Advertisement

ಜನ್ಮಸ್ಥಾನಕ್ಕೆ ಹಕ್ಕುಗಳು ಇರಬಾರದೇ?: ಸುಪ್ರೀಂ

12:35 AM Sep 14, 2019 | Team Udayavani |

ಹೊಸದಿಲ್ಲಿ: ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ ಅಲ್ಲವೆಂದು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ಮುಸ್ಲಿಂ ಸಂಘಟನೆಗಳಿಗೆ ಶುಕ್ರವಾರ ನ್ಯಾಯಪೀಠ ಕೆಲವೊಂದು ಚುರುಕಿನ ಪ್ರಶ್ನೆಗಳನ್ನು ಕೇಳಿತು.

Advertisement

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರನ್ನೊಳಗೊಂಡ ಐವರು ಸದಸ್ಯರ ನ್ಯಾಯಪೀಠ “ಆಸ್ತಿಯ ಹಕ್ಕಿನಲ್ಲಿ ಇರುವಂತೆ ಶ್ರೀರಾಮನ ಜನ್ಮಸ್ಥಾನದ ವಿಚಾರದಲ್ಲಿ ಏಕೆ ಕಾನೂನಾತ್ಮಕ ಹಕ್ಕುಗಳು ಇರಬಾರದು’ ಎಂದು ಪ್ರಶ್ನೆ ಮಾಡಿತು. ಮುಸ್ಲಿಂ ಸಂಘಟನೆಗಳ ಪರ ವಾದಿಸಿದ ರಾಜೀವ್‌ ಧವನ್‌ ಜನ್ಮಸ್ಥಾನವನ್ನು ಪ್ರಕರಣದಲ್ಲಿ ಸೇರಿಸುವುದರ ವಿರುದ್ಧ ಪ್ರಬಲವಾಗಿ ಆಕ್ಷೇಪ ಮಾಡಿದರು.

ಅವಧಿ ವಿಸ್ತರಣೆ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್‌ನ ನ್ಯಾಯಾಧೀಶರ ಕರ್ತವ್ಯದ ಅವಧಿಯನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶ ಸರಕಾರ ಶುಕ್ರವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಸೆ.30ಕ್ಕೆ ಹಾಲಿ ಜಡ್ಜ್ ಸುರೇಂದ್ರ ಕುಮಾರ್‌ ಯಾದವ್‌ ಅವರು ನಿವೃತ್ತಿಯಾಗಲಿದ್ದಾರೆ. ಹೀಗಾಗಿ ಅವರು ಸುಪ್ರೀಂಕೋರ್ಟ್‌ಗೆ ಪತ್ರ ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next