಂ.ಹೆಗಡೆ ಇತರರು ಇದ್ದರು. ಎಂ.ಕೆ.ಹೆಗಡೆ ಗೋಳಿಕೊಪ್ಪ ಸ್ವಾಗತಿಸಿದರು. ರಮೇಶ ಹೆಗಡೆ ನಿರ್ವಹಿಸಿದರು. ಉದಯ ಮರಾಠಿ, ಸಂತೋಷ ಭಟ್ ಕೋಡಿಗಾರ ವಂದಿಸಿದರು.
ಮುಂಜಾನೆಯಿಂದ ಮಧುಕೇಶ್ವರ ಹೆಗಡೆ, ಗಣೇಶ ಹೆಗಡೆ ನಿಲೇಸರ, ಉಮೇಶ ಕುಲಕರ್ಣಿ, ಅಶೋಕ ಗೋಳಿಕೈ, ಎಲ್.ಎಂ.ಹೆಗಡೆ ಉಪನ್ಯಾಸ ನೀಡಿದರು. ಇದೇ ವೇಳೆ ಹತ್ತಕ್ಕೂ ಸ್ವ ಸಹಾಯ ಸಂಘಗಳನ್ನು ಪುರಸ್ಕಾರಿಸಲಾಯಿತು.

ಸ್ವ ಸಹಾಯ ಸಂಘಗಳಿಗೆ ನಿರಂತರ ಕೆಲಸ ಕೊಡಬೇಕು. ಇದರ ಬಗ್ಗೆ ಏನು‌ ಮಾಡಬಹುದು ಹಾಗೂ ಬೆಟ್ಟ ಅಭಿವೃದ್ದಿಗೆ ಏನು ಮಾಡಬೇಕು ಎಂಬುದನ್ನು ಸರಕಾರದ ಹಂತದಲ್ಲಿ ಕೆಲಸ ಮಾಡಲು‌ ಪ್ರಯತ್ನ ಮಾಡುತ್ತೇನೆ. ಸ್ವರ್ಣವಲ್ಲೀ ಶ್ರೀಗಳು ಈ ಬಗ್ಗೆ ಸೂಚನೆ ನೀಡಲು ಕೋರುತ್ತೇನೆ.
ಭೀಮಣ್ಣ ನಾಯ್ಕ, ಶಾಸಕ

ನಮ್ಮ ಕುಟುಂಬ ವ್ಯವಸ್ಥೆ ಹಾಳಾಗಲು ವಿವಾಹ‌ ವಿಚ್ಛೇಧನ ಕಾರಣ ಆಗುತ್ತಿದೆ. ಮಕ್ಕಳಿಗೂ ಸಂಸ್ಕಾರ ತಿಳಿಸಬೇಕು. ಇದಕ್ಕಾಗಿ ಸರ್ವ ದಂಪತಿ ಶಿಬಿರ ಕೂಡ ನಡೆಸುತ್ತಿದ್ದೇವೆ. ಸಂತಾನಾಪೇಕ್ಷಿತ ದಂಪತಿಗಳು ಪಾಲ್ಗೊಳ್ಳಬೇಕು.
– ಸ್ವರ್ಣವಲ್ಲೀ ಶ್ರೀಗಳು

Advertisement

Udayavani is now on Telegram. Click here to join our channel and stay updated with the latest news.

Next