Advertisement

Shraddha case ಆರೋಪಿ ಅಫ್ತಾಬ್‌ಗೆ 8 ತಾಸು ಒಂಟಿ ಕೋಣೆಯಿಂದ ಮುಕ್ತಿ

01:13 AM Mar 16, 2024 | Team Udayavani |

ಹೊಸದಿಲ್ಲಿ: ದೇಶದಲ್ಲೇ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್‌ ಅಮಿನ್‌ ಪೂನಾವಾಲನನ್ನು ದಿನಕ್ಕೆ 8 ಗಂಟೆಗಳ ಕಾಲ ಇತರ ಕೈದಿಗಳ ಜತೆ ಬಿಡ­ಬೇಕೆಂದು ದಿಲ್ಲಿ ಹೈಕೋರ್ಟ್‌ ಶುಕ್ರವಾರ ಆದೇ­ಶಿಸಿದೆ.

Advertisement

ಅಪಾ ಯಕಾರಿಯೆಂಬ ಕಾರಣಕ್ಕೆ ಅಫ್ತಾಬ್‌ ಬಂಧನವಾದಾಗಿನಿಂದಲೂ ಆತನನ್ನು ಏಕಾಂಗಿ­ಯಾಗಿ ಜೈಲಿನಲ್ಲಿ ಇಡಲಾಗಿತ್ತು. ಇದನ್ನು ಪ್ರಶ್ನಿಸಿ ಆತನ ವಕೀಲ ಹೈಕೋರ್ಟ್‌ ಮೊರೆ ಹೋಗಿದ್ದು, ಕನಿಷ್ಠಪಕ್ಷ ದಿನಕ್ಕೆ 2 ಗಂಟೆ­ಯಾದರೂ ಏಕಾಂಗಿ ಕೋಣೆಯಿಂದ ಹೊರ ಬಿಡುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್‌ ಈ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next