Advertisement
ಗ್ರಾಮೀಣದ ಶ್ರೇಯೋಭಿವೃದ್ಧಿಗಾಗಿ ಲಿಂ.ಡಾ. ಶ್ರೀಶಿವಕುಮಾರ ಸ್ವಾಮೀಜಿ 1964ರಲ್ಲಿ ಈ ವಿಶೇಷವಸ್ತು ಪ್ರದರ್ಶನ ಆರಂಭಿಸಿದ್ದರು. ಸಣ್ಣ ಪ್ರಮಾಣದಲ್ಲಿಆರಂಭವಾದ ಈ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಪ್ರತಿ ವರ್ಷವೂ ಜಾತ್ರೆಯ ಪ್ರಮುಖಆಕರ್ಷಣೆಯಾಗಿದ್ದು, 18 ಕೇಂದ್ರ ಮತ್ತು ರಾಜ್ಯಸರ್ಕಾರ, 160 ಖಾಸಗಿ ಸಂಘ-ಸಂಸ್ಥೆಗಳು ಸೇರಿದಂತೆ 178 ಮಳಿಗೆಗಳನ್ನು ತೆರೆಯುವಮೂಲಕ ಜನೋಪ ಯೋಗಿ ವಸ್ತು ಪ್ರದರ್ಶನವೆಂಬ ಹೆಗ್ಗಳಿಕೆ ಶ್ರೀ ಮಠದ್ದಾಗಿದೆ.
Related Articles
Advertisement
ಉಪಯುಕ್ತ ಮಾಹಿತಿ: ಅನ್ನದಾತರಿಗೆ ಅಗತ್ಯ ಉಪಯುಕ್ತ ಮಾಹಿತಿ ಒದಗಿಸುವ ಕೆಲಸವನ್ನು ಕೃಷಿಇಲಾಖೆ ಅಚ್ಚುಕಟ್ಟಾಗಿ ಈ ವಸ್ತು ಪ್ರದರ್ಶನದಲ್ಲಿಮಾಡಿದ್ದು, ಕೃಷಿ ಕ್ಷೇತ್ರದ ಹೊಸ ಸಂಶೋಧನೆಗಳಪರಿಚಯ, ವಿವಿಧ ಕೃಷಿ ಬೆಳೆಗಳ ಪ್ರಾತ್ಯಕ್ಷಿಕೆಗಳಪ್ರತ್ಯಕ್ಷದರ್ಶನದ ಮೂಲಕ ಮಾಹಿತಿ ಒದಗಿಸಿ ಉತ್ತೇಜಿಸುವ ಮೂಲಕ ಪ್ರೋತ್ಸಾಹಿಸುವ ಕಾರ್ಯವೂಶ್ರೀಕ್ಷೇತ್ರದಲ್ಲಿ ಸದ್ದುಗದ್ದಲವಿಲ್ಲದ ಈ ಕೃಷಿ ಮತ್ತುಕೈಗಾರಿಕಾ ವಸ್ತುಪ್ರದರ್ಶನದ ಮೂಲಕ ನಡೆದಿದೆ.ಅರಣ್ಯ ಸಂಪತ್ತು, ವನ್ಯಮೃಗಗಳ ಸಂರಕ್ಷಣೆ, ಆಯುರ್ವೇದ ಗಿಡಮೂಲಿಕೆಗಳನ್ನು ಬೆಳೆಸಲುಪ್ರಚೋದನೆ ನೀಡುವುದು, ವನ ಸಂರಕ್ಷಣೆ ಜಾಗೃತಿಕಾರ್ಯಕ್ರಮ, ಕಾಡಿನ ಬೆಂಕಿಯ ಬಗ್ಗೆ ಮುಂಜಾಗ್ರತೆಕುರಿತು ರೈತರಿಗೆ ಅಗತ್ಯ ಮಾಹಿತಿಯನ್ನು ಒದಗಿಸಲಾಗುತ್ತಿದೆ.
