Advertisement
ಒಂದು ವೇಳೆ ಈ ಪ್ರಕರಣಗಳಲ್ಲಿ ಬಾಲಕಿ ಗರ್ಭಿಣಿಯಾದರೆ ಮತ್ತು ಅವರು ಪೋಷಕರು ಪ್ರಕರಣ ದಾಖಲಿಸಿದರೆ, ಯುವಕರು ಬಂಧನಕ್ಕೆ ಒಳಪಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿ ಸಲ್ಲಿಸಿರುವ ಪಿಐಎಲ್ ವಿಚಾರಣೆ ವೇಳೆ ಸುಪ್ರೀಂ ಈ ಸೂಚನೆ ನೀಡಿದೆ. ಮಕ್ಕಳ ವಿರುದ್ಧ ಲೈಂಗಿಕ ಅಪರಾಧಗಳ ತಡೆ ಕಾಯ್ದೆ, 2012ರಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯ ಸಮ್ಮತಿಯೂ ಅಪ್ರಯೋಗಿಕವಾಗಿದೆ. ಈ ವಯಸ್ಸಿನವರೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವುದು ಅಪರಾಧವಾಗಿದೆ. ಐಪಿಸಿ ಸೆಕ್ಷನ್ 375ರ ಅಡಿ ಸಮ್ಮತಿ ಇದ್ದರೂ 16ರೊಳಗಿನ ಬಾಲಕಿಯೊಂದಿಗೆ ಲೈಂಗಿಕತೆಯಲ್ಲಿ ತೊಡಗುವುದನ್ನು ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತದೆ. 16 ಮೇಲ್ಪಟ್ಟ ಬಾಲಕಿಯರು ಹಾಗೂ 16ರಿಂದ 20ರೊಳಗಿನ ಯುವಕರ ನಡುವಿನ ಸಮ್ಮತಿಯ ಲೈಂಗಿಕತೆಯನ್ನು ಅಪರಾಧವಲ್ಲ ಎಂದು ಪರಿಗಣಿಸಬೇಕು ಎಂದು ಕೋರಿ ನ್ಯಾಯವಾದಿ ಹರ್ಷ ವಿಭೋರ್ ಸಿಂಘಾಲ್ ಪಿಐಎಲ್ ಸಲ್ಲಿಸಿದ್ದಾರೆ. Advertisement
Supreme Court: ಹದಿಹರೆಯದ ಸಮ್ಮತಿ ಲೈಂಗಿಕತೆ ಅಪರಾಧವಲ್ಲ ಎಂದು ಪರಿಗಣಿಸಬೇಕೇ?
12:00 AM Aug 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.