Advertisement

ಮಡಿದ ಕಾರ್ಮಿಕರಿಗೆ ಶ್ರದ್ಧಾಂಜಲಿ

08:24 AM May 12, 2020 | mahesh |

ದಾವಣಗೆರೆ: ಮಹಾರಾಷ್ಟ್ರದ ಔರಂಗಬಾದ್‌ ಬಳಿ 16 ವಲಸೆ ಕಾರ್ಮಿಕರ ಮೇಲೆ ರೈಲು ಹರಿದು ದುರ್ಮರಣಕ್ಕೀಡಾಗಿರುವುದು ಸೇರಿದಂತೆ ಹಸಿವು, ಕಾಲ್ನಡಿಗೆಯ ಬಳಲಿಕೆ ಮತ್ತಿತರ ಕಾರಣಗಳಿಂದ ಮಡಿದ ಕಾರ್ಮಿಕರಿಗೆ ಸೋಮವಾರ ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ) ಕಾರ್ಯಕರ್ತರು ಅಖೀಲ ಭಾರತ ಸಂತಾಪ ಸೂಚಕ ದಿನವನ್ನಾಗಿ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

Advertisement

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಕೈದಾಳ್‌ ಮಂಜುನಾಥ್‌ ಮಾತನಾಡಿ, ಸರ್ಕಾರ ಲಾಕ್‌ಡೌನ್‌ ಸಡಿಲಿಕೆಯ ನಡುವೆ ವಲಸೆ ಕಾರ್ಮಿಕರಿಗೆ ತಮ್ಮ ಸ್ವಗ್ರಾಮಗಳಿಗೆ ಮರಳಲು ಅಗತ್ಯ ಸಾರಿಗೆ ವ್ಯವಸ್ಥೆ ಮಾಡದೆ ಅನೇಕರ ಸಂಕಷ್ಟಕ್ಕೆ ಕಾರಣವಾಗುತ್ತಿದೆ. ಅನೇಕ ಕಡೆ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬಡ ವಲಸೆ ಕಾರ್ಮಿಕರ ಸಾವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೇ ನೇರ ಕಾರಣ. ಹೊರದೇಶದಲ್ಲಿರುವರನ್ನು ವ್ಯವಸ್ಥಿತವಾಗಿ ಕರೆದು ಕೊಂಡು ಬರುವ ಸರ್ಕಾರಗಳು ಇಲ್ಲೇ ಇರುವ ಬಡ ಕಾರ್ಮಿಕರನ್ನು ಅಕ್ಷರಶಃ ನಿರ್ಗತಿಕರನ್ನಾಗಿಸಿರುವುದು ಬೇಸರದ ಸಂಗತಿ ಎಂದು ದೂರಿದರು.

ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಪರಶುರಾಮ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next