Advertisement

ಸಾಲಿಗ್ರಾಮ ಗುರುನರಸಿಂಹ ದೇಗುಲ:ಅದ್ದೂರಿ ಜಾತ್ರೆ

11:12 PM Jan 17, 2020 | Sriram |

ಕೋಟ: ಪುರಾಣ ಪ್ರಸಿದ್ಧ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಜಾತ್ರೆ ಜ.17ರಂದು ಜರಗಿತು. ಈ ಸಂದರ್ಭ ಬ್ರಹ್ಮರಥಕ್ಕೆ ಪೂರ್ವಭಾವಿಯಾಗಿ ಬೆಳಗ್ಗೆ ಸಾವಿರಾರು ಭಕಾದಿಗಳ ಸಮ್ಮುಖದಲ್ಲಿ ರಥಾರೋಹಣ ಕಾರ್ಯಕ್ರಮ ನೆರವೇರಿತು.

Advertisement

ಈ ಪ್ರಯುಕ್ತ ಜ.15ರಿಂದ ನರಸಿಂಹ ಹೋಮ, ಗಣಹೋಮ, ರಜತ ರಥೋತ್ಸವ, ಧ್ವಜಾರೋಹಣ, ವೇದ ಪಾರಾಯಣ, ಸುತ್ತು ಸೇವೆ, ರಜತಪಲ್ಲಕಿ ಉತ್ಸವ, ಕಟ್ಟೆ ಓಲಗ, ಹಿರಿರಂಗಪೂಜೆ, ಪುಷ್ಪರಥೋತ್ಸವ ಮುಂತಾದ ಕಾರ್ಯಕ್ರಮಗಳು ನಡೆದಿದ್ದು, ಜ.17ರಂದು ಬೆಳಗ್ಗೆ ಹೋಮ, ರಥಶುದ್ಧಿ ಕಲಶಾಭಿಶೇಕ ಮುಂತಾದ ಉತ್ಸವಾದಿ ಕಾರ್ಯಕ್ರಮಗಳ ಅನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ರಥದಲ್ಲಿರಿಸಿ ವೇದಘೋಷದೊಂದಿಗೆ ಆಂಜನೇಯ ದೇವಸ್ಥಾನದವರೆಗೆ ರಥಾರೋಹಣಗೈಯಲಾಯಿತು.

ಭಕ್ತಾದಿಗಳು ಆಂಜನೇಯ ಹಾಗೂ ಗುರುನರಸಿಂಹನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಅನ್ನಸಂತರ್ಪಣೆ ಮತ್ತು ಪಾನಕ, ಪನಿವಾರ ಸೇವೆ ನಡೆಯಿತು.

ಗುರುನರಸಿಂಹ ದೇವಸ್ಥಾನವನ್ನು ದೇಗುಲದ ವತಿಯಿಂದ ಹಾಗೂ ಆಂಜನೇಯ ದೇವಸ್ಥಾನವನ್ನು ಆಂಜನೇಯ ಸೇವಾ ಟ್ರಸ್ಟ್‌ ವತಿಯಿಂದ ವಿಶೇಷ ಹೂವಿನ ಅಲಂಕಾರದಿಂದ ಶೃಂಗರಿಸಲಾಯಿತು.

ಕಾರಂತ ಬೀದಿಯ ದಕ್ಷಿಣಭಾಗವನ್ನು ಬನಶ್ರೀ ಫ್ರೆಂಡ್ಸ್‌ ವತಿಯಿಂದ ಹಾಗೂ ಉತ್ತರ ಭಾಗವನ್ನು ಸ್ಥಳೀಯ ಭಕ್ತಾದಿಗಳ ವತಿಯಿಂದ ವಿದ್ಯುತ್‌ ದೀಪದಿಂದ ಶೃಂಗರಿಸಲಾಗಿತ್ತು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರು, ತಂತ್ರಿಗಳು, ಜೋಯಿಸರು, ಅರ್ಚಕರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Advertisement

ಉತ್ಸವಾದಿ ಕಾರ್ಯಕ್ರಮಗಳ ಅನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ರಥದಲ್ಲಿರಿಸಿ ಭಕ್ತಾದಿಗಳ ಹರ್ಷಘೋಷದೊಂದಿಗೆ ಆಂಜನೇಯ ದೇವಸ್ಥಾನದ ವರೆಗೆ ರಥಾರೋಹಣಗೈಯಲಾಯಿತು. ಭಕ್ತಾದಿಗಳು ಆಂಜನೇಯ,ಗುರುನರಸಿಂಹನ ದರ್ಶನ ಪಡೆದು ಪೂಜೆ ಪುನೀತರಾದರು.

Advertisement

Udayavani is now on Telegram. Click here to join our channel and stay updated with the latest news.

Next