Advertisement

ಇಂದಿನಿಂದ ಶ್ರೀದುರ್ಗಮ್ಮ-ಮರ್ಗಮ್ಮ ದೇವಿ ಮಹೋತ್ಸವ

02:22 PM Mar 23, 2021 | Team Udayavani |

ಹುಣಸೂರು: ನಗರದ ಸರಸ್ವತಿಪುರಂ ಬಡಾವಣೆಯ ಮಂದಿಯ ಆರಾಧ್ಯ ದೈವ ಶಕ್ತಿದೇವತೆ ಶ್ರೀದುರ್ಗಮ್ಮ-ಮರ್ಗಮ್ಮ ದೇವಿಯ114ನೇ ವಾರ್ಷಿಕೋತ್ಸವ ಹಾಗೂ ಅಡ್ಡ ಪಲ್ಲಕ್ಕಿಉತ್ಸವವು ಮಂಗಳವಾರದಿಂದ ಮೂರು ದಿನಗಳಕಾಲ ಜರುಗಲಿದೆ.

Advertisement

ಸಾಕಿ ನೈವೇದ್ಯ: ಮಾ.23 ರಿಂದ 25ರವರೆಗೆ ನಡೆಯುವ ಹಬ್ಬಕ್ಕಾಗಿ ಮೊದಲ ದಿನ ಮಾ.23ರಮಂಗಳವಾರದಂದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆ ದೇವಿಗೆತಂಪು ನೀಡುವ ಸಾಕಿ(ಮದ್ಯ)ಯನ್ನುತಂದು ಅಶ್ವತ್ಥಕಟ್ಟೆಗೆ ತಂದು ಪೂಜೆಸಲ್ಲಿಸಿ, ಅಲ್ಲಿಂದ ಹೆಂಗಳೆಯರುಮಡಕೆಯಲ್ಲಿ ಸಾಕಿಮದ್ಯದನೈವೇದ್ಯವನ್ನು ದೇವಸ್ಥಾನಕ್ಕೆತಂದು ದೇವರಿಗೆ ಸಮರ್ಪಿಸುವರು.

ಅಡ್ಡಪಲ್ಲಕ್ಕಿ ಉತ್ಸವ, ಕಟ್ಟು ಅರ್ಪಣೆ: ಅದೇ ದಿನಸಂಜೆ 4 ಗಂಟೆಗೆ ಅಲಂಕರಿಸಿದ ಹೂವಿನಪಲ್ಲಕ್ಕಿ ಯಲ್ಲಿ ದುರ್ಗಮ್ಮ – ಮರ್ಗಮ್ಮ ದೇವಿಯರ ಉತ್ಸವ ಮೂರ್ತಿಯನ್ನು ಲಕ್ಷ್ಮಣತೀರ್ಥನದಿ ತಟಕ್ಕೆ ತಂದು, ಹೋಮ -ಹವನ ನಡೆಸಿದ ನಂತರ ಪೂಜೆ ಸಲ್ಲಿಸಿ,ರಾಜಬೀದಿಗಳಲ್ಲಿ ಮಂಗಳವಾದ್ಯ, ಡೊಳ್ಳುಕುಣಿತ, ನಗಾರಿ, ತಮಟೆ, ಪಟಾಕಿ ಸದ್ದಿನೊಂದಿಗೆಭವ್ಯಮೆರೆವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಲಿದೆ.

ಬಡಾವಣೆ ಮಂದಿ ಪೂಜೆ ಸಲ್ಲಿಸಿದ ನಂತರ ಮದ್ಯರಾತ್ರಿ ಮಾರಮ್ಮದೇವಿಗೆ ನಾಲ್ಕು ಮೂಲೆಗಳಲ್ಲಿ ಬಲಿ ಅನ್ನ ನೈವೇದ್ಯ(ಕಟ್ಟು) ಸಲ್ಲಿಸುವರು. ಮಡಿಯಲ್ಲಿ ತಂಬಿಟ್ಟಿನ

ಆರತಿ: ಮಾ.24ರಂದು ಬುಧವಾರ ಮುಂಜಾನೆ5.30ಕ್ಕೆ ಪ್ರತಿ ಮನೆಯಿಂದಕಣಗಲೆಹೂವಿನಿಂದ ಅಲಂಕರಿಸಿದತಂಬಿಟ್ಟುನ್ನು ತಲೆಮೇಲೆ ಹೊತ್ತುಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಆಗಮಿಸಿ ತಂಪು ಸಲ್ಲಿಸುವರು. ಈ ವೇಳೆ ಸಾಕಿನೈವೇದ್ಯವನ್ನು ಭಕ್ತರಿಗೆ ವಿತರಿಸುವರು.

Advertisement

ನಾಡಿದ್ದು ಓಕುಳಿ ಸಂಭ್ರಮ: ಮಾ.25ಗುರುವಾರ ಬೆಳಗ್ಗೆ 8ರಿಂದ ಸಂಜೆವರೆಗೂ ಬಡಾವಣೆಯಪ್ರತಿಮನೆ ಬಳಿಯೂ ಮಕ್ಕಳು, ಹೆಂಗಸರು-ದೊಡ್ಡವರಾದಿಯಾಗಿ ಬಣ್ಣದ ಓಕುಳಿ ಆಡುವರು.

