ಮಡಿಕೇರಿ: ಪರಶಿವನನ್ನು ಧ್ಯಾನಿಸಿ ಭಜಿಸುವ ಮೂಲಕ ಮಹಾ ಶಿವರಾತ್ರಿಯನ್ನು ಕೊಡಗು ಜಿಲ್ಲೆಯಾ ದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು, ದಿನದ ಅಂಗವಾಗಿ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಮಡಿಕೇರಿಯ ಐತಿಹಾಸಿಕ ಹಿನ್ನೆಲೆಯ ಶ್ರೀ ಓಂಕಾರೇ ಶ್ವರ ದೇಗುಲದಲ್ಲಿ ಶಿವರಾತ್ರಿಯ ದಿನವಾದ ಶುಕ್ರವಾರ ಬೆಳಗ್ಗಿನಿಂದಲೆ ಶತರುದ್ರಾಭಿಷೇಕವನ್ನು ಒಳಗೊಂಡಂತೆ ವಿವಿಧ ಪೂಜಾ ಕೈಂಕರ್ಯಗಳು ಭಕ್ತಾದಿಗಳ ಸಮ್ಮುಖ ದಲ್ಲಿ ನೆರವೇರಿತು. ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು.
ಮೇಕೇರಿ ಶ್ರೀ ಗೌರಿಶಂಕರ ದೇವಾಲಯ- ಮೇಕೇರಿ ಗ್ರಾಮದ ಗೌರಿಶಂಕರ ದೇವಾಲಯದಲ್ಲಿ ಶ್ರದ್ಧಾ ಭಕ್ತಿಗ ಳಿಂದ ಶಿವರಾತ್ರಿ ಉತ್ಸವವನ್ನು ಆಚರಿಸಲಾಯಿತು.
ಶಿವರಾತ್ರಿಯ ದಿನದಂದು ಬೆಳಗ್ಗೆ ಮಂಗಳವಾದ್ಯ ಗಳೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ಗ್ರಾಮದ ಗಣೇಶ್ ಎಸ್ಟೇಟ್ ಬಳಿಯಿಂದ ಹೊರೆಕಾಣಿಕೆ ಮೆರವಣಿಗೆ ಪ್ರಾರಂಭ ಗೊಂಡು ನಂತರ ಕಾವೇರಿ ಬಡಾವಣೆ, ಸುಭಾಷ್ ನಗರ ಹಾಗೂ ಬಿಳಿಗೇರಿ ಜಂಕ್ಷನ್‌ನಿಂದ ದೇವಾಲಯಕ್ಕೆ ಹೊರೆಕಾಣಿಕೆಯೊಂದಿಗೆ ಮೆರವಣಿಗೆ ಆಗಮಿಸಿತು.
ಸಂಜೆ ಗ್ರಾಮದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ಅಲ್ಲದೆ ಜಾಗರಣೆಗಾಗಿ ವೈವಿಧ್ಯಮಯ ಕಾರ್ಯಕ್ರಮ ಗಳು ನಡೆದವು.
ಬೊಟ್ಲಪ್ಪ ದೇವಸ್ಥಾನ- ಕಡಗದಾಳು ಗ್ರಾಮದ ಬಳಿಯಲ್ಲಿ ನಿಸರ್ಗದ ನಡುವೆ ಇರುವ ಶ್ರೀ ಬೊಟ್ಲಪ್ಪ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಗ್ರಾಮಸ್ಥರ ಸಮ್ಮುಖ ದಲ್ಲಿ ಶ್ರದ್ಧಾ ಭಕ್ತಿಗಳಿಂದ ನೆರವೇರಿದವು.