Advertisement

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ

08:14 PM Sep 28, 2019 | Sriram |

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆ. 29ರಿಂದ ಅ. 7ರ ವರೆಗೆ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ.

Advertisement

ಅ. 3ರಂದು ಲಲಿತಾ ಪಂಚಮಿ 5ರಂದು ಮೂಲನಕ್ಷತ್ರ, 6ರಂದು ದುರ್ಗಾಷ್ಟಮಿ, 7ರಂದು ಮಹಾನವಮಿ, 8ರಂದು ವಿಜಯ ದಶಮಿ, ಮಧ್ವಜಯಂತಿ ವಿಶೇಷ ದಿನಗಳಾಗಿದೆ. ಪ್ರತೀ ದಿನ ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ. 29ರಂದು ಭರತನಾಟ್ಯ ಕಾರ್ಯಕ್ರಮ, ಸೆ. 30ರಂದು ಹಿಂದುಸ್ಥಾನಿ ಶಾಸ್ತ್ರೀಯ ಗಾಯನ, ಅ. 1ರಂದು ಗಾನ ಜ್ಞಾನ, ಅ. 2ರಂದು ಭಕ್ತಿ ಸಂಗೀತ, ಅ. 3ರಂದು ಪಂಚ ವೀಣಾ ವಾದನ, ಅ. 4ರಂದು ಭರತನಾಟ್ಯ, ಅ. 5ರಂದು ಯಕ್ಷಗಾನ ಪ್ರದರ್ಶನ, ಅ. 6ರಂದು ಬಡಗುತಿಟ್ಟು ಯಕ್ಷಗಾನ ಶ್ರೀ ರಾಮಾನುಗ್ರಹ, ಅ. 7ರಂದು ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಪ್ರತೀ ದಿನ ದೇಗುಲ ದಲ್ಲಿ ಬೆಳಗ್ಗೆ 9ರಿಂದ ವಿವಿಧ ಭಜನ ತಂಡಗಳಿಂದ ಭಜನೆ, 7ರಿಂದ ಉಪನ್ಯಾಸ, 7.30ರಿಂದ 10ರ ವರೆಗೆ ಯಕ್ಷಗಾನ ಬಯಲಾಟ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next