ಹೌದು .. ಐಟಿ- ಬಿಟಿ ಮಂದಿ ಕೂಡ ಇಂದು ಕೃಷಿಯತ್ತ ಒಲವು ತೋರುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಬೇಸರ ಇರುವುದಿಲ್ಲ. ಮೇಲಾಧಿಕಾರಿಯ ಧಿಮಾಕೂ ಅಲ್ಲಿಲ್ಲ. ಕೃಷಿಕನಿಗೆ ಅವನೇ ರಾಜ, ಅವನೇ ಪ್ರಜೆ. ಸಾಮಾನ್ಯವಾಗಿ ಕೃಷಿ ಜತೆ ಪರ್ಯಾಯ ಬೆಳೆ ಕೂಡ ಬೆಳೆಸುವುದರಿಂದ ನಷ್ಟವಿಲ್ಲ.
Advertisement
ನಗರ ಜೀವನ ಪದ್ಧತಿಯಲ್ಲಿ ಕೃಷಿಯತ್ತ ಒಲವು ಕಡಿಮೆ. ಹೀಗಿರುವಾಗ ಇಲ್ಲಿನ ಯುವಜನರಲ್ಲಿ ಕೃಷಿಯತ್ತ ಒಲವು ಹೆಚ್ಚಿಸಲು ಏನು ಮಾಡಬೇಕು? ಅವರಿಗೆ ಯಾವ ರೀತಿ ಅವಕಾಶ ಕೊಡಬಹುದು?ನಗರ ಪ್ರದೇಶದಲ್ಲಿ ಕೃಷಿಯ ಬಗ್ಗೆ ಜ್ಞಾನ ಹೆಚ್ಚಿಸಲು ಆಂದೋಲನ ಮಾಡಬೇಕಿದೆ. ಈ ಆಂದೋಲನವು ಮನೆಯಿಂದಲೇ ಪ್ರಾರಂಭವಾಗಬೇಕು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ಅರಿವು ಮೂಡಿಸಬೇಕು. ‘ಮಣ್ಣು ಮುಟ್ಟಿದರೆ ರೋಗ ಬರುತ್ತದೆ’ ಎಂದು ಮಕ್ಕಳ ಮನಸ್ಸಲಿರುವಾಗ ಇದನ್ನು ಹೋಗಲಾಡಿಸಲು ಶಿಕ್ಷಕರಿಂದಲೇ ಸಾಧ್ಯ.
ಕೆಲ ಮಂದಿಗೆ ಕೃಷಿ ಕ್ಷೇತ್ರದಲ್ಲಿರುವ ಅನುಕೂಲಕರ ಬೆಳವಣಿಗೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಎಂಜಿನಿಯರ್, ಡಾಕ್ಟರ್ ಸಹಿತ ವಿದೇಶಗಳಲ್ಲಿ ಲಕ್ಷಾಂತರ ಸಂಪಾದಿಸಿರುವ ಮಂದಿ, ಊರಿಗೆ ಬಂದು ಕೃಷಿಯತ್ತ ತೊಡಗಿಸಿಕೊಂಡಿರುವ ಉದಾಹರಣೆಗಳಿವೆ. ಹೀಗಾಗಿ ಈ ನಿಟ್ಟಿನಲ್ಲಿ ಹೆತ್ತವರೇ ಜಾಗೃತರಾಗಬೇಕು. . ಇತರೆ ದೇಶದ ಕೃಷಿ ಮಾದರಿಗಳು ಸಾಂಪ್ರದಾಯಿಕ ಕೃಷಿ ಚಟುವಟಿಕೆಯನ್ನೇ ನೆಚ್ಚಿಕೊಂಡ ನಮ್ಮ ದೇಶಕ್ಕೆ ಪೂರಕವೇ? ಇದರಲ್ಲಿ ಲಾಭಗಳಿಸಲು ಸಾಧ್ಯವಿದೆಯೇ?
ಜಪಾನ್, ಭೂತಾನ್ ಸಹಿತ ಕೆಲವು ದೇಶಗಳಲ್ಲಿ ಕೃಷಿ ಜೀವನ ಕಷ್ಟ. ಹಾಗಿದ್ದರೂ ಅಲ್ಲಿನ ಮಂದಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಸ್ರೇಲ್ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಅಳವಡಿಸಲು ಸಾಧ್ಯವಿದೆ. ಅಲ್ಲಿನ ವಾತಾವರಣದಲ್ಲಿ ಬೆಳೆಸುವ ಮಾದರಿ ಇಲ್ಲಿನ ವಾತಾವರಣಕ್ಕೆ ಸೂಕ್ತವಾಗಿದೆ.
Related Articles
ಹಗಲು-ರಾತ್ರಿ ದುಡಿದರೆ ಕೃಷಿ ಕ್ಷೇತ್ರ ಲಾಭಗಳಿಸಲು ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯನ್ನು ಲೀಸ್‌ಗೆ ಕೊಡುವ ಪದ್ಧತಿ ಹೆಚ್ಚಾಗುತ್ತಿದೆ. ಅದರ ಬದಲು ನಮ್ಮ ತೋಟದಲ್ಲಿ ನಾವೇ ಕಷ್ಟಪಟ್ಟು ದುಡಿದೆರೆ ಖಂಡಿತವಾಗಿಯೂ ಲಾಭಗಳಿಸಬಹುದು.
Advertisement
ನವೀನ್ ಭಟ್ ಇಳಂತಿಲ