Advertisement
ಭಕ್ಷ್ಯ ಸಮಾಚಾರ– ನಿತ್ಯ ಉಪಾಹಾರ ಉಪ್ಪಿಟ್ಟು
– ಊಟಕ್ಕೆ ಅನ್ನ- ಸಾಂಬಾರು, ಜೋಳದ ಅಂಬಲಿ, ಉಪ್ಪಿನಕಾಯಿ, ಚಟ್ನಿ, ಶೇಂಗಾ ಪುಡಿ.
– ಮಠದ ಮೂಲ ಪದ್ಧತಿಯಂತೆ ನಿತ್ಯವೂ ಜೋಳದ ಅಂಬಲಿಯ ವಿತರಣೆ.
– ವಿಶೇಷ ಸಂದರ್ಭದಲ್ಲಿ ಸಿಹಿ ಸಿರಾ, ಗೋಧಿ ಹುಗ್ಗಿ, ಪುಡಿ ಚಟ್ನಿ ಇರುತ್ತದೆ.
– ಟೊಮೇಟೊ, ಸೌತೆಕಾಯಿ, ಗಜ್ಜರಿ, ಬದನೆಕಾಯಿ- ಹೆಚ್ಚು ಬಳಕೆಯಾಗುವ ತರಕಾರಿಗಳು.
ಗವಿಮಠದ ಪಕ್ಕದಲ್ಲೇ ಮಹಾ ಪ್ರಸಾದ ನಿಲಯದ್ದು, ಕೆಳ ಹಾಗೂ ಮೇಲ್ಮಹಡಿಯಲ್ಲಿ ಟೇಬಲ್ ಊಟದ ವ್ಯವಸ್ಥೆಯಿದೆ. ಏಕಕಾಲದಲ್ಲಿ 4 ಸಾವಿರಕ್ಕೂ ಹೆಚ್ಚು ಭಕ್ತರು, ಅನ್ನ ಪ್ರಸಾದ ಸವಿಯಬಹುದು. ನಿತ್ಯ ಎಷ್ಟು ಮಂದಿಗೆ ಭೋಜನ?
ಇಲ್ಲಿ ನಿತ್ಯ 2500-3000 ಭಕ್ತರು ಅನ್ನಪ್ರಸಾದ ಸವಿಯುತ್ತಾರೆ. ಸೋಮವಾರ ಈ ಸಂಖ್ಯೆ 4 ಸಾವಿರವನ್ನು ಮೀರುತ್ತದೆ. ಅಮಾವಾಸ್ಯೆ ದಿನದಂದು 25 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸವಿದ ದಾಖಲೆ ಇಲ್ಲಿದೆ. ಜಾತ್ರಾ ಮಹೋತ್ಸವ ವೇಳೆ, ನಿತ್ಯ 2-3 ಲಕ್ಷ ಭಕ್ತರು ಭೋಜನಕ್ಕೆ ಸಾಕ್ಷಿಯಾಗುತ್ತಾರೆ.
Related Articles
ಇಲ್ಲಿ ಒಟ್ಟು 10 ಬಾಯ್ಲರ್‌ಗಳಿದ್ದು, ಸಾಂಬಾರ್ ಸಿದ್ಧಮಾಡಲು ಎರಡು ಬಾಯ್ಲರ್‌ಗಳು ಬಳಕೆಯಾಗುತ್ತವೆ. ಇಡ್ಲಿ ತಯಾರಿಕೆಗೂ ಇಲ್ಲಿ ಯಂತ್ರವಿದೆ. ಗ್ಯಾಸ್ ಸಿಲಿಂಡರ್ ಜೊತೆಗೆ ಸೋಲಾರ್ ವ್ಯವಸ್ಥೆ ಈ ಪಾಕಶಾಲೆಯ ಇಂಧನಶಕ್ತಿ. ಜಾತ್ರೆ ವೇಳೆ ತರಕಾರಿ ಕತ್ತರಿಸುವ ಯಂತ್ರ, ವಿಶೇಷವಾಗಿ ಬಳಕೆಯಾಗುತ್ತದೆ.
Advertisement
ಊಟದ ಸಮಯಬೆಳಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೂ, ಸಂಜೆ 7 ರಿಂದ ರಾತ್ರಿ 11 ಗಂಟೆ ವರೆಗೂ ಇಲ್ಲಿನ ಭೋಜನ ಪ್ರಸಾದ ವ್ಯವಸ್ಥೆಯಿದೆ. ಬುತ್ತಿ ಕಟ್ಟುವ ಸಂಪ್ರದಾಯ
ಗವಿಮಠಕ್ಕೆ ಪಾದಯಾತ್ರೆ ಬರುವ ಭಕ್ತರಿಗೆ ಅಥವಾ ಬೇರೆ ದೇವಸ್ಥಾನ, ಮಠಮಾನ್ಯಗಳಿಗೆ ಪಾದಯಾತ್ರೆ ತೆರಳುವ ಭಕ್ತರು ಆಗಮಿಸಿದರೆ, ಇಲ್ಲಿ ವಿಶೇಷ ಆದರಾತಿಥ್ಯ. ಮುಂದಿನ ಪಾದಯಾತ್ರೆಗೆ ಶುಭಹಾರೈಸುತ್ತಾ, ಅವರಿಗೆ ಬುತ್ತಿ ಕಟ್ಟಿ ಕಳಿಸುವ ಪದ್ಧತಿಯೂ ಇಲ್ಲಿದೆ. ವೃದ್ಧರಿಗೆ, ಗರ್ಭಿಣಿಯರಿಗೂ ಈ ಸೇವೆಯಿದೆ. ಸಂಖ್ಯಾ ಸೋಜಿಗ
2- ಬಾಣಸಿಗರಿಂದ ಕಾಯಂ ಸೇವೆ
4- ಕ್ವಿಂಟಲ್ ಅಕ್ಕಿ ಬಳಕೆ
10- ಬಾಯ್ಲರ್‌ಗಳಿಂದ ಅಡುಗೆ
50- ಕಿಲೋ ತರಕಾರಿ ಅವಶ್ಯ
2500- ಮಂದಿಗೆ ನಿತ್ಯ ಭೋಜನ
3,00,000- ಜಾತ್ರೆ ವೇಳೆ ಪ್ರಸಾದ ಸವಿಯುವ ಭಕ್ತರು
– ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು, ಸಂಸ್ಥಾನ ಗವಿಮಠ, ಕೊಪ್ಪಳ ಮಠಕ್ಕೆ ಬರುವ ಭಕ್ತರಿಗೆ ಭಕ್ತಿಯಿಂದ ಪ್ರಸಾದ ನೀಡುವುದೇ ನಮ್ಮ ಸೇವೆ. ಭಕ್ತರು ತಡರಾತ್ರಿ ಬಂದರೂ ಅವರಿಗೆ ಪ್ರಸಾದದ ವ್ಯವಸ್ಥೆಯ ಸೇವೆ ಮಾಡುತ್ತೇವೆ.
– ವೀರೇಶ, ನಿತ್ಯ ದಾಸೋಹ ಉಸ್ತುವಾರಿ – ದತ್ತು ಕಮ್ಮಾರ್