Advertisement

ಜೋಕೆ, ಶಾರ್ಟ್‌ ಕಟ್‌ ಲೈಫ‌ನ್ನೇ “ಕಟ್‌’ಮಾಡುತ್ತೆ!

12:30 PM May 30, 2017 | Harsha Rao |

ನಾವು ಬೇಜಾರಾಗಿ, “ಲೈಫ್ ಈಸ್‌ ಬೋರಿಂಗ್‌. ಈ ಜೀವನದಲ್ಲಿ ಏನೂ ಇಲ್ಲ’ ಅಂತ ಹೇಳುವಾಗ ಅವನು ಸ್ಫೂರ್ತಿಯ ಚಿಲುಮೆಯಂತೆ “ಲೈಫ್ ಈಸ್‌ ಬ್ಯೂಟಿಫ‌ುಲ್‌ ಕಣೊÅà. ನಮ್ಮ ವಿಚಾರಗಳು ಬದಲಾಗಬೇಕು ಅಷ್ಟೆ’ ಅನ್ನುತ್ತಿದ್ದ. ಹೀಗಂದ ವ್ಯಕ್ತಿ ಅದೊಂದು ದಿನ…

Advertisement

—-
ಇದು ನನ್ನ ಸ್ನೇಹಿತನ ಕಥೆ. ಅವನು ಬಿ.ಕಾಂ. ಓದ್ತಾ ಇದ್ದ. ಅವನದು ಓವರ್‌ ಥಿಂಕಿಂಗ್‌ ಮೈಂಡ್‌. ಯಾವಾಗಲೂ ಖುಷಿಯಾಗಿರುತ್ತಿದ್ದ. ತನ್ನ ಜೊತೆಯಿರುವವರನ್ನೆಲ್ಲಾ ನಗಿಸ್ತಾಯಿದ್ದ. ಅವನು ಶಾಲಾ-ಕಾಲೇಜಿನ ಪುಸ್ತಕಗಳ ಜೊತೆಗೆ ಬೇರೆ-ಇನ್ನಿತರ ಕ್ಷೇತ್ರಗಳ ಪುಸ್ತಕಗಳನ್ನೂ ಓದ್ತಾಯಿದ್ದ. ಅದು ಆಧ್ಯಾತ್ಮಿಕ, ಬಿಜಿನೆಸ್‌, ಕತೆ, ಕಾದಂಬರಿ… ಹೀಗೆ ಕೈಗೆ ಸಿಕ್ಕ ಯಾವುದೇ ಪುಸ್ತಕಗಳನ್ನೂ ಆತ ಬಿಡ್ತಾಯಿರಲಿಲ್ಲ. ಅವನನ್ನು ಕಂಡರೆ ನಮಗೆ ಅಸೂಯೆ ಆಗುತ್ತಿತ್ತು. ಏಕೆಂದರೆ ಅವನು ಪ್ರತಿ ಕ್ಷಣವನ್ನೂ ವ್ಯರ್ಥ ಮಾಡುತ್ತಿರಲಿಲ್ಲ. ಏನಾದ್ರೂ ಕೆಲಸ ಮಾಡ್ತಾ, ಓದುತ್ತಾ, ನಗ್ತಾ, ನಗಿಸ್ತಾ, ಪ್ರತಿ ಕ್ಷಣಾನು ಎಂಜಾಯ್‌ ಮಾಡ್ತಾ ಇದ್ದ. ನೋಡೋಕೆ ಸುಂದರವಾಗಿ ಲಕ್ಷಣವಾಗಿದ್ದ. ಅವನಿಗೆ ಹಲವಾರು ಹುಡುಗಿಯರು ಪ್ರಪೋಸ್‌ ಮಾಡಿದ್ರು. ಅದನ್ನೆಲ್ಲಾ ಅವನು ಸರಳವಾಗಿ ನಗ್ತಾ ರಿಜೆಕ್ಟ್ ಮಾಡುತ್ತಿದ್ದ. ನಮಗೂ ಈ ರೀತಿ ಅವಕಾಶ ಸಿಗಬಾರದಾ ಅಂಥ ವ್ಯಥೆ ಪಡ್ತಾಯಿದ್ದೆವು. 

