Advertisement

ಮ್ಯಾಕ್‌ಡೊನಾಲ್ಡ್ಸ್‌ಗೆ ಶೋಕಾಸ್‌ ನೊಟೀಸ್‌

09:34 AM Nov 23, 2019 | sudhir |

ಹೊಸದಿಲ್ಲಿ: ತಮ್ಮ ಫಾಸ್ಟ್ ಪುಡ್‌ ಬೇಡಿಕೆಯನ್ನು ಉತ್ತೇಜಿಸಲು ಜಾಹೀರಾತುಗಳಲ್ಲಿ ಹೊಸದಾಗಿ ಬೇಯಿಸಿದ ಆಹಾರ ಮತ್ತು ತರಕಾರಿಗಳನ್ನು ಅವಮಾನಿಸಿದ್ದಕ್ಕಾಗಿ ಆಹಾರ ನಿಯಂತ್ರಕ ಎಫ್ಎಸ್‌ಎಸ್‌ಎಐ  ಮ್ಯಾಕ್‌ ಡೊನಾಲ್ಡ್ಸ್‌ ಗೆ ಶೋಕಾಸ್‌ ನೋಟಿಸ್‌ ನೀಡಿದೆ.

Advertisement

ಭಾರತದಲ್ಲಿ  ಮ್ಯಾಕ್‌ ಡೊನಾಲ್ಡ್ಸ್‌ಅನ್ನು ನಿರ್ವಹಿಸುವ  ಹಾರ್ಡ್‌ ಕ್ಯಾಸ್ಟಲ್‌ ಮತ್ತು ಕೊನಾಟ್‌ ಪ್ಲಾಜಾ ರೆಸ್ಟೋರೆಂಟ್‌ ಲಿ.ಗೆ ನೋಟಿಸ್‌ ನೀಡಲಾಗಿದೆ.

ಮನೆಯಲ್ಲಿ ಬೇಯಿಸಿದ ಆಹಾರ ಮತ್ತು ಆರೋಗ್ಯಕರ ತರಕಾರಿಗಳನ್ನು ಅವಮಾನಿಸುವ ಮೂಲಕ ತನ್ನ ಮಳಿಗೆಗಳತ್ತ ಹೆಚ್ಚಿನ ಜನರನ್ನು ಕರೆತರಲು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿತ್ತು. ಕಳೆದ ವಾರ ಪತ್ರಿಕೆಗಳಲ್ಲಿ ಒಂದು ಪುಟ ಜಾಹೀರಾತಿನಲ್ಲಿ ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತ ನಮ್ಮ ಆಹಾರ ಹೆಚ್ಚು ಶುಭ್ರ ಮತ್ತು ಆರೋಗ್ಯಕ್ಕೆ ಪೂರಕ ಎಂದು ಮ್ಯಾಕ್‌ಡೊನಾಲ್ಡ್ಸ್‌ಹೇಳಿತ್ತು. ಇದನ್ನು ಬೇಜವಾಬ್ದಾರಿಯುತ ಜಾಹೀರಾತು ಎಂದು ಬಣ್ಣಿಸಿರುವ  ಪುಡ್‌ ಸೇಫ್ಟಿ ಆ್ಯಂಡ್‌ ಸ್ಟ್ಯಾಂಡರ್ಡ್ಸ್‌ ಅಥಾರಿಟಿ ಆಫ್ ಇಂಡಿಯಾ (ಎಫ್ಎಸ್‌ಎಸ್‌ಎಐ) ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next