Advertisement

Kaup: ನಾಡಹಬ್ಬದಂತೆ ಕಂಗೊಳಿಸುವ ಉಚ್ಚಿಲ ದಸರಾ: ಪೇಜಾವರ ಶ್ರೀ

07:50 PM Oct 08, 2024 | Team Udayavani |

ಕಾಪು: ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯು ತ್ತಿರುವ ಮೂರನೇ ವರ್ಷದ ಉಡುಪಿ ಉಚ್ಚಿಲ ದಸರಾ ವೈಭವವು ಎಲ್ಲೆಡೆಯ ಭಕ್ತರ ಜನಾಕರ್ಷಣೆಗೆ ಕಾರಣವಾಗುತ್ತಿದೆ. ನಾಡಿನ ಎಲ್ಲ ಸಮಾಜದವರನ್ನು ಮತ್ತು ಭಕ್ತರನ್ನೂ ಒಗ್ಗೂಡಿಸಿಕೊಂಡು ಆಚರಿಸುತ್ತಿರುವ ಉಚ್ಚಿಲ ದಸರಾ ತುಳುನಾಡು ಮತ್ತು ಕರುನಾಡು ಮಾತ್ರವಲ್ಲದೇ ದೇಶ-ವಿದೇಶಗಳ ಜನರನ್ನು ತನ್ನತ್ತ ಸೆಳೆಯತ್ತಿದ್ದು ನಾಡಹಬ್ಬವಾಗಿ ಪ್ರಸಿದ್ಧಿ ಪಡೆಯುವಂತಾಗಿದೆ ಎಂದು ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೆಳಿದರು.

Advertisement

ಉಡುಪಿ ಉಚ್ಚಿಲ ದಸರಾ 2024 ಪ್ರಯುಕ್ತ ಶಾಲಿನಿ ಡಾ| ಜಿ. ಶಂಕರ್‌ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂರೆಂಟು ವೀಣೆಗಳ ವಾದನ – ಶತವೀಣಾವಲ್ಲರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಶತವೀಣಾವಲ್ಲರಿ – ವೀಣಾವಾದನವು ಶಾರದಾಮಾತೆಗೆ ಅತ್ಯಂತ ಪ್ರಿಯವಾಗಿದೆ. ಪ್ರಾಚೀನ ಕಲೆಯಾದ ವೀಣಾವಾದನೆ ಕಲೆಯನ್ನು ಜೀವಂತಗಾಗಿ ಉಳಿಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿ ನಡೆಯಬೇಕಿದೆ. ನಾಡೋಜ ಜಿ. ಶಂಕರ್‌ ನೇತೃತ್ವದ ಉಚ್ಚಿಲ ದಸರಾ ವೈಭವದಲ್ಲಿ ವೀಣಾವಾದನ ಕಲೆಗೆ ಪ್ರೋತ್ಸಾಹ ನೀಡು ತ್ತಿರುವುದು ನಿಜಕ್ಕೂ ಶ್ಲಾಘನೀ ಯವಾಗಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಿರಂತರವಾಗಿ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಉಚ್ಚಿಲ ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್‌ ಅವರು ಸತತ ಮೂರನೇ ವರ್ಷದಲ್ಲಿ ಶತವೀಣಾವಲ್ಲರಿ ವಿಶೇಷ ಕಾರ್ಯಕ್ರಮವನ್ನು ಸಂಯೋಜಿಸುವಲ್ಲಿ ಮುತುವರ್ಜಿ ವಹಿಸಿದ ಕಲಾಸ್ಪಂದನ ಕಲಾಶಾಲೆಯ ವಿದುಷಿ ಪವನ ಬಿ. ಆಚಾರ್‌ ಅವರನ್ನು ಸಮ್ಮಾನಿಸಿದರು.

ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ಕೆ. ವಿ. ರಾಘವೇಂದ್ರ ಉಪಾಧ್ಯಾಯ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ, ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್‌ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್‌ ಕುಮಾರ್‌ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್‌, ಜತೆ ಕಾರ್ಯದರ್ಶಿ ಸುಜಿತ್‌ ಸಾಲ್ಯಾನ್‌ ಮುಲ್ಕಿ, ಕ್ಷೇತ್ರಾಡಳಿತ ಸಮಿತಿ ಕಾರ್ಯದರ್ಶಿ ನಾರಾಯಣ ಸಿ. ಕರ್ಕೇರ, ಕೋಶಾಧಿಕಾರಿ ಸುಧಾಕರ್‌ ಕುಂದರ್‌, ಸದಸ್ಯರಾದ ಮೋಹನ್‌ ಬಂಗೇರ ಕಾಪು, ದಿನೇಶ್‌ ಎರ್ಮಾಳು, ದ.ಕ. ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಉಷಾರಾಣಿ ಬೋಳೂರು, ಪ್ರಧಾನ ಕಾರ್ಯದರ್ಶಿ ಉಷಾ ಲೋಕೇಶ್‌, ಕಾಪು ನಾಲ್ಕು ಪಟ್ಣ ಮೊಗವೀರ ಸಭಾ ಉಚ್ಚಿಲ ಅಧ್ಯಕ್ಷ ಮನೋಜ್‌ ಪಿ. ಕಾಂಚನ್‌, ನಾಲ್ಕು ಪಟ್ಣ ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ಸುಗುಣ ಎಸ್‌. ಕರ್ಕೇರ, ಕ್ಷೇತ್ರಾಡಳಿತ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಗುಂಡು ಬಿ. ಅಮೀನ್‌, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ್‌ ಅಮೀನ್‌, ಪ್ರಮುಖರಾದ ವೈ. ಗಂಗಾಧರ ಸುವರ್ಣ, ರವೀಂದ್ರ ಶ್ರೀಯಾನ್‌ ಹಿರಿಯಡ್ಕ, ಶಿವರಾಮ ಕೋಟ, ಕೇಶವ ಎಂ. ಕೋಟ್ಯಾನ್‌, ಗಿರೀಶ್‌ ಕುಮಾರ್‌ ಪಿತ್ರೋಡಿ, ಜಯಂತ್‌ ಸಾಲ್ಯಾನ್‌ ಕನಕೋಡ, ಕಿರಣ್‌ ಕುಮಾರ್‌ ಉದ್ಯಾವರ, ಸುಧಾಕರ ವಿ. ಸುವರ್ಣ ಉಚ್ಚಿಲ, ನಾರಾಯಣ ಕುಂದರ್‌ ಕಲ್ಮಾಡಿ, ಸತೀಶ್‌ ಆರ್‌. ಕರ್ಕೇರ, ವಿಜಯ ಸುವರ್ಣ ಕುಳಾಯಿ, ಹೇಮಂತ್‌ ತಿಂಗಳಾಯ, ಪುರುಷೋತ್ತಮ ಕೋಟ್ಯಾನ್‌, ಯಶವಂತ್‌ ಪಿ. ಮೆಂಡನ್‌ ಬೋಳೂರು, ಸತೀಶ್‌ ಆರ್‌. ಸಾಲ್ಯಾನ್‌, ಸತೀಶ್‌ ಕುಂದರ್‌ ಮಲ್ಪೆ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಸತೀಶ್‌ ಅಮೀನ್‌ ಪಡುಕೆರೆ ನಿರೂಪಿಸಿ, ವಂದಿಸಿದರು.

Advertisement

ಲಲಿತಾ ಪಂಚಮಿ ಪ್ರಯುಕ್ತ ವಿದುಷಿ ಪವನ ಬಿ. ಆಚಾರ್‌ ಮಣಿಪಾಲ್‌ ನಿರ್ದೇಶನದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ವೀಣಾವಾದಕರನ್ನೊಳಗೊಂಡ ತಂಡ ನೇರಳೆ ಬಣ್ಣದ ಸಮವಸ್ತ್ರ ಧರಿಸಿ ಏಕಕಾಲದಲ್ಲಿ ವೀಣೆಗಳ ವಾದನ ಕಾರ್ಯಕ್ರಮ ನಡೆಸಿಕೊಟ್ಟರು. ಮೃದಂಗದಲ್ಲಿ ಡಾ| ಬಾಲಚಂದ್ರ ಆಚಾರ್‌, ರಿದಮ್‌ ಪ್ಯಾಡ್‌ನ‌ಲ್ಲಿ ಕಾರ್ತಿಕ್‌ ಭಟ್‌ ಇನ್ನಂಜೆ, ತಂಬೂರಿಯಲ್ಲಿ ವಿದುಷಿ ಸುರೇಖಾ ಎ. ಭಟ್‌, ತಾಳದಲ್ಲಿ ಹೇಮಲತಾ ರಾವ್‌ ಸಹಕರಿಸಿದರು.