ಕೆಲವೊಂದು ಸಲ ನಾವು ಬೇಜಾರಾಗಿ, “ಲೈಫ್ ಈಸ್‌ ಬೋರಿಂಗ್‌. ಈ ಜೀವನದಲ್ಲಿ ಏನೂ ಇಲ್ಲ’ ಅಂತ ಹೇಳುವಾಗ ಅವನು ಸ್ಫೂರ್ತಿಯ ಚಿಲುಮೆಯಂತೆ “ಲೈಫ್ ಈಸ್‌ ಬ್ಯೂಟಿಫ‌ುಲ್‌ ಕಣೊÅà. ನಮ್ಮ ವಿಚಾರಗಳು ಬದಲಾಗಬೇಕು ಅಷ್ಟೆ’ ಅನ್ನುತ್ತಿದ್ದ. ಅವನ ಯೋಚನೆಗಳು ತುಂಬಾ ವಿಶಾಲವಾಗಿದ್ದವು. ಅವನು ಈ ಜಗತ್ತಿನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸ್ತಾಯಿದ್ದ. ಈ ಪ್ರಪಂಚದಲ್ಲಿ ಪ್ರತಿ ಜೀವಿಯೂ ತನ್ನದೇ ಆದ ವಿಚಾರ ಆಸೆ, ಆಕಾಂಕ್ಷೆ ಬದುಕುವ ಶೈಲಿಯಿಂದ ಜೀವನ ಸಾಗಿಸುತ್ತೆ. ಕೊನೆಗೆ ತನ್ನನ್ನು ಈ ಭೂಮಿಗೆ ಅರ್ಪಣೆ ಮಾಡುತ್ತೆ. ಅಂತ ಹೇಳ್ತಾ ತನ್ನನ್ನು ತಾನೇ ಮರೆತು ಗಾಢವಾಗಿ ಚಿಂತನೆಯಲ್ಲಿ ಮುಳುಗಿರುತ್ತಿದ್ದ. ನಮಗೆ ಅನಿಸೋದು: ಈತ ದೊಡ್ಡ ಆಧ್ಯಾತ್ಮಿಕ ಗುರು ಆಗಬಹುದು ಅಂತ. ಆತನ ಒಂದು ನಗು ನಮ್ಮ ಅದೆಷ್ಟೋ ನೋವುಗಳನ್ನು ದೂರ ಮಾಡ್ತಿತ್ತು. 

ಅವನ ಆ ನಗುವಿನ ಹಿಂದೆ ನೋವುಗಳಿದ್ದವು. ಅವನದು ಚಿಕ್ಕ ಬಡ ಕುಟುಂಬ. ಅವನಿಗಿದ್ದ ಬಹುದೊಡ್ಡ ಆಸ್ತಿಯೆಂದರೆ, ಅವನ ತಾಯಿ ಮತ್ತು ತಂಗಿ. ತಂದೆ, ಇವರಿಬ್ಬರೂ ಚಿಕ್ಕವರಿರುವಾಗಲೇ ಊರು ತುಂಬಾ ಸಾಲ ಮಾಡಿ ಇವರನ್ನೆಲ್ಲಾ ಬಿಟ್ಟು ಓಡಿ ಹೋಗಿದ್ದ. ಅವನ ತಾಯಿ ತನ್ನ ಗಂಡ ಮಾಡಿದ ಸಾಲಕ್ಕೆ ಈಗಲೂ ಬಡ್ಡಿ ಕಟ್ಟುತ್ತಿದ್ದಾಳೆ. ಇವರು ವಾಸ ಮಾಡೋದು ಸಣ್ಣ ಗುಡಿಸಲಿನಲ್ಲಿ. ಅಲ್ಲಿ ಅವರು ತುಂಬಾನೇ ಖುಷಿಯಾಗಿದ್ದರು. ಅವನಿಗೆ ಐ.ಎ.ಎಸ್‌ ಪರೀಕ್ಷೆ ಪಾಸ್‌ ಮಾಡಿ ಜಿಲ್ಲಾಧಿಕಾರಿಯಾಗುವ ಕನಸು. ತಾಯಿ ಕೂಲಿ ಕೆಲಸ ಮಾಡ್ತಾಯಿದ್ದಳು. ಇವನು ಕೂಡಾ ರಜೆಯಿದ್ದಾಗ ಕೆಲಸಕ್ಕೆ ಹೋಗ್ತಾಯಿದ್ದ. ನಮ್ಮಗೆಲ್ಲರಿಗೂ ಇವನು ಆದರ್ಶ ವ್ಯಕ್ತಿಯಾಗಿದ್ದ.

