Advertisement
ಸಂಜೆ ಆರು ಗಂಟೆಗೆ ದೇವಸ್ಥಾನದ ಒಳಭಾಗದ ನಾಗ ಸನ್ನಿಧಿಯಲ್ಲಿ ಹಾಲಿಟ್ಟು ಸೇವೆ ನಡೆದ ಬಳಿಕ ಭ್ರಾಮರೀವನದಲ್ಲಿ ಸಗ್ರಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಮದ್ದೂರು ಕೃಷ್ಣ ಪ್ರಸಾದ ವೈದ್ಯ ಬಳಗದವರಿಂದ ನಾಗಮಂಡಲೋತ್ಸವ ನಡೆಯಿತು.
ಕಟೀಲಿಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಬೆಳಗ್ಗಿನಿಂದ ರಾತ್ರಿ 11.30ರ ವರೆಗೆ ಕಟೀಲು ರೂಟಿನಲ್ಲಿ ಸಂಚರಿಸುವ ಬಸ್‌ಗಳು ಉಚಿತ ಸೇವೆ ಒದಗಿಸಿದವು. ಕಟೀಲಿನ ಸುಮಾರು 36 ಆಟೋರಿಕ್ಷಾಗಳು ಉಚಿತ ಪ್ರಯಾಣ ಒದಗಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಇದಲ್ಲದೆ ಉಡುಪಿ, ಪುತ್ತೂರು, ಮಂಗಳೂರು ಮೊದಲಾದ ಕಡೆಗಳಿಂದಲೂ ಭಕ್ತರು, ಸಂಘಸಂಸ್ಥೆಗಳು ಭಕ್ತರಿಗಾಗಿ ಉಚಿತ ವಾಹನ ವ್ಯವಸ್ಥೆ ಮಾಡಿದ್ದರು.
Related Articles
ದೇವಸ್ಥಾನದಲ್ಲಿ ಶನಿ ವಾರ ಬೆಳಗ್ಗೆ ಒಳಗಿನ ನಾಗಸನ್ನಿಧಿಯಲ್ಲಿ ಕಲಶಾ ಭಿಷೇಕ, ತಿಲಹೋಮ, ಕೂಷ್ಮಾಂಡ ಹೋಮ, ಪವ ಮಾನ ಹೋಮ, ಸರ್ಪತ್ರಯ ಮಂತ್ರ ಹೋಮ ಮೊದಲಾದ ಧಾರ್ಮಿಕ ವಿಧಿವಿಧಾನಗಳು ನಡೆದವು.
Advertisement
ಇಂದು ಕೋಟಿ ಜಪ ಯಜ್ಞಮಾರ್ಕಂಡೇಯ ಪುರಾಣದಲ್ಲಿ ಉದ್ಧರಿಸಲ್ಪಟ್ಟ ದೇವೀಮಹಾತ್ಮೆಯ ಸ್ತುತಿ ಶ್ಲೋಕವೊಂದನ್ನು ಭಕ್ತರೆಲ್ಲರೂ ಸೇರಿ ಕೋಟಿಸಂಖ್ಯೆಗಳಲ್ಲಿ ಜಪಿಸಲು ಕಟೀಲು ದುರ್ಗಾ ಪರಮೇಶ್ವರೀ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಸಂಕಲ್ಪಿಸಿತ್ತು. ಸುಮಾರು 30 ಸಾವಿರ ಭಕ್ತರು ಇದರ ದೀಕ್ಷೆ ಪಡೆದಿದ್ದಾರೆ. ರವಿವಾರ ಬೆಳಗ್ಗೆ 6ರಿಂದ ಸಂಜೆ 6ರ ತನಕ ಕೋಟಿ ಜಪಕ್ಕೆ ನೋಂದಣಿ ಮಾಡಿದವರು ಭ್ರಾಮರೀ ವನದ ಕೌಂಟರ್‌ನಲ್ಲಿ ಕುಂಕುಮ ಪಡೆದು ಮಂತ್ರಪಠಣ ಮಾಡಿ ಭ್ರಾಮರೀ ವನದಲ್ಲಿ ಕುಂಕುಮ ನೀಡಿ ಬಳಿಕ ಪ್ರಸಾದ ಪಡೆಯಬಹುದು.