ಜೋಳಿಗೆ, ಹಾಲು ಕುಡಿಸುವ ಹಬ್ಬ, ಕಂಠ ಪಾಠ, ವೇಷಭೂಷಣ, ಭಾಷಣ, ವಚನ ಗಾಯನ ಒಳಗೊಂಡಂತೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
Advertisement
ಶ್ರಾವಣ ಮಾಸದ ಅಂಗವಾಗಿ ದಾವಣಗೆರೆ ವಿರಕ್ತ ಮಠದಲ್ಲಿ 1911ರಲ್ಲಿ ಶ್ರೀ ಮೃತ್ಯುಂಜಯ ಅಪ್ಪ ಮತ್ತು ಹಡೇìಕರ್ ಮಂಜಪ್ಪನವರು ಪ್ರವಚನ ಕಾರ್ಯಕ್ರಮ ಪ್ರಾರಂಭಿಸಿದರು. ಅಂದಿನಿಂದ ಈವರೆಗೆ ಪ್ರವಚನ ಕಾರ್ಯಕ್ರಮ ಆಯೋಜಿಸ ಲಾಗುತ್ತಿದೆ. ಶ್ರಾವಣ ಮಾಸದಲ್ಲಿ ಸದ್ವಿಚಾರ ಕೇಳುವುದು ಒಳ್ಳೆಯದು ಎಂಬ ಮಾತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂಚಮಿ, ಹಾಲು ಕುಡಿಸುವ ಹಬ್ಬ ದೊಡ್ಡಪೇಟೆಯ ಎಸ್.ಜೆ.ಎಂ. ಶಾಲೆಯಲ್ಲಿ ನಡೆಯಲಿದೆ. ಆ. 1ರಿಂದ ನಗರದ ವಿವಿಧ ಭಾಗದಲ್ಲಿ ಶ್ರೀ ಜಯದೇವ ಜೋಳಿಗೆ ಕಾರ್ಯಕ್ರಮ, ಆ. 14 ರಿಂದ 28ರ ವರೆಗೆ ವಿರಕ್ತ ಮಠದಲ್ಲಿ ಮಕ್ಕಳಿಗಾಗಿ ವಚನ ಕಂಠಪಾಠ ಸ್ಪರ್ಧೆ, ವಚನ ಗಾಯನ ಸ್ಪರ್ಧೆ, ಬಸವಾದಿ ಶರಣರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಸ್ಪರ್ಧೆ, ಭಾಷಣ ಸ್ಪರ್ಧೆ ನಡೆಯಲಿವೆ. 1 ರಿಂದ 10ನೇ ತರಗತಿ ಮಕ್ಕಳು ಭಾಗವಹಿಸುವರು ಎಂದು ತಿಳಿಸಿದರು.
Related Articles
ಶಿವಯೋಗ ಮತ್ತು ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು. ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಎಂ. ಜಯಕುಮಾರ್, ಎಸ್. ಓಂಕಾರಪ್ಪ, ಪಲ್ಲಾಗಟ್ಟೆ ಕೊಟ್ಟೂರೇಶಪ್ಪ, ಎಂ.ಕೆ. ಬಕ್ಕಪ್ಪ, ಜೆ. ಸೋಮನಾಥ್, ಅಂದನೂರು ಮುಪ್ಪಣ್ಣ, ಕುಂಟೋಜಿ ಚನ್ನಪ್ಪ, ಚಂದ್ರಶೇಖರಪ್ಪ ಇತರರಿದ್ದರು.
Advertisement