Advertisement

ಸಂಸ್ಕೃತಿ, ಸಂಸ್ಕಾರಗಳಿಗೆ ಉಚ್ಚಿಲ ಕೇಂದ್ರವಾಗಲಿ: ಸೋದೆ ಶ್ರೀ

01:42 AM Apr 14, 2022 | Team Udayavani |

ಪಡುಬಿದ್ರಿ: ವೀರರೆನಿಸಿರುವ ಮೊಗವೀರರಿಂದ ಭವ್ಯವಾದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ನಿರ್ಮಾಣ ವಾಗಿದೆ. ಅವರ ಈ ಸೇವೆ ಅನನ್ಯವಾದುದು. ಮುಂದೆ ಕ್ಷೇತ್ರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರ ಬೇಕು. ಈ ದೇವಾಲಯವು ನಮ್ಮ ಸಂಸ್ಕೃತಿ, ಸಂಸ್ಕಾರಗಳಿಗೆ ಪ್ರಧಾನ ಕೇಂದ್ರ ವಾಗಬೇಕು ಎಂದು ಉಡುಪಿ ಶ್ರೀ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.

Advertisement

ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ರಥೋತ್ಸವ ಸಂದರ್ಭ ಕ್ಷೇತ್ರಕ್ಕೆ ಭೇಟಿಯಿತ್ತು ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಸಂಭ್ರಮದ ವಿಶೇಷ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಅದ್ಭುತ ಫಲ ಪ್ರಾಪ್ತಿ
ಉಡುಪಿ ಶ್ರೀ ಶೀರೂರು ಮಠಾ ಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ,ಲಕ್ಷ್ಮೀ ದೇವಿಯನ್ನು ಭಗವಂತನ ನೊಂದಿಗೆ ಪೂಜಿಸಿದಾಗ ನಮಗೆ ಅದ್ಭುತ ಫಲ ಪ್ರಾಪ್ತಿಯಾಗುವುದು ಎಂದರು.

ಮೂಲ್ಕಿ – ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, ಮೊಗವೀರರು ಸಮಗ್ರ ಹಿಂದೂ ಸಮಾಜದ ಹೆಮ್ಮೆ. ಡಾ| ಜಿ. ಶಂಕರ್‌ ನೇತೃತ್ವದಲ್ಲಿ ಪುನರ್‌ ನಿರ್ಮಾಣವಾಗಿರುವ ಶ್ರೀ ಕ್ಷೇತ್ರ ಉಚ್ಚಿಲದ ಮಹಾಲಕ್ಷ್ಮೀಯು ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದ್ದಾಳೆ ಎಂದು ಹೇಳಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ರಾಜ್ಯಕ್ಕೇ ಹೆಮ್ಮೆಯ ದೇವಸ್ಥಾನವಾಗಿ ಶ್ರೀ ಮಹಾಲಕ್ಷಿ$¾à ದೇವಸ್ಥಾನವು ನಮ್ಮ ಮುಂದಿದೆ ಎಂದರು. ಬಾಕೂìರು ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಡಂದಲೆ ಸುರೇಶ್‌ ಭಂಡಾರಿ ಮಾತನಾಡಿದರು.

Advertisement

ಗೌರವ, ಅಭಿನಂದನೆ
ಶ್ರೀ ಕ್ಷೇತ್ರದ ಸಿಬಂದಿಗಳಾದ ಸದಾ ನಂದ ದೇವಾಡಿಗ, ಅಕ್ಷಯ್‌ ಕುಲಾಲ್‌, ಗೌತಮ್‌ ಹಾಗೂ ಸೆಕ್ಯೂರಿಟಿ ಗಾರ್ಡ್‌ ರಾಘವ ಆಚಾರ್ಯ ಅವರನ್ನು ಗೌರವಿಸಲಾಯಿತು. ದ.ಕ. ಮೊಗವೀರ ಮಹಿಳಾ ಮಹಾಜನ ಸಂಘದ ಮಾಜಿ ಅಧ್ಯಕ್ಷ ಸೀತಮ್ಮ ಟೀಚರ್‌, ಸತೀಶ್‌ ಅಮೀನ್‌ ಪಡುಕರೆ, ಶಂಕರ ಸಾಲ್ಯಾನ್‌, ರಾಘವೇಂದ್ರ ಬೈಕಾಡಿ, ವಿನಯ ಕರ್ಕೇರ ಮಲ್ಪೆ , ಅಪ್ಪಿ ಸಾಲ್ಯಾನ್‌ ಸಹಿತ ಬ್ರಹ್ಮಕಲಶೋತ್ಸವ ಪುಣ್ಯೋತ್ಸವದ ಧಾರ್ಮಿಕ ಕಾರ್ಯ ಕ್ರಮದಲ್ಲಿ ಸ್ವಯಂಸೇವಕ ರಾಗಿ, ಕಾರ್ಯಕರ್ತರಾಗಿ ಅಹರ್ನಿಶಿ ದುಡಿದವರನ್ನು ಅಭಿನಂದಿಸಲಾ ಯಿತು. ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರಿನ ಸಾಂಸ್ಕೃತಿಕ ಸಚಿವಾಲಯದ ಪ್ರತಿನಿಧಿಗಳನ್ನು ಗೌರವಿಸಲಾಯಿತು.

ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್‌, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ರಾಜ್ಯ ಗಂಗಾಮತಸ್ಥ ಸಂಘದ ಅಧ್ಯಕ್ಷ ಬಿ. ಮೌಲಾಲಿ, ದ.ಕ., ಉಡುಪಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಉದ್ಯಮಿ ಆನಂದ ಸಿ. ಕುಂದರ್‌, ಪುತ್ತೂರಿನ ಉದ್ಯಮಿ ಮನೋಹರ ಶೆಟ್ಟಿ, ಕೋಡಿಕಲ್‌ನ ಉದ್ಯಮಿ ಸಂತೋಷ್‌ ಸುವರ್ಣ, ಸಿವಿಲ್‌ ಎಚ್‌ಒಡಿ ಎನ್‌ಐಟಿಕೆಯ ಪ್ರೊ| ಯರ್ಗರ್‌, ಭಾರತ್‌ ಕೋ – ಆಪರೇಟಿವ್‌ ಬ್ಯಾಂಕಿನ ನಿರ್ದೇಶಕ ಗಂಗಾಧರ ಪೂಜಾರಿ ವೇದಿಕೆಯಲ್ಲಿದ್ದರು.

ದಾಮೋದರ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಜೀರ್ಣೋ ದ್ಧಾರ ಸಮಿತಿಯ ಕಾರ್ಯದರ್ಶಿ ಶಂಕರ ಸಾಲ್ಯಾನ್‌ ವಂದಿಸಿದರು.

2.5 ಲಕ್ಷ ಭಕ್ತರಿಗೆ ಅನ್ನದಾನ
ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಜಿ. ಶಂಕರ್‌ ಮಾತನಾಡಿ, ಕ್ಷೇತ್ರದಲ್ಲಿ ಈವರೆಗೆ ಸುಮಾರು 2.5 ಲಕ್ಷ ಜನರು ಅನ್ನದಾಸೋಹದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next