ವಸ್ತು ಪ್ರದರ್ಶನ ಕಳೆ: ಕೊರೊನಾ ಕರಿನೆರಳಿನ ಛಾಯೆ ಇದೀಗ ನಿಧಾನವಾಗಿ ಪಕ್ಕಕ್ಕೆ ಸರಿಯುತ್ತಿರುವುದರಿಂದ ಈ ಬಾರಿಯ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಕಳೆಗಟ್ಟಿದ್ದು, 2 ವರ್ಷದಿಂದ ಮನೆಯಲ್ಲಿದ್ದ
ಜನತೆ ಈ ಬಾರಿ ಜಾತ್ರೆ ಮತ್ತು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಮನಸ್ಸನ್ನು ಮುದಗೊಳಿಸಿಕೊಳ್ಳುತ್ತಿದ್ದಾರೆ. ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ದನಗಳ ಜಾತ್ರೆಗೆಬಂದಿರುವ ರೈತರು ಪ್ರತಿದಿನ ಈ ವಸ್ತುಪ್ರದರ್ಶನಕ್ಕೆಭೇಟಿ ನೀಡಿ ತಮಗೆ ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.ವಸ್ತುಪ್ರದರ್ಶನದ ಅಂಗವಾಗಿ ಬಯಲುರಂಗಮಂದಿರದಲ್ಲಿ ನಿತ್ಯ ಸಂಜೆ ನಾಡಿನ ಹೆಸರಾಂತಕಲಾವಿದರು ಸುಗಮ ಸಂಗೀತ, ವಚನಗಾಯನ,ಭರತನಾಟ್ಯ, ಯಕ್ಷಗಾನ, ನಾಟಕ ಸೇರಿದಂತೆ ವಿವಿಧಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಘವಾಗಿ ನಡೆಯುತ್ತಿವೆ.
ಈ ವರ್ಷವೂ ಉತ್ತಮ ಪ್ರದರ್ಶನ ನೀಡುವ ಮಳಿಗೆಗಳಿಗೆ ಬಹುಮಾನ ನೀಡಲಾಗುತ್ತದೆ. ಶ್ರೀಗಳುಹಾಗೂ ಜಿಲ್ಲಾಡಳಿತದ ಆದೇಶದ ಮೇರೆಗೆ ಈ ವಸ್ತುಪ್ರದರ್ಶನ ನಡೆಸಲಾಗುತ್ತಿದೆ. ಹೆಚ್ಚು ಜನರು ವಸ್ತುಪ್ರದರ್ಶನ ವೀಕ್ಷಿಸುತ್ತಿದ್ದಾರೆ. ವಾಣಿಜ್ಯೇತರ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿದೆ.ವಸ್ತುಪ್ರದರ್ಶನ ಪ್ರಾರಂಭವಾಗಿ 58 ವರ್ಷ ಕಳೆದಿವೆ.ಇದರ ಸವಿನೆನಪಿಗೆ ಸುವರ್ಣ ಮಹೋತ್ಸವ ಮಾಡಬೇಕು ಎಂಬುದು ಶ್ರೀಗಳ ಸಂಕಲ್ಪವಾಗಿತ್ತು.ಅದರಂತೆ ಶ್ರೀಸಿದ್ದಲಿಂಗ ಸ್ವಾಮೀಜಿಮಾರ್ಗದರ್ಶನದಲ್ಲಿ ಹಿರಿಯಶ್ರೀಗಳ ಸಂಕಲ್ಪವನ್ನುನೆರವೇರಿಸಲಾಗಿದೆ. ಮಾರ್ಚ್ 4ರಂದುಜನೋಪಯೋಗಿ ವಸ್ತು ಪ್ರದರ್ಶನ ಮುಕ್ತಾಯವಾಗಲಿದೆ.
