Advertisement

Tollywood: ‘ಪುಷ್ಪ-2ʼ ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಲಿದ್ದಾರೆ ʼಸ್ತ್ರೀ-2ʼ ನಟಿ

01:28 PM Oct 22, 2024 | Team Udayavani |

ಹೈದರಾಬಾದ್:‌ ಅಲ್ಲು ಅರ್ಜುನ್ (‌Allu Arjun) ಅಭಿನಯದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ʼಪುಷ್ಪ-2ʼ (Pushpa 2) ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ.  ವರ್ಷದ ಕೊನೆಯಲ್ಲಿ ಸಿನಿಮಂದಿಗೆ ಭರ್ಜರಿ ಮನರಂಜನೆ ನೀಡುವ ನಿಟ್ಟಿನಲ್ಲಿ ʼಪುಷ್ಪ-2ʼ ರೆಡಿಯಾಗಿದೆ.

Advertisement

2022ರಲ್ಲಿ ತೆರೆಕಂಡ ʼಪುಷ್ಪʼ ಮೊದಲ ಭಾಗ ಪ್ಯಾನ್‌ ಇಂಡಿಯಾದಲ್ಲಿ ಮೋಡಿ ಮಾಡಿತ್ತು. ನಟನೆ, ಹಾಡು, ಡ್ಯಾನ್ಸ್‌, ಮಾಸ್ ಹೀಗೆ‌ ಎಲ್ಲ ವಿಭಾಗದಲ್ಲೂ ಸಿನಿಮಾ ಸಖತ್‌ ಸದ್ದು ಮಾಡಿ, ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿತ್ತು.

ʼಪುಷ್ಪʼ ಸಿನಿಮಾ ಸದ್ದು ಮಾಡುವುದರ ಜತೆಗೆ ಅದರಲ್ಲಿ ಐಟಂ ಸಾಂಗ್‌ ʼಊ ಅಂಟವಾʼಗೆ ಸೊಂಟ ಬಳುಕಿಸಿದ್ದ ನಟಿ ಸಮಂತಾ (Samantha Ruth Prabhu) ಕೂಡ ಸಖತ್‌ ಮಿಂಚಿದ್ದರು. ಈ ಹಾಡು ಯೂಟ್ಯೂಬ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿತ್ತು.

ಇದನ್ನೂ ಓದಿ: Arunita Kanjilal: ಮದುವೆಗೂ ಮುನ್ನ ಗರ್ಭಿಣಿಯಾದ ಖ್ಯಾತ ಗಾಯಕಿ..? ಫೋಟೋಸ್‌ ವೈರಲ್

ʼಪುಷ್ಪ-2ʼ ಸಿನಿಮಾದಲ್ಲೂ ಇದೇ ರೀತಿಯ ಸ್ಪೆಷೆಲ್‌ ಹಾಡೊಂದು ಇರಲಿದೆ ಎನ್ನುವ ಮಾತು ಆರಂಭದಿಂದಲೂ ಕೇಳಿ ಬರುತ್ತಿದೆ.

Advertisement

ʼಅನಿಮಲ್‌ʼ ನಟಿ ತೃಪ್ತಿ ದಿಮ್ರಿ (Triptii Dimri) ʼಪುಷ್ಪ-2ʼ ನಲ್ಲಿ ಸ್ಪೆಷೆಲ್‌ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದೀಗ ಬಾಲಿವುಡ್‌ನ ಖ್ಯಾತ ನಟಿ ಶ್ರದ್ಧಾ ಕಪೂರ್‌ (Shraddha Kapoor) ʼಪುಷ್ಪ-2ʼ ನಲ್ಲಿ ಸೊಂಟ ಬಳುಕಿಸಲಿದ್ದಾರೆ ಎಂದು ವರದಿಯಾಗಿದೆ.

ʼಸ್ತ್ರೀ-2ʼ ಮೂಲಕ ತೆಲುಗು ಭಾಷಾ ವಲಯದಲ್ಲೂ ಮಿಂಚಿರುವ ಶ್ರದ್ಧಾ ಕಪೂರ್‌ ʼಪುಷ್ಪ-2ʼ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ.

ಸುಕುಮಾರ್‌ ನಿರ್ದೇಶನದ ʼಪುಷ್ಪ-2ʼ ಈಗಾಗಲೇ ಎರಡು ಹಾಡುಗಳನ್ನು ರಿಲೀಸ್‌ ಮಾಡಿ ನಿರೀಕ್ಷೆ ಹೆಚ್ಚಿಸಿದೆ. ಅಲ್ಲು ಅರ್ಜುನ್‌ ಜತೆ ರಶ್ಮಿಕಾ ಮಂದಣ್ಣ, ಫಾಹದ್‌ ಫಾಸಿಲ್‌, ಡಾಲಿ ಧನಂಜಯ್‌, ಜಗದೀಶ್‌ ಪ್ರತಾಪ್‌ ಭಂಡಾರಿ, ಸುನಿಲ್‌ ಮುಂತಾದವರು ನಟಿಸಿದ್ದಾರೆ.

ಇದೇ ಡಿಸೆಂಬರ್‌ 6 ರಂದು ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next