ಬೆಂಗಳೂರು: ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಚಾರ ಹೆಚ್ಚಾಗಿದೆ. ಸರ್ಕಾರದ ಮೇಲೆ ಸಾರ್ವಜನಿಕ ಅಭಿಪ್ರಾಯ ಹೋಗಿದೆ. ಬಿಜೆಪಿ ಹಾಗು ಮೋದಿ ಮೇಲೆ ನಂಬಿಕೆ ಹೋಗುತ್ತಿದೆ ಎಂದು ಬಿಜೆಪಿ ಪರಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಅರುಣ್ ಸಿಂಗ್ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ಜೊತೆ ಮಾತಾಡಿದ್ದೇನೆ. ಸುಮಾರು 20 ನಿಮಿಷ ಅರುಣ್ ಸಿಂಗ್ ಜೊತೆ ಮಾತಾಡಿದ್ದೇನೆ ಎಂದರು.
ಮೈತ್ರಿ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡಿ ಬಂದಿದ್ದೇವೆ. ಕುಟುಂಬ ರಾಜಕಾರಣ, ರಾಕ್ಷಸ ರಾಜಕಾರಣ ಇಲ್ಲೂ ಕೂಡ ಕಾಣುತ್ತಿದ್ದೇವೆ. ನಾನು ಯಾವುದೇ ಬಣದಲ್ಲೂ ಇಲ್ಲ. ನಾನೊಬ್ಬ ಬಿಜೆಪಿ ಕಾರ್ಯಕರ್ತ. ಪಕ್ಷದ ಹಿತದೃಷ್ಟಿಯಿಂದ ಕೆಲವೊಂದು ಮಾತುಗಳನ್ನು ಹೇಳಿದ್ದೇನೆ. ಯಡಿಯೂರಪ್ಪ ಮೇಲೆ ಎಲ್ಲರಿಗೂ ಗೌರವ ಇದೆ. ಆದರೆ ನಮಗೆ ರಾಜ್ಯ ಹಾಗು ಪಕ್ಷ ಮುಖ್ಯ ಎಂದರು.
ಇದನ್ನೂ ಓದಿ:ನಾಳೆಯಿಂದ ಹೊಸ ಯಡಿಯೂರಪ್ಪ ಬರುತ್ತಾರೆ: ಬಿಎಸ್‌ವೈ ಪರ ಸಾಹುಕಾರ್ ಬ್ಯಾಟಿಂಗ್
ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಶಕ್ತಿ ಸಿಎಂಗೆ ಈಗ ಇಲ್ಲ. ಯಡಿಯೂರಪ್ಪ ವಯಸ್ಸಾಗಿದೆ, ಸಿಎಂ ಬದಲಾವಣೆ ಮಾಡಬೇಕು. ಆ ಸ್ಥಾನಕ್ಕೆ ಪಂಚಮಸಾಲಿ ಲಿಂಗಾಯುತ ನಾಯಕರಿಗೆ ಸಿಎಂ ಸ್ಥಾನ ಕೊಡಲಿ. ಯಾವ ಮಠಾಧಿಪತಿಗಳು ಬಸವ ತತ್ವ ಮೀರಿ ಹೋಗಬಾರದು. ಬಿಜೆಪಿಗೆ ಎಲ್ಲ ಜಾತಿ- ಧರ್ಮದವರು ಮತ ಹಾಕಿದ್ದರೆ. ಕೇವಲ ಲಿಂಗಾಯುತ ಸಮುದಾಯ ಮತ ಹಾಕಿಲ್ಲ, ಪಂಚಮಸಾಲಿ ಸಮುದಾಯವರು ಸಿಎಂ ಮಾಡಲಿ. ಪಂಚಮಸಾಲಿಯಲ್ಲಿ ಮುರುಗೇಶ್ ನಿರಾಣಿ, ಬಸನಗೌಡ ಯತ್ನಾಳ್, ಅರವಿಂದ ಬೆಲ್ಲಾದ ಇದ್ದಾರೆ ಎಂದು ವಿಶ್ವನಾಥ್ ಹೇಳಿದರು.