ವಿವಿಧ ಉತ್ಸವ :
ಫೆ.28ರಂದು ರಾವಣ ವಾಹನ, ಬಿಲ್ವ ವೃಕ್ಷ ವಾಹನ, ನವರಂಗ ಪಾಲಕಿ ಉತ್ಸವ, ಮಾ.1ರಂದುಮಹಾಶಿವರಾತ್ರಿ ಪೂಜಾದಿಗಳು ನೆಡೆಯಲಿದ್ದು,ಅಂದು ಬೆಳ್ಳಿ ರಥೋತ್ಸವ, ಮುತ್ತಿನ ಪಾಲಕಿ ಉತ್ಸವ,ಮಾ.2ರಂದು ರಥೋತ್ಸವ, ರುದ್ರಾಕ್ಷಿಮಂಟಪೋತ್ಸವ, ಮಾ.3ರಂದು ಬೆಳ್ಳಿ ಪಾಲಕಿ ಉತ್ಸವ, ಮಾ.4ರಂದು ತೆಪ್ಪೂತ್ಸವ ಮತ್ತುಪಂಚ ಬ್ರಹ್ಮೋತ್ಸವಗಳು ನಡೆಯಲಿದೆ.
1977ರಲ್ಲಿ ವಸ್ತುಪ್ರದರ್ಶನಕ್ಕೆ 50ಪೈಸೆ ಪ್ರವೇಶ ಶುಲ್ಕನಿಗದಿಪಡಿಸಲಾಗಿತ್ತು. ನಂತರ 1 ರೂ.ನಿಗದಿಪಡಿಸಿದ್ದೆವು. ಆಗ ಶಿವಕುಮಾರಸ್ವಾಮೀಜಿ ನಮ್ಮನ್ನು ತರಾಟೆಗೆತೆಗೆದುಕೊಂಡರು. ಜನರಿಗೆ ಉಚಿತ ಪ್ರವೇಶ ನೀಡುವುದಾಗಿ ಹೇಳಿದ್ದರು.ಅದಾದ ಬಳಿಕ 2 ರೂ. ನಿಗದಿಪಡಿಸಿದ್ದೆವು.ಆಗಲೂ ಆಕ್ಷೇಪ ವ್ಯಕ್ತಪಡಿಸಿದ್ದರು. -ಬಿ. ಗಂಗಾಧರಯ್ಯ, ಕಾರ್ಯದರ್ಶಿ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ
ವಸ್ತುಪ್ರದರ್ಶನ ಸರಾಗವಾಗಿನಡೆದುಕೊಂಡು ಬಂದಿದೆ. ಸರ್ಕಾರಿಇಲಾಖೆ ಅಧಿಕಾರಿಗಳು, ಖಾಸಗಿ ಸಂಸ್ಥೆಗಳುಮಳಿಗೆ ತೆರೆಯುವ ಮೂಲಕವಸ್ತುಪ್ರದರ್ಶನಕ್ಕೆ ಕೈಜೋಡಿಸಿದ್ದಾರೆ. -ಕೆಂ.ಬ.ರೇಣುಕಯ್ಯ, ಜಂಟಿಕಾರ್ಯದರ್ಶಿ, ವಸ್ತುಪ್ರದರ್ಶನ
ಕ್ಷೇತ್ರಕ್ಕೆ ಹೆಚ್ಚು ಜನ ಬರುತ್ತಿರುವಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾಕ್ರಮವಾಗಿ ಕೊರೊನಾ ಪರೀಕ್ಷೆ, ಲಸಿಕೆಗೆವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ಕಾಗಿಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆಮಾಡಿದ್ದಾರೆ. ನೀರು, ಶೌಚಾಲಯಕ್ಕೆವ್ಯವಸ್ಥೆ ಮಾಡಲಾಗಿದೆ. -ಎಸ್. ಶಿವಕುಮಾರ್, ಜಂಟಿ ಕಾರ್ಯದರ್ಶಿ, ವಸ್ತುಪ್ರದರ್ಶನ