Advertisement

Shrama Shakthi Yojana ; ಶ್ರಮ ಶಕ್ತಿ ಯೋಜನೆಯ ಉದ್ದೇಶ, ಅರ್ಹರು ಯಾರು?

11:34 PM Aug 13, 2023 | Team Udayavani |

ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷಗಳು
– ರಾಜ್ಯದ ಖಾಯಂ ನಿವಾಸಿ, ಧಾರ್ಮಿಕ ಅಲ್ಪಸಂಖ್ಯಾಕ ವರ್ಗಕ್ಕೆ ಸೇರಿರಬೇಕು
– ಎಲ್ಲ ಮೂಲಗಳಿಂದ ಕೌಟುಂ ಬಿಕ ವಾರ್ಷಿಕ ಆದಾಯ ರೂ.3.50 ಲಕ್ಷ ದೊಳಗಿರಬೇಕು
– ಅರ್ಜಿದಾರರ ಕುಟುಂಬದ ಸದಸ್ಯರು ಕಳೆದ 5 ವರ್ಷಗಳಲ್ಲಿ ಕೆಎಂಡಿಸಿಎಲ್‌ನ ಇತರ ಯೋಜನೆಗಳ ಅಡಿಯಲ್ಲಿ (ಅರಿವು ಯೋಜನೆ ಹೊರತುಪಡಿಸಿ) ಪ್ರಯೋಜನ ಪಡೆದಿರಬಾರದು
– ರಾಜ್ಯ, ಕೇಂದ್ರ, ಸಾರ್ವಜನಿಕ ವಲಯದ ಸರಕಾರಿ ಉದ್ಯೋಗಿಯಾಗಿರಬಾರದು

Advertisement

ದಾಖಲೆಗಳು
ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಪ್ರಿಂಟ್‌ಔಟ್‌, ಫ‌ಲಾನುಭವಿಯ ಇತ್ತೀಚಿನ 2 ಪಾಸ್‌ಪೋರ್ಟ್‌ ಭಾವಚಿತ್ರ, ವ್ಯವಹಾರದ ಯೋಜನಾ ವರದಿ, ಬ್ಯಾಂಕ್‌ ಪಾಸ್‌ಬುಕ್‌, ಸ್ವಯಂ ಘೋಷಣೆ ನಮೂನೆ, ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌ ಪ್ರತಿ.

ಆಯ್ಕೆ ಪ್ರಕ್ರಿಯೆ
ಶ್ರಮ ಶಕ್ತಿ ಯೋಜನೆಗೆ ಸಂಬಂಧಿಸಿ ಸರಕಾರ ನೋಟಿಫಿಕೇಶ‌ನ್‌ ಹೊರಡಿಸಿದ ಬಳಿಕ ಜಿಲ್ಲೆ, ತಾಲೂಕು (ಕ್ಷೇತ್ರ)ಗಳಿಗೆ ಇಂತಿಷ್ಟು ಫ‌ಲಾನುಭವಿಗಳನ್ನು ಆಯ್ಕೆ ಮಾಡಬಹುದು ಎಂದು ನಿರ್ಣಯಿಸಲಾಗುತ್ತದೆ. ಇದರನ್ವಯ *  ವೆಬ್‌ಸೈಟ್‌ನಲ್ಲಿ ಅರ್ಹರು ಹೆಸರು ನೋಂದಾಯಿಸುವ ವೇಳೆ ಅಲ್ಲಿ ಕೇಳುವ ಜಿಲ್ಲೆ, ತಾಲೂಕು, ವಯಸ್ಸು, ಆದಾಯ ಸೇರಿದಂತೆ ಇನ್ನಿತರ ಮಾಹಿತಿ ಭರ್ತಿ ಮಾಡಬೇಕು. ಅರ್ಜಿಗಳು ನೋಂದಣಿ ಅನುಸಾರ ಆಯಾ ಜಿಲ್ಲೆ ಮತ್ತು ತಾಲೂಕು (ಕ್ಷೇತ್ರ)ಗಳಿಗೆ ವಿಂಗಡಣೆ ಆಗುತ್ತವೆ.
ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಾಮರ್ಶಿಸಿ (ಅರ್ಹವಲ್ಲದ್ದನ್ನು ತಿರಸ್ಕರಿಸಿ) ಸ್ಥಳೀಯ ಶಾಸಕರಿಗೆ ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಅಧಿಕಾರಿಗಳು ತಲುಪಿಸುತ್ತಾರೆ. ಶಾಸಕರು ಪರಾಮರ್ಶಿಸಿ ತಮ್ಮ ವಿವೇಚನೆಯಡಿ ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ನಿರ್ಧರಿಸಿ ಅಧಿಕಾರಿಗಳಿಗೆ ಕಳುಹಿಸುತ್ತಾರೆ.

ಎಲ್ಲ ಹಂತದ ಪರಿಶೀಲನೆ ಬಳಿಕ ನಿಗಮದಿಂದ ಫ‌ಲಾನುಭವಿಯ ಖಾತೆಗೆ ಹಣ ಜಮೆಯಾಗುತ್ತದೆ. ಅರ್ಜಿ ಸ್ಥಿತಿಯನ್ನು ವೆಬ್‌ಸೈಟ್‌ನಲ್ಲಿ ತಿಳಿಯಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 8277799990 ಸಂಖ್ಯೆಗೆ ಕರೆ ಮಾಡಬಹುದು. ಜತೆಗೆ ಆಯಾ ಜಿಲ್ಲೆಯ ಅಧಿಕಾರಿಗಳನ್ನು ಸಂಪರ್ಕಿಬಹುದು.

ಆಯ್ಕೆ ಸಮಿತಿಯಲ್ಲಿ ಯಾರ್ಯಾರು ?
ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಅಧ್ಯಕ್ಷರಾದರೆ, ಎಂಎಲ್‌ಸಿ ಸಹ ಅಧ್ಯಕ್ಷ, ಸದಸ್ಯರುಗಳಾಗಿ ತಹಶೀಲ್ದಾರ್‌, ತಾ.ಪಂ. ಇಒ, ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next