ಮುಂಬೈ: ಶಿವಸೇನೆ ಗೂಂಡಾಗಳು ನನ್ನನ್ನು ಅತ್ಯಾಚಾರ ಮಾಡಲು ಮತ್ತು ಬಹಿರಂಗವಾಗಿ ಹತ್ಯೆ ಮಾಡಲು ಬಿಜೆಪಿ ಪಕ್ಷವೂ ಬಿಡಬೇಕೇ ? ಎಂದು ಕಂಗನಾ ರಣಾವತ್, ಸಂಜಯ್ ರಾವತ್ ಗೆ ಪ್ರಶ್ನಿಸಿದ್ದಾರೆ.
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ-ಕಾಶ್ಮೀರಕ್ಕೆ (ಪಿಒಕೆ) ಹೋಲಿಸಿದ ಬಾಲಿವುಡ್ ನಟಿಯನ್ನು ಬಿಜೆಪಿ ಪಕ್ಷವೂ ಬೆಂಬಲಿಸುತ್ತಿದೆ ಎಂದು ಸಂಜಯ್ ರಾವತ್ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಅಂಕಣ ಬರೆದಿದ್ದರು. ಮಾತ್ರವಲ್ಲದೆ ಇದೊಂದು ದುರದೃಷ್ಟಕರ ಎಂದು ಬರೆದುಕೊಂಡಿದ್ದರು.
ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ ಕಂಗನಾ ರಣಾವತ್, ಡ್ರಗ್ ಮತ್ತು ಮಾಫಿಯಾ ರಾಕೆಟ್ ಅನ್ನು ಜಗತ್ತಿಗೆ ತೆರೆದಿಟ್ಟ ವ್ಯಕ್ತಿಯನ್ನು ಬಿಜೆಪಿ ಬೆಂಬಲಿಸುತ್ತಿರುವುದು ದುರದೃಷ್ಟಕರ ಎಂದು ವ್ಯಂಗ್ಯವಾಡಿದರು. ಮಾತ್ರವಲ್ಲದೆ ಇದೊಂದು ಅದ್ಬುತ ಬೆಳವಣಿಗೆ. ಶಿವಸೇನಾ ಗೂಂಡಾಗಳು ನನ್ನನ್ನು ಅತ್ಯಾಚಾರ ಮಾಡಲು, ಬಂಧಿಸಲು ಮತ್ತು ಗಾಯಗೊಳಿಸಲು ಬಿಜಿಪಿ ಪಕ್ಷವೂ ಬಿಡಬೇಕೆ ? ಹೌದೇ ಸಂಜಯ್ (ರಾವತ್) ಜೀ ? ಮಾಫಿಯ ವಿರುದ್ಧ ನಿಂತಿರುವ ಯುವತಿಯನ್ನು ರಕ್ಷಿಸಲು ಅವರಿಗೆಷ್ಟು ಧೈರರ್ಯವಿದೆ ? ಎಂದು ಕಂಗನಾ ಕಿಡಿಕಾರಿದ್ದಾರೆ.