ಇದೇ ವೇಳೆ ಬಡಾವಣೆಯ ಹೊಸ ಅಳಿಯಂದಿರಿಗೆ ನೀರು ಹಾಕುವ ಪದ್ಧತಿ ಇದೆ.9ನೇ ದಿನಕ್ಕೆ ಮರಪೂಜೆ ಸಲ್ಲಿಸಿ, ಬಡಾವಣೆಮಂದಿಗೆ ಹಾಗೂ ನೆಂಟರು, ಸ್ನೇಹಿತರು, ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಸುವರು.ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿಉತ್ಸವ-ಪೂಜೆಗಳಲ್ಲಿ ಭಾಗವಹಿಸುವ ಎಲ್ಲರೂಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದುಸೇವಾಸಮಿತಿಯ ಮುಖ್ಯಸ್ಥರು ಮನವಿ ಮಾಡಿದ್ದಾರೆ.

ಅಕ್ಕ-ತಂಗಿಯ ಇತಿಹಾಸ: ಶ್ರೀದುರ್ಗಮ್ಮ- ಮರ್ಗಮ್ಮ ದೇವಿಯರು ಅಕ್ಕ-ತಂಗಿಯಾಗಿದ್ದು,ಚಿಕ್ಕಹೆಂಚಿನ ಗುಡಿಯಲ್ಲಿದ್ದ ದೇವಾಲಯವು 12ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡುಭವ್ಯದೇವಾಲಯ ನಿರ್ಮಿಸಿದ್ದಾರೆ. ಇಡೀಬಡಾವಣೆಯ ಮಂದಿ ಒಟ್ಟಾಗಿ ಸೇರಿ ಆಚರಿಸುವಈ ಹಬ್ಬವನ್ನು ಪ್ರತಿವರ್ಷ ಶಿವರಾತ್ರಿ ನಂತರಯುಗಾದಿಗೂ ಮುನ್ನ ಅಡ್ಡಪಲ್ಲಕ್ಕಿ ಉತ್ಸವವನ್ನುಕಳೆದ 113 ವರ್ಷಗಳಿಂದ ಶ್ರದ್ಧೆª-ಭಯ-ಭಕ್ತಿಯಿಂದ ಆಚರಿಸುವರು. ಹಬ್ಬಕ್ಕೆ ತಮ್ಮನೆಂಟರಿಷ್ಟರನ್ನು ಆಹ್ವಾನಿಸಿ, ಆತಿಥ್ಯ ನೀಡುವ ಸಂಪ್ರದಾಯ ಬೆಳೆದು ಬಂದಿದೆ.

ವಾರಕಾಲ ಮಾಂಸದ ಅಡುಗೆ, ಮದ್ಯ ನಿಷೇಧ : ದೇವಿಯ ಉತ್ಸವ ಆಚರಿಸುವ ವಾರದಮೊದಲು ತಾಲೂಕಿನ ರಾಮಪಟ್ಟಣದಮಹದೇಶ್ವರ ದೇವಾಲಯಕ್ಕೆ ತೆರಳಿ ಪೂಜೆಸಲ್ಲಿಸಿ, ವರ ಪಡೆದುಕೊಂಡು ಉತ್ಸವದದಿನವನ್ನು ಬಡಾವಣೆಯ ಯಜಮಾನರು ನಿಗದಿಪಡಿಸುತ್ತಾರೆ. ಅಂದಿನಿಂದ ವಾರಕಾಲ ಇಲ್ಲಿನ ಕುಟುಂಬಗಳು ಅಡುಗೆಯಲ್ಲಿ ಒಗ್ಗರಣೆ ಹಾಕಲ್ಲ, ಮಾಂಸದ ಅಡುಗೆ ಮಾಡುವುದಿಲ್ಲ, ಮದ್ಯ ಸೇವಿಸಲ್ಲ, ಪ್ರತಿ ಮನೆಗೂ ಸುಣ್ಣ-ಬಣ್ಣ ಹೊಡೆಸುತ್ತಾರೆ. ಎಲ್ಲರೂ ಹೊಸಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ಇಡೀ ಬಡಾವಣೆ ಹಾಗೂ ಟಿಎಪಿಸಿಎಂಎಸ್‌ ರಸ್ತೆಯನ್ನು ಜಗಮಗಿಸುವವಿದ್ಯುತ್‌ದೀಪಗಳಿಂದ ಅಲಂಕರಿಸುತ್ತಾರೆ.ಬುಧವಾರದಂದು ಮಾಂಸದ ಅಡುಗೆ ಮಾಡಿ ನೆಂಟರಿಷ್ಟರೊಂದಿಗೆ ಸವಿಯುತ್ತಾರೆ.

 

-ಸಂಪತ್‌ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next