Advertisement

ಅಭಿರುಚಿಯ ಕೈಗನ್ನಡಿ ಶೋಕೇಸ್‌

02:21 AM Apr 20, 2019 | Sriram |

ಶೋಕೇಸ್‌ ಮನೆಗೆ ಕನ್ನಡಿಯಿದ್ದಂತೆ. ಅದನ್ನು ನೋಡಿ ಮನೆ ಮಂದಿಯ ಅಭಿರುಚಿಗಳನ್ನು ತಿಳಿಯಬಹುದು. ಮನೆ ಎಷ್ಟೇ ದೊಡ್ಡದಿದ್ದರೂ, ಸುಂದರವಾಗಿದ್ದರೂ ಮನೆಯ ಅಂದ ಹೆಚ್ಚಿಸುವುದ ಲೀವಿಂಗ್‌ ರೂಮ್‌, ಬೆಡ್‌ ರೂಮ್‌, ಸ್ಟಡಿ ರೂಮ್‌ನಲ್ಲಿರುವ ಶೋಕೇಸ್‌. ಶೋಕೇಸ್‌ ಇರುವುದೇ ಮನೆಯಲ್ಲಿರುವ ಸುಂದರ ವಸ್ತುಗಳಿಗಾಗಿ ಮತ್ತು ಮನೆ ಮಂದಿಯ ಹೆಮ್ಮೆಯ ಗುರುತುಗಳಿಗಾಗಿ ಎಂದರೆ ತಪ್ಪಾ ಗಲಾರದು.

Advertisement

ಶೋಕೇಸ್‌ ಮನೆಯ ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲ. ಅದು ಮನೆಯವರ ಅಭಿರುಚಿ, ಸೃಜನಶೀಲತೆಗೆ ಹಿಡಿದ ಕನ್ನಡಿಯೂ ಹೌದು. ಎಷ್ಟೇ ಬೆಲೆಯ ವಸ್ತಗಳನ್ನು ತಂದಿಟ್ಟರೂ ಅದು ಸುಂದರವಾಗಿ ಕಾಣಿಸುವುದು ನಾವು ಜೋಡಿಸುವ ರೀತಿಯಿಂದ ಹೊರತು ವಸ್ತಗಳಿಂದಲ್ಲ. ಆದ್ದರಿಂದ ಮನೆಯ ಶೋಕೇಸ್‌ ಅನ್ನು ಸುಂದರವಾಗಿ ಜೋಡಿಸುವುದು ಕೂಡಬಹುಮುಖ್ಯವಾಗಿರುತ್ತದೆ.

ಶೋಕೇಸ್‌ಗೆ ನೀಡುವ ಬಣ್ಣ ಮತ್ತು ಆಕೃತಿಯತ್ತ ಗಮನ ನೀಡಿ. ಮನೆಯ ಬಣ್ಣಕ್ಕೆ ಹೊಂದಿಕೆಯಾಗು ವಂಥ ಬಣ್ಣವನ್ನೇ ಶೋಕೇಸ್‌ಗೆ ನೀಡಿ. ವಿವಿಧ ಬಗೆಯ ರೆಡಿಮೇಡ್‌ ಶೋಕೇಸ್‌ಗಳಿದ್ದು ಮನೆಯ ವಿನ್ಯಾಸ ಮತ್ತು ಗೋಡೆಗೆ ಹೊಂದಿಕೆಯಾಗುವಂಥದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಮರ, ಅಲ್ಯೂಮಿನಿಯಂ, ಗಾಜಿನ ಶೋಕೇಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಶೋಕೇಸ್‌ನಲ್ಲಿ
ಇಡ ಬಹುದಾದ ವಸ್ತಗಳು
ಮನೆಯ ಶೋಕೇಸ್‌ನಲ್ಲಿ ಜಾಗ ತುಂಬಿಸುವ ಕೆಲಸ ಮಾಡದೇ ಬೇಕೆನಿಸುವ ವಸಗಳ ನ್ನಷ್ಟೇ ಜೋಡಿಸಿ. ಮನೆಯಲ್ಲಿ ಮಕ್ಕಳು ಮಾಡಿದ ಕಲಾತ್ಮಕ ವಸ್ತುಗಳು, ಮನೆಯವರೇ ಮಾಡಿದ ಆಲಂಕಾರಿಕ ವಸ್ತುಗಳನ್ನು ಶೋಕೇಸ್‌ನಲ್ಲಿಡಬ ಹುದು. ಅದ್ಭುತ ಚಿತ್ರಗಳು, ಕಲಾತ್ಮಕ, ತುಂಬಾ ಹಳೆಯ, ಮಹತ್ವದ ವಸ್ತು, ಫೋಟೋ , ಮರದ ಕಲಾ ಕೃತಿಗಳನ್ನೂ ಇಲ್ಲಿಡಬಹುದು.

ನಿರ್ವಹಣೆ
ಮನೆಯಲ್ಲಿರುವ ಶೋಕೇಸ್‌ನ ಸರಿಯಾದ ನಿರ್ವಹಣೆ ಅಗತ್ಯ. ಅದರಲ್ಲಿ ಅಗತ್ಯಕ್ಕಿಂತ ಹೆಚ್ಚಾದ ವಸುಗಳಿದ್ದರೆ ತೆಗೆದು ಮತ್ತೆ ಹೊಸ ದಾಗಿ ಜೋಡಿಸಿಡುವುದು ಉತ್ತಮ. ಅಗತ್ಯವಿಲ್ಲದ ವಸ್ತುಗಳನ್ನು ತೆಗೆದಿಡಿ. ತುಂಬಾ ಹಳೆಯ ಹೆಚ್ಚು ಮಹತ್ವ ಪಡೆಯದ ವಸ್ತುಗಳನ್ನು ಲೀವಿಂಗ್‌ ರೂಮ್‌ನ ಶೋಕೇಸ್‌ನಲ್ಲಿಡ ಬೇಡಿ. ವಾರ ಕ್ಕೊ ಮ್ಮೆಯಾದರೂ ಶೋಕೇಸ್‌ ಅನ್ನು ಸ್ವತ್ಛ ಗೊಳಿಸಿ, ಜೋಡಿಸಿಟ್ಟಿ ರುವ ವಸ್ತುಗಳ ಮೇಲೆ ಧೂಳಿದ್ದರೆ ಅದನ್ನು ತೆಗೆಯಿರಿ.

Advertisement

ವಸ್ತುಗಳ ಜೋಡಣೆ
ಶೋಕೇಸ್‌ನಲ್ಲಿ ವಸ್ತುಗಳನ್ನು ತುಂಬುವ ಬದಲು ಬೇಕಾದ, ಸುಂದರವಾದ ವಸ್ತಗಳನ್ನು ಆಕರ್ಷಕವಾಗಿ ಜೋಡಿಸುವುದು ಅಗತ್ಯ. ಇರುವ ಸುಂದರ ವಸ್ತುಗಳನ್ನು ಸೃಜನಾತ್ಮಕವಾಗಿ ಜೋಡಿಸುವ ಮೂಲಕ ಶೋಕೇಸ್‌ ಅನ್ನು ಸುಂದರವಾಗಿಸಬಹುದು.

–  ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next