ದ.ಕ., ಉಡುಪಿ ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆ
ಕಾಪು: ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯು ತ್ತಿರುವ ಉಡುಪಿ ಉಚ್ಚಿಲ ದಸರಾ 2024 ಪ್ರಯುಕ್ತ ಸೋಮವಾರ ಲಲಿತಾ ಪಂಚಮಿ ಯಂದು ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಪುರುಷರು ಮತ್ತು ಮಹಿಳೆಯರ ವಿಭಾಗದ ರಂಗೋಲಿ ಸ್ಪರ್ಧೆ ನಡೆಯಿತು.

ಉಚ್ಚಿಲ ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್‌ ಮತ್ತು ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ ಉದ್ಘಾಟಿಸಿದರು.

ಬಹುಮಾನ ವಿಜೇತರ ವಿವರ
ಪುರುಷರ ವಿಭಾಗದಲ್ಲಿ ತಿಲಕ್‌ ಡಿ. ಪುತ್ರನ್‌ ಎರ್ಮಾಳು (ಪ್ರಥಮ), ಅತುಲ್‌ ಮಂಗಳೂರು (ದ್ವಿತೀಯ), ಪ್ರಣಾಮ್‌ ಟಿ. ಪುತ್ರನ್‌ ಎರ್ಮಾಳು (ತೃತೀಯ) ಹಾಗೂ ಮಹಿಳೆಯರ ವಿಭಾಗದಲ್ಲಿ ತೃಷಾ ಯು. ಅಂಚನ್‌ ನಂದಿಕೂರು (ಪ್ರಥಮ), ವಿದ್ಯಾ ವಿಶ್ವೇಶ್‌ ಮಣಿಪಾಲ (ದ್ವಿತೀಯ), ಪ್ರಮೀಳಾ ಶೆಟ್ಟಿ ಬೆಳ್ಮಣ್‌ (ತೃತೀಯ), ಹರ್ಷಿತ ಪಿ. ಸಾಲ್ಯಾನ್‌ ಮಲ್ಪೆ, ಅದಿತಿ ಉಡುಪಿ, ಜ್ಯೋತಿ ಜಿ. ಶೇಟ್‌ ಉಡುಪಿ ಸಮಾಧಾನಕರ ಬಹುಮಾನ ಗಳಿಸಿದ್ದಾರೆ.

ಸ್ಪರ್ಧೆಯಲ್ಲಿ ಎರಡೂ ವಿಭಾಗದಲ್ಲಿ 60 ಮಂದಿ ಸ್ಫರ್ಧಾಳುಗಳು ಭಾಗವಹಿಸಿದ್ದು, ರಮೇಶ್‌ ಕಿದಿಯೂರು, ಶ್ರೀಧರ್‌ ತೊಟ್ಟಂ, ಶೇಖರ್‌ ಕಲಾಪ್ರತಿಭಾ ತೀರ್ಪುಗಾರರಾಗಿ ಸಹಕರಿಸಿದ್ದರು.

ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ಕೆ.ವಿ. ರಾಘವೇಂದ್ರ ಉಪಾಧ್ಯಾಯ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ, ದ.ಕ. ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಉಷಾರಾಣಿ ಬೋಳೂರು, ಪ್ರಧಾನ ಕಾರ್ಯದರ್ಶಿ ಉಷಾ ಲೋಕೇಶ್‌, ಕಾಪು ನಾಲ್ಕುಪಟ್ಣ ಮೊಗವೀರ ಸಭಾ ಉಚ್ಚಿಲ ಅಧ್ಯಕ್ಷ ಮನೋಜ್‌ ಪಿ. ಕಾಂಚನ್‌, ನಾಲ್ಕುಪಟ್ಣ ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ಸುಗುಣ ಎಸ್‌. ಕರ್ಕೇರ, ಕ್ಷೇತ್ರಾಡಳಿತ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಗುಂಡು ಬಿ. ಅಮೀನ್‌, ಸಾಂಸ್ಕೃತಿಕ ಸಮಿತಿ ಸಂಚಾಲಕ ಸತೀಶ್‌ ಅಮೀನ್‌ ಪಡುಕೆರೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next