Advertisement
ನಗರದಲ್ಲಿ ಭಾನುವಾರ ನಡೆದ ವೀರಶೈವ-ಲಿಂಗಾಯತ ಧರ್ಮ ಜನಜಾಗೃತಿ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ನಿಮ್ಮ ಹಣೆಬಹರಕ್ಕೆ ಕೊಪ್ಪಳದಲ್ಲಿ 500 ಜನರನ್ನು ಸೇರಿಸಲಾಗಲಿಲ್ಲ. ಕೆಲವರು ಹಾನಗಲ್ ಕುಮಾರಸ್ವಾಮಿಯವರನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಮುಂದೊಂದು ದಿನ ಜನ ನಿಮ್ಮನ್ನ ನಾಯಿಗೆ ಹೊಡದಂಗ ಹೊಡಿತಾರ ಎಂದು ಹೇಳುತ್ತಿದ್ದಾರೆ. ನಾಯಿ ನಿಯತ್ತಿನ ಪ್ರಾಣಿ. ನೀವು ಅದಕ್ಕಿಂತಲೂ ಕಡೆ ಎಂದು ಕತ್ತೆಗೆ ಹೋಲಿಸಿದರು.
ನಮ್ಮ ಮಠಗಳನ್ನು ನಿಮಗೆ ಬಿಟ್ಟು ಕೊಡುತ್ತೇವೆ ಬನ್ನಿ ಎಂದು ಆಹ್ವಾನಿಸಿದರು. ಲಿಂಗಾಯತ ಅಂತ ಹೊರಟವರೆಲ್ಲ ವೀರಶೈವ-ಲಿಂಗಾಯತ ಧರ್ಮಕ್ಕೆ ಈ ಹಿಂದೆ ಸಹಿ ಹಾಕಿದವರು,ಕೇಳಿದರೆ ಆಗಿನ್ನೂ ನಮಗೆ ತಿಳಿವಳಿಕೆ ಇರಲಿಲ್ಲ. ಈಗ ಬಂದಿದೆ ಎನ್ನುತ್ತಾರೆ. ಮುಂದೊಂದು ದಿನ ಆವತ್ತು ತಿಳಿವಳಿಕೆ ಇರಲಿಲ್ಲ. ಅದಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮ ಅಂತ ಹೋಗಿದ್ದೆವು ಎನ್ನುವ ಕಾಲ ಬರುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ ಕುರಿತು ವ್ಯಂಗ್ಯವಾಡಿದರು.
Related Articles
ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಕೆಲ ನಾಯಿಗಳನ್ನ ಛೂ ಬಿಟ್ಟು ಕಚ್ಚಿಸುವ
ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಕಲಬುರಗಿ ಆಂದೋಲದ ಸಿದ್ದಲಿಂಗ ಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿದರು.
Advertisement
ವೀರಶೈವ-ಲಿಂಗಾಯತ ಧರ್ಮ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು,ಬೊಗಳುವ ನಾಯಿಗಳಿಗೆ ನಾವು ಬೆದರಲ್ಲ. ಅಂಥ ಈಡಿಯಟ್ಸ್‌ಗಳಿಂದ ಧರ್ಮ ಒಡೆಯಲು ಸಾಧ್ಯವಿಲ್ಲ ಎಂದರು. ರಾಜ್ಯದಲ್ಲಿ ತಲೆದೋರಿರುವ ಈ ಧರ್ಮ ಕಲಹಕ್ಕೆ ರಾಜನೇ ಕಾರಣ.
ಮುಖ್ಯಮಂತ್ರಿಗಳೇ ಮುಂದಾಗಿ ಕೆಲವರ ಮೂಲಕ ಧರ್ಮ ಇಬ್ಭಾಗದ ಕೆಲಸ ಮಾಡುತ್ತಿದ್ದಾರೆ. ಧರ್ಮ ವಿಭಜನೆ ಮಾಡಿಮುಂಬರುವ ಚುನಾವಣೆಯಲ್ಲಿ ಮತ ಗಳಿಸುವ ಸಂಚು ರೂಪಿಸಿದ್ದಾರೆ. ನಿಮ್ಮಪ್ಪನಾಣೆಗೂ ಮುಂದೆ ನೀವು ಅಧಿಕಾರಕ್ಕೆ ಬರಲ್ಲ ಎಂದು ಭಾವಾವೇಶಕ್ಕೊಳಗಾದರು. ವೀರಶೈವ ಲಿಂಗಾಯತ ಪ್ರತ್ಯೇಕವಲ್ಲ ಎಂದ ವಿಜಯಪುರದ ಪ್ರಕಾಶ ಸ್ವಾಮಿಗಳಿಗೆ ಬೆದರಿಕೆ ಹಾಕುವ ಹೀನ ಕೃತ್ಯ ಎಸಗಿದ ಸಚಿವ ಎಂ.ಬಿ. ಪಾಟೀಲ ಯಾರು,ಎಂಥವರು ಎಂಬುದು ಜನರಿಗೆ ಗೊತ್ತಿದೆ. ಸಚಿವರು ಉದ್ಧಟತನ ತೋರುವ ಮೂಲಕ ಸ್ವಾಮಿಗಳಿಗೆ, ಸಮಾಜಕ್ಕೆ ಮೋಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಫಲ ಉಣ್ಣುತ್ತಾರೆ ಎಂದು ಸೂಕ್ಷ್ಮವಾಗಿ ಹೇಳಿದರು. ಗದಗನಲ್ಲಿ ರಾವಣರಂಥ ರಾಕ್ಷಸರಿದ್ದಾರೆ. ಕೋಮು ಸೌಹಾರ್ದತೆ ಹೆಸರಿನಲ್ಲಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅದು ಹೇಗೆ ಪ್ರಶಸ್ತಿ ಬಂತು ಎಂಬುದು ಅವರಿಗೆ ಗೊತ್ತು ಎಂದು ಡಾ|ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳನ್ನು ಟೀಕಿಸಿದರು.