Advertisement
‘ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮ’ ಶೀರ್ಷಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಕ್ಷೇತ್ರ ಅರ್ಚಕ ರಾಮಚಂದ್ರ ಭಟ್ ದೀಪ ಪ್ರಜ್ವಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗ್ಗೆ 6ರಿಂದ ಸಂಧ್ಯಾಕಾಲದ ವರೆಗೆ ಅಖಂಡ ಶ್ರೀರಾಮನ ಸಂಕೀರ್ತನೆ ನಡೆಯಿತು.
ದಾಸ ಸಂಕೀರ್ತನೆ, ದಾಸ ಸಾಹಿತ್ಯದ ಸಾಂಪ್ರದಾಯಿಕ ಭಜನ ಸಂಕೀರ್ತನೆಯನ್ನು ಬೆಳೆಸುವುದರ ಜತೆಗೆ ಕನ್ನಡವನ್ನು ಉಳಿಸುವ ಕಾಯಕವನ್ನೂ ಮಾಡುತ್ತಿರುವ ಭಜನ ಗುರು ರಾಮಕೃಷ್ಣ ಕಾಟುಕುಕ್ಕೆ ಅವರು ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮವಾಗಿ ಭಜನ ತರಬೇತಿಯನ್ನು ಹುಟ್ಟು ಹಾಕಿದವರು. ಹಲವೆಡೆ ಭಜನ ಸಂಘಗಳ ಸೃಷ್ಟಿಗೆ ಕಾರಣಕರ್ತರಾಗಿದ್ದಾರೆ. ಯುವ ಪೀಳಿಗೆಗೆ ಭಜನೆಯನ್ನು ತಿಳಿಸಿ ಕೊಡುವ ಮೂಲಕ ನಮ್ಮ ಸಾಂಪ್ರದಾಯಿಕ, ಧಾರ್ಮಿಕ ನೆಲೆಗಟ್ಟನ್ನು ದೃಢಗೊಳಿಸುವುದು ಕರ್ತವ್ಯವೂ ಹೌದು. ಭಜನೆಯಲ್ಲಿ ಪ್ರಚಾರ, ಪ್ರತಿಷ್ಠೆಯ ವಸ್ತುವಾಗದೆ ದೇವರನ್ನು ಸಂತೃಪ್ತಿಪಡಿಸುವ ಉದ್ದೇಶ ಹೊಂದಿದ್ದರೆ ನಮ್ಮ ಸೇವೆಯನ್ನು ಭಗವಂತ ಸ್ವೀಕರಿಸಲು, ಭಕ್ತಿಯ ಪರಿಪೂರ್ಣತೆ ಸಾಕ್ಷಾತ್ಕಾರಗೊಳ್ಳಲು ಸಾಧ್ಯ. ರಾಮಾಯಣ ಮಾಸಾಚರಣೆಯ ವೇಳೆ ಇಂತಹ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಮಕೃಷ್ಣ ಕಾಟುಕುಕ್ಕೆ ತಿಳಿಸಿದ್ದಾರೆ.