Advertisement
ಶ್ರೀಗಳ ಗದ್ದುಗೆಗೆ ವಿಶೇಷಅಲಂಕಾರ ಸಿದ್ಧತೆ ನಡೆದಿದೆ.ಪ್ರತಿ ವರ್ಷ ಸ್ವಾಮೀಜಿಗಳ ಜನ್ಮದಿನದಂದುಶ್ರೀಮಠದಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿತ್ತು.ಆದರೆ, ಈ ವರ್ಷ ಕೊರೊನಾ ಸೋಂಕು ವ್ಯಾಪಕವಾಗಿಹರಡುತ್ತಿರುವ ಹಿನ್ನೆಲೆ ಶ್ರೀಮಠದಲ್ಲಿ ಸರಳ ರೀತಿಯಲ್ಲಿವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಭಕ್ತಿಪೂರ್ವಕ ಗುರುವಂದನಾ ಕಾರ್ಯಕ್ರಮವನ್ನುಏರ್ಪಡಿಸಿದ್ದು, ಈ ಹಿಂದೆ ಶ್ರೀಮಠದಲ್ಲಿ ಸ್ವಾಮೀಜಿಗಳಹುಟ್ಟುಹಬ್ಬದ ದಿನದಂದು ಏನೆಲ್ಲ ಕಾರ್ಯಕ್ರಮಗಳುನಡೆಯುತ್ತಿದ್ದವು.
Related Articles
Advertisement
ನಂತರಶ್ರೀಮಠಕ್ಕೆ ಆಗಮಿಸುವ ಭಕ್ತರು ಸ್ವಾಮೀಜಿಗಳಿಗೆಗುರುವಂದನೆ ಸಲ್ಲಿಸುವರು. ಈ ಸಂದರ್ಭದಲ್ಲಿನಾಡಿನ ವಿವಿಧ ರಾಜಕೀಯ ಗಣ್ಯರು, ಅಧಿಕಾರಿಗಳುಹಾಗೂ ಭಕ್ತಾದಿಗಳು ಆಗಮಿಸಿ ಲಿಂ.ಡಾ.ಶ್ರೀಶಿವಕುಮಾರ ಸ್ವಾಮಿ ಗದ್ದುಗೆಗೆ ಗುರುನಮನ ಸಲ್ಲಿಸಿಆಶೀರ್ವಾದ ಪಡೆಯುವರು. ಈ ಕಾರ್ಯಕ್ರಮಕ್ಕಾಗಿಈಗಾಗಲೇ ಶ್ರೀಮಠದಲ್ಲಿ ಸಿದ್ಧತೆಗಳು ಭರದಿಂದನಡೆದಿದ್ದು, ಬಂದಿರುವ ಭಕ್ತರಿಗೆಲ್ಲ ಪ್ರಸಾದವ್ಯವಸ್ಥೆಯನ್ನು ಶ್ರೀ ಮಠದಿಂದ ಮಾಡಲಾಗಿದ್ದು,ಮಠದಲ್ಲಿ ಸಂಭ್ರಮ ಮನೆ ಮಾಡಿದೆ.
ಭಕ್ತಿ ನಮನಕ್ಕೆ ಸಿದ್ಧತೆ: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಹಿರಿಯ ಶ್ರೀಗಳಾದ ಪದ್ಮಭೂಷಣ ಲಿಂ.ಡಾ. ಶ್ರೀಶಿವಕುಮಾರ ಮಹಾಸ್ವಾಮಿ 114ನೇಜಯಂತ್ಯುತ್ಸವದ ಪ್ರಯುಕ್ತ ಏ.1ರಂದುಗುರುವಂದನಾ ಮಹೋತ್ಸವದ ಅಂಗವಾಗಿಭಕ್ತಿನಮನ ವನ್ನು ವಿಶೇಷವಾಗಿ ನಡೆಸಲು ಸಿದ್ಧತೆಗಳುಪೂರ್ಣಗೊಂಡಿವೆ.
ಎಲ್ಲ ಕಡೆ ಅರವಟ್ಟಿಗೆ: ಬೇಸಿಗೆಯಾಗಿರುವುದರಿಂದಕುಡಿಯುವ ನೀರಿಗಾಗಿ ಎಲ್ಲ ಕಡೆ ಅರವಟ್ಟಿಗೆಮಾಡಲಾಗಿದೆ. ಬರುವ ಭಕ್ತರಿಗೆ ಊಟ ಬಡಿಸಲುಮತ್ತು ಊಟ ತಯಾರಿಸಲು ವ್ಯವಸ್ಥೆ ಮಾಡಲಾಗಿದೆ.ಒಂದು ಕಡೆ ಅಡುಗೆ ಮಾಡಲು 25 ಜನ ಇರುತ್ತಾರೆ.ಊಟ ಬಡಿಸಲು 500 ಜನ ಉಪಾಧ್ಯಾಯರು1,500 ವಿದ್ಯಾರ್ಥಿಗಳು ಕೆಲಸ ನಿರ್ವಹಿಸುವರು.
ಬಿಗಿ ಭದ್ರತೆ: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಕ್ರಮವನ್ನು ವಹಿಸಲಾಗಿದ್ದು, ಅದಕ್ಕಾಗಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣಮಾರ್ಗದರ್ಶನದಲ್ಲಿ ಭದ್ರತೆ ಒದಗಿಸಲಾಗಿದೆ. ಮಠಕ್ಕೆಬರುವ ವಾಹನಗಳು ಯಾವ ಯಾವ ಕಡೆಯಿಂದಬರಬೇಕು ಎನ್ನುವ ಬಗ್ಗೆ ಮಾಹಿತಿ ಫಲಕಗಳನ್ನುಹಾಕಿದ್ದಾರೆ. ಎಲ್ಲ ಕಡೆಯೂ ಭದ್ರತೆ ಹೆಚ್ಚಿಸಿದ್ದಾರೆ.ಕಾರ್ಯಕ್ರಮದಲ್ಲಿ ಯಾವುದೇ ತೊಂದರೆಯಾಗದಂತೆಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.ಗುರುವಂದನೆ: ತುಮಕೂರು ಜಿಲ್ಲಾ ನಾಗರಿಕಸಮಿತಿಯಿಂದ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಂಜೆ ಗುರುವಂದನಾ ಕಾರ್ಯಕ್ರಮನಡೆಯಲಿದೆ. ಅಲ್ಲಿಯೂ ಪ್ರಸಾದ ವ್ಯವಸ್ಥೆಯನ್ನುಮಾಡಲಾಗಿದೆ.
ಚಿ.ನಿ. ಪುರುಷೋತ್ತಮ್