Advertisement
ಅನಂತರ ಅವಗಾಹ ಮತ್ತು ಸೇಕ ಶುದ್ಧಿ, ರುದ್ರಯಾಗ, ಶಾಸ್ತ್ರಬಿಂಬಶುದ್ಧಿ, ಮನ್ಯುಸೂಕ್ತಹೋಮ, ಪಂಚದುರ್ಗಾ ಹೋಮಗಳು, ರಾತ್ರಿಸೂಕ್ತ ಹೋಮ, ಒಳಗಿನ ನಾಗ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಜರಗಿದವು.
ರವಿವಾರ ಗಣರಾಜ್ಯೋತ್ಸವದ ದಿನ ಮತ್ತು ರಜೆ ದಿನವಾಗಿದ್ದು ಸುಮಾರು 90 ಸಾವಿರಕ್ಕೂ ಅಧಿಕ ಜನರು ದೇವಸ್ಥಾನಕ್ಕೆ ಭೇಟಿ, ದೇವಿಯ ದರ್ಶನ ಪಡೆದರು. ವಿಟ್ಲ, ಸಾಲೆತ್ತೂರು ಹಾಗೂ ವಿವಿಧ ಕಡೆಗಳಿಂದ ಹೊರೆಕಾಣಿಕೆ ಸಮರ್ಪಣೆಯಾಗಿದೆ. ಉಡುಪಿ, ಮೂಲ್ಕಿ ಭಾಗದ ಬರುವ ಭಕ್ತರು ಕಿನ್ನಿಗೋಳಿಯಿಂದ ಉಲ್ಲಂಜೆ ರಸ್ತೆಯಲ್ಲಿ ಬಂದು ಮಲ್ಲಿಗೆಯಂಗಡಿ ಮಾಂಜ ದಲ್ಲಿ ವಿಶಾಲವಾದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲು ಅವಕಾಶವಿದೆ. ದೇವಸ್ಥಾನದಲ್ಲಿ ಹೋಗುವ ಹೊಸ ಸೇತುವೆಯ ಇಕ್ಕೆಲಗಳಲ್ಲಿ ಶ್ರೀದೇವಿ ಪುರಾಣವನ್ನು ಸಾರುವ ತೈಲ ಚಿತ್ರಗಳ ಅನಾವರಣಗೊಂಡಿದೆ. ಭ್ರಾಮರೀ ವನದಲ್ಲಿ ಪಕ್ಕದ ನದಿಯಲ್ಲಿ ಎರಡು ಕಾರಂಜಿಗಳು ಅಳವಡಿಸಲಾಗಿದ್ದು, ರಾತ್ರಿಯ ಹೊತ್ತಿನಲ್ಲಿ ವಿದ್ಯುತ್ ದೀಪದಲ್ಲಿ ವರ್ಣರಂಜಿತವಾಗಿ ಕಂಗೊಳಿಸುತ್ತಿದೆ. ರವಿವಾರ ದೇವ ಸ್ಥಾನಕ್ಕೆ ಬೆಳಗ್ಗೆನಿಂದಲೇ ಭಕ್ತರು ಆಗಮಿಸುತ್ತಿ ರುವುದು ಕಂಡು ಬಂತು.
Related Articles
Advertisement
ಭೋಜನಕ್ಕೆ 10 ಕೌಂಟರ್ಭೋಜನ ಶಾಲೆಯಲ್ಲಿ ಬೆಳಗ್ಗಿನ ಫಲಾಹಾರಕ್ಕೆ 10 ಕೌಂಟರ್‌ಗಳು, ಮಧ್ಯಾ ಹ್ನದ ಭೋಜನಕ್ಕೆ 10 ಕೌಂಟರ್ ಹಾಗೂ 20, 30 ಸಾಲುಗಳಲ್ಲಿ 2,000 ಸಾವಿರ ಜನರು ಕುಳಿತು ಊಟ ಮಾಡುವ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಸುಮಾರು 2,000 ಸಾವಿರ ಸ್ವಯಂಸೇವಕರು ಧಾರ್ಮಿಕ ಕಾರ್ಯದ ವ್ಯವಸ್ಥೆಯನ್ನು ಯಶಸ್ವಿಗೊಳಿಸುವಲ್ಲಿ ಸಹಕಾರ ನೀಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ
27ರಂದು ಬೆಳಗ್ಗೆ ಹರಿದಾಸ್ ದೋಗ್ರ ಮತ್ತು ಬಳಗದವರಿಂದ ಸ್ಯಾಕೊÕàಫೋನ್, ಡಾ| ಎಸ್.ಪಿ. ಗುರುದಾಸ್‌ರಿಂದ ಹರಿಕಥೆ, ಮಧ್ಯಾಹ್ನ ಪ್ರತಿಮಾ ಶ್ರೀಧರ್ ಬಳಗದಿಂದ ಭರತನಾಟ್ಯ, ಮಧ್ಯಾಹ್ನ 3ರಿಂದ ಕನಕದಾಸರು ಹಾಡುಗಳ ಪ್ರಸ್ತುತಿ ಕರ್ನಾಟಕ ಕಲಾಶ್ರೀ ಮೈಸೂರು ಡಾ| ನಂದಕುಮಾರ್ ಮತ್ತು ಬಳಗದವರಿಂದ ನಡೆಯಲಿದೆ. ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ , ಉಪನ್ಯಾಸ ಮಾಲಿಕೆ ರಾತ್ರಿ 7 ರಿಂದ ಪದ್ಮವಿಭೂಷಣ, ಸಂಗೀತ ಕಲಾನಿಧಿ ಡಾ| ಉಮಯಾಳ ಪುರಂ ಶಿವರಾಮನ್‌ಅವರಿಂದ ಲಯವಿನ್ಯಾಸ ಜ್ವಾಲಾ, ರಾತ್ರಿ 9ರಿಂದ ಮೋಹಿನಿ ಆಟ್ಟಂ ತ್ರಿಚ್ಚುರ್ ವಿ| ಪಲ್ಲವಿ ಕೃಷ್ಣನ್ ಮತ್ತು ಬಳಗದವರಿಂದ ನಡೆಯಲಿದೆ. ಇಂದಿನ ಕಾರ್ಯಕ್ರಮ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆರನೇ ದಿನವಾದ ಸೋಮವಾರ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.ಬೆಳಗ್ಗೆ 5ರಿಂದ ದುರ್ಗಾಶಾಂತಿಹೋಮ, ಶಾಸ್ತ್ರ ಶಾಂತಿಪ್ರಾಯಶ್ಚಿತ್ತಗಳು , ಭ್ರಾಮರೀವನದಲ್ಲಿ ತತ್ತÌಹೋಮ, ಶಾಂತಿ ಪ್ರಾಯಶ್ಚಿತ್ತಗಳು, ಕಲಶಾಭಿಷೇಕ, ಬುಧಯಾಗ, ಸಹಸ್ರಚಂಡಿಕಾಸಪ್ತಶತೀಪಾರಾಯಣ, ಕೋಟಿಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ.ಸಂಜೆ 5ರಿಂದ ಭದ್ರಕಮಂಡಲಪೂಜೆ, ಅರ್ಚನೆ, ಮಹಾಬಲಿಪೀಠ ಮತ್ತು ಕ್ಷೇತ್ರಪಾಲ ಕಲಶಾಭಿಷೇಕ, ದಿಶಾಹೋಮಗಳು, ಚೋರಶಾಂತಿ, ಉತ್ಸವಬಲಿ ನಡೆಯಲಿದೆ.