Advertisement
ಧಾರ್ಮಿಕ ಕೇಂದ್ರಗಳು ಮನುಕುಲಕ್ಕೆ ಬದುಕುವ ರೀತಿಯನ್ನು ತಿಳಿಸುವ ಕೇಂದ್ರಗಳೂ ಆಗಿವೆ.ಸ್ವಚ್ಛತೆಯ ಪರಿಕಲ್ಪನೆ ಇಲ್ಲಿಂದ ಆರಂಭಗೊಂಡರೆ ರಾಜ್ಯದ ಪ್ರತೀ ಮನೆಯಲ್ಲಿಯೂ ಜಾಗೃತಿ ಮೂಡಿಸಬಹುದೆಂದು ಡಾ| ಹೆಗ್ಗಡೆಯವರು 2016ರಲ್ಲಿ “ಸ್ವಚ್ಛ ಶ್ರದ್ಧಾ ಕೇಂದ್ರ’ ಪರಿಕಲ್ಪನೆಗೆ ಚಾಲನೆ ನೀಡಿದ್ದರು. 5 ವರ್ಷಗಳಿಂದ ವರ್ಷಕ್ಕೆ 2 ಬಾರಿಯಂತೆ ಸಾಮುದಾಯಿಕ ಸ್ವಚ್ಛತಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಭಿಯಾನದಲ್ಲಿ ಶ್ರದ್ಧಾ ಕೇಂದ್ರಗಳ ಆಡಳಿತ ಮಂಡಳಿಗಳು, ಒಕ್ಕೂಟದ ಪದಾಧಿಕಾರಿಗಳು, ಸ್ಥಳೀಯ ಜನಜಾಗೃತಿ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಶೌರ್ಯ ವಿಪತ್ತು ನಿರ್ವಹಣೆಯ ಸ್ವಯಂ ಸೇವಕರು, ನವಜೀವನ ಸಮಿತಿ ಸದಸ್ಯರು, ಊರ ಗಣ್ಯರು, ಗ್ರಾಮ ಪಂಚಾಯತ್ ಸದಸ್ಯರು, ಸಂಘ-ಸಂಸ್ಥೆಗಳ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಕಾರ್ಯಕರ್ತರು ಕೈ ಜೋಡಿಸಿದ್ದರು. ಇದನ್ನೂ ಓದಿ:ರೈತರಿಗಿದೆ ಸರ್ಕಾರದ ಸಾಲ ತೀರಿಸುವ ಸಾಮರ್ಥ್ಯ
Related Articles
-ದೇವಸ್ಥಾನದ ಸುತ್ತಲಿನ ಗಿಡಗಂಟಿ ತೆರವು
-ಮಂದಿರ, ಚರ್ಚ್, ಮಸೀದಿಗಳ ಒಳಾಂಗಣ ಆವರಣ ಸ್ವಚ್ಛತೆ
-ದೇವಸ್ಥಾನದ ಕಲ್ಯಾಣಿ, ಸಭಾಭವನ, ಅಶ್ವತ್ಥ ಕಟ್ಟೆ/ಅರಳಿಕಟ್ಟೆ ಸ್ವಚ್ಛ
-ಸ್ನಾನಕಟ್ಟೆ, ನದಿ ತೀರ ಪ್ಲಾಸ್ಟಿಕ್, ಬಟ್ಟೆಬರೆ ಕಸ ಎಸೆಯದಂತೆ ಜಾಗೃತಿ
-ಸಾರ್ವಜನಿಕ ಶೌಚಾಲಯ, ನಗರ ಸ್ವಚ್ಛತೆ, ಬೀದಿ ಸ್ವಚ್ಛತೆಗೆ ಒತ್ತು
-ವಸ್ತ್ರದ ಚೀಲ ಬಳಸುವಂತೆ ಜಾಗೃತಿ
-ಜಾತ್ರೆ, ವಿಶೇಷ ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ತಂಡ
-ತ್ಯಾಜ್ಯ ಎಸೆಯಲು ಬಿದಿರಿನ ಬುಟ್ಟಿ, ಡಸ್ಟ್ಬಿನ್, ತಗಡಿನ ಡಬ್ಬ ಸೂಚನೆ ಫಲಕ ಅಳವಡಿಕೆ
Advertisement
ಶ್ರದ್ಧಾ ಕೇಂದ್ರಗಳು– ದೇವಸ್ಥಾನ 8,824
-ಚರ್ಚ್ 68 ಮಸೀದಿ 151
– ಬಸದಿ 20 ಇತರ 138
ಒಟ್ಟು 9,201