Advertisement

ತ್ಯಾಗಿಗಳ ಚಾತುರ್ಮಾಸಕ್ಕೆ ದಿನಸಿ ಕೊಡುಗೆ

03:52 PM Oct 20, 2017 | |

ಹಾಸನ: ಶ್ರವಣಬೆಳಗೊಳ ಪಟ್ಟಣದ ಜೈನ ಮಠಕ್ಕೆ ಹಾಸನ ದಿಗಂಬರ ಜೈನ ಸಮಾಜದ ವತಿಯಿಂದ ಕ್ಷೇತ್ರದಲ್ಲಿ ಚಾತುರ್ಮಾಸ ಆಚರಿಸುತ್ತಿರುವ ತ್ಯಾಗಿಗಳ ಆಹಾರ ದಾನಕ್ಕೆ 6 ಟನ್‌ ದವಸ ಧಾನ್ಯಗಳು ಹಾಗೂ ಹಣ್ಣು, ತರಕಾರಿಗಳನ್ನು ಕೊಡುಗೆಯಾಗಿ ನೀಡಲಾಯಿತು.

Advertisement

2018ರ ಫೆಬ್ರವರಿಯಲ್ಲಿ ನಡೆಯಲಿರುವ ಭಗವಾನ್‌ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿರುವ ಸುಮಾರು 84ಕ್ಕೂ ಹೆಚ್ಚು ತ್ಯಾಗಿಗಳು ಕ್ಷೇತ್ರದಲ್ಲಿ ಈ ಬಾರಿ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದಾರೆ. ಅವರ ಆಹಾರದ ವ್ಯವಸ್ಥೆಗಾಗಿ ಹಾಸನದ ದಿಗಂಬರ ಜೈನ ಸಮಾಜದ ವತಿಯಿಂದ ಆಹಾರ ಧಾನ್ಯಗಳನ್ನು ಕ್ಷೇತ್ರದ ಪೀಠಾಧಿಪತಿಗಳಾದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸಮರ್ಪಿಸಿದರು.

ಅಕ್ಕಿ, ಗೋಧಿ, ರವೆ, ಸಕ್ಕರೆ, ತುಪ್ಪ, ಎಣ್ಣೆ, ತೊಗರಿಬೇಳೆ, ಹೆಸರುಬೇಳೆ, ಅವಲಕ್ಕಿ, ಆಯಿಲ್‌, ಕಡ್ಲೆಬೇಳೆ, ಬೆಲ್ಲ, ಬ್ಯಾಡಗಿ ಮೆಣಸಿನ ಕಾಯಿ, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಉಪ್ಪು, ಅಲಸಂಡೆ, ಉದ್ದಿನಬೇಳೆ, ಶೇಂಗಾ ಬೀಜ, ಉರಿಗಡಲೆ, ಮಸಾಲೆ ಸಾಮಾನು, ಮುಸುಂಬಿ, ಸೇಬು, ದಾಳಿಂಬೆ, ಕಬೂìಜ, ಅನಾನಸ್‌, ಮಸೂರ್‌ ದಾಲ್‌, ತರಕಾರಿಗಳ ಸಹಿತ 6 ಟನ್‌ ಆಹಾರ ಸಾಮಗ್ರಿಗಳನ್ನು ದಾನವಾಗಿ ನೀಡಿದರು.

ಆಹಾರದ ಧಾನ್ಯಗಳನ್ನು ಸ್ವೀಕರಿಸಿದ ಆನಂತರ ಹಾಸನ ದಿಗಂಬರ ಸಮಾಜದ ಅಧ್ಯಕ್ಷರಾದ ಎಂ.ಅಜಿತ್‌ಕುಮಾರ್‌ ಅವರನ್ನು ಕ್ಷೇತ್ರದ ವತಿಯಿಂದ ಸಮ್ಮಾನಿಸಲಾಯಿತು. ಇದಕ್ಕೂ ಮುನ್ನ ಆಹಾರ ಧಾನ್ಯಗಳಿದ್ದ ವಾಹನಗಳ‌ನ್ನು ಮಂಗಳವಾದ್ಯದೊಂದಿಗೆ ಶ್ರೀಗಳು ಸ್ವಾಗತಿಸಿದರು.ಈ ವೇಳೆ ಹಾಸನ ಜೈನ ಸಮಾಜದ ಉಪಾಧ್ಯಕ್ಷ ಎಚ್‌.ಎನ್‌.ರವೀಂದ್ರ ಕುಮಾರ್‌, ಕಾರ್ಯದರ್ಶಿ ಎಚ್‌.ಎಸ್‌.ಸುರೇಶ್‌, ಜಂಟಿ ಕಾರ್ಯದರ್ಶಿ ಕೆ.ಜಿ.ಬ್ರಹೆ¾àಶ್‌, ನಿರ್ದೇಶಕರಾದ ಎಚ್‌.ಡಿ.ಬಾಹುಬಲಿ ಪ್ರಸಾದ್‌, ಎಸ್‌.ಡಿ.ಜಿನೇಶ್‌ ಪ್ರಸಾದ್‌, ಎಚ್‌.ಪಿ.ಪ್ರಕಾಶ್‌, ಕೇಸರಿ ರತ್ನರಾಜಯ್ಯ, ಸುಮಾ ಸುನಿಲ್‌ ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next