ಹೊಸದಿಲ್ಲಿ: ಮದುವೆಗಾಗಿ ಮತಾಂತರ ಮಾಡಿಕೊಳ್ಳುವು ದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. “ಎಎನ್‌ಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದ ರ್ಶನದಲ್ಲಿ ಮಾತನಾಡಿದ ಅವರು, ಮತಾಂತರ ಎನ್ನುವುದು ಯಾಕೆ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಜೆಪಿ ಆಡಳಿತ ಇರುವ ರಾಜ್ಯಗಳು ಲವ್ ಜೆಹಾದ್ ಕಾಯ್ದೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಸಿಂಗ್ ಹೇಳಿಕೆ ಮಹತ್ವ ಪಡೆದಿದೆ. ಈ ಮೂಲಕ ಬಿಜೆಪಿ ಆಡಳಿತ ಇರುವ ರಾಜ್ಯಗಳ ಕಾಯ್ದೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
“ಹೆಚ್ಚಿನ ಸಂದರ್ಭಗಳಲ್ಲಿ ಬಲವಂತ ವಾಗಿ ಮತ್ತು ಆಮಿಷಗಳನ್ನೊಡ್ಡಿ ಮತಾಂತರ ಮಾಡಲಾಗುತ್ತದೆ. ಸಹಜ ಮದುವೆ ಮತ್ತು¤ ಬಲವಂತವಾಗಿ ಮತಾಂತ ರಗೊಳಿಸಿ ಮದುವೆಗೆ ೆ ವ್ಯತ್ಯಾಸವಿದೆ ಎಂದಿದ್ದಾರೆ.
ಯಥಾಸ್ಥಿತಿ: ಲಡಾಖ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹಾರವಾಗಿಲ್ಲ. ಈ ಬಗ್ಗೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಯಥಾ ಸ್ಥಿತಿಯೇ ಇದೆ ಎಂದು ರಕ್ಷಣ ಸಚಿವರು ಹೇಳಿದ್ದಾರೆ. ಯಥಾಸ್ಥಿತಿಯೇ ಇದ್ದರೆ ಲಡಾಖ್ ಪ್ರದೇಶದಿಂದ ಸೇನೆ ವಾಪಸ್ ಕರೆಸಿಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಪಾಕಿಸ್ಥಾನಕ್ಕೆ ಎಚ್ಚರಿಕೆ: ಅಗತ್ಯ ಬಿದ್ದರೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಲು ಭಾರತಕ್ಕೆ ಶಕ್ತಿ ಇದೆ. ಪ್ರತ್ಯೇಕ ದೇಶವಾಗಿ ಪಾಕಿಸ್ಥಾನ ಅಸ್ತಿತ್ವಕ್ಕೆ ಬಂದ ದಿನದಿಂದ ಗಡಿಯಲ್ಲಿ ಅದು ಕುಕೃತ್ಯಗಳನ್ನೇ ನಡೆಸುತ್ತಾ ಬಂದಿದೆ ಎಂದು ಟೀಕಿಸಿದರು.
ಸಾಮಾನ್ಯ ರೈತನ ಮಗ: ರೈತರ ಕಷ್ಟ ಮತ್ತು ಕೃಷಿ ಕ್ಷೇತ್ರದ ಬಗ್ಗೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಏನೂ ತಿಳಿದಿಲ್ಲವೆಂದು ರಾಜನಾಥ್ ಸಿಂಗ್ ಲೇವಡಿ ಮಾಡಿದ್ದಾರೆ. “ನಾನು ಸಾಮಾನ್ಯ ರೈತನ ಮಗ. ಅವರು ಶ್ರೀಮಂತ ವ್ಯಕ್ತಿಯ ಮಗ. ರಾಹುಲ್‌ಗಿಂತ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡಿದ್ದೇನೆ’ ಎಂದರು. ರೈತರು ದೇಶದ ಬೆನ್ನೆಲುಬು. ಅವರನ್ನು “ನಕ್ಸಲ’ರು “ಖಲಿಸ್ಥಾನಿ’ಗಳು ಎಂದು ಬಿಂಬಿಸುವುದು ಸರಿಯಲ್ಲ ಎಂದರು.