ಆದರೆ ಒಂದು ದಿನ ಅವನು ಆತ್ಮಹತ್ಯೆ ಮಾಡಿಕೊಂಡ. ಅವನ ತಾಯಿಯ ಮತ್ತು ತಂಗಿಯ ಆಕ್ರಂದನ ನೋಡುವುದು ಅಸಾಧ್ಯವಾಗಿತ್ತು. ನಮ್ಮೂರಿನ ಜನರಿಗೆ ತುಂಬಾನೆ ಶಾಕ್‌ ಆಗಿತ್ತು. ಡೆತ್‌ನೋಟ್‌ನಲ್ಲಿ ನನ್ನನ್ನು ಕ್ಷಮಿಸಿ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದ. ನಾನು ಅವನ ಸಾವಿಗೆ ಕಾರಣ ಹುಡುಕೋಕೆ ತುಂಬಾನೆ ಪ್ರಯತ್ನ ಪಟ್ಟೆ. ಕೊನೆಗೆ ನನಗೆ ತಿಳಿದಿದ್ದು, ಅವನು ಕೆಲವರ ಹತ್ತಿರ 60,000 ರೂ. ಸಾಲ ಯಾಕೆ ಮಾಡಿಕೊಂಡಿದ್ದ. ಈ ವಿಷಯ ಅವರ ಮನೇಲಿ ಗೊತ್ತಿರಲಿಲ್ಲ. ಹಾಗಾದ್ರೆ ಸಾಲ ಯಾಕೆ ಮಾಡಿಕೊಂಡ ಎಂಬ ಪ್ರಶ್ನೆ ಸಹಜವೇ. ಯಾಕೆಂದರೆ ಅವನ ತಂದೆ ಮಾಡಿದ್ದ ಸಾಲವನ್ನು ಆದಷ್ಟು ಬೇಗ ತೀರಿಸುವ ಉದ್ದೇಶದಿಂದ ಮಟಕಾ( ಓ.ಸಿ) ಆಡಿ, ದುಡ್ಡು ಸಂಪಾದಿಸಲು ಹೊರಟಿದ್ದ. ಆ ಮೂಲಕ ನಮ್ಮ ದೇಶದ ದೊಡ್ಡ ಕರಾಳ ದಂಧೆಯ ಬಲೆಗೆ ಬಿದ್ದಿದ್ದ. ಇದರಲ್ಲಿ ಅವನು ದುಡ್ಡು ಕಳಕೊಂಡಿದ್ದ. ತನ್ನ ತಂದೆಯ ಸಾಲ ತೀರಿಸಲು ಹೋಗಿ ತಾನೂ ಸಾಲಗಾರನಾಗಿದ್ದ. ಸಾಲಗಾರರ ಕಾಟ ಜಾಸ್ತಿ ಆಯಿತು. ಅವರನ್ನು ಎದುರಿಸಲಾಗದೆ ಆತ್ಮಹತ್ಯೆಯ ಹಾದಿ ಹಿಡಿದಿದ್ದ. ತಾಯಿ ಮತ್ತು ತಂಗಿಯನ್ನು ಅನಾಥರನ್ನಾಗಿಸಿದ್ದ. ಆತ ನನಗೆ ಕೊನೆಯದಾಗಿ ಸಿಕ್ಕಾಗ ನೋವು ಭರಿತ ನಗುವಿನಲ್ಲಿ-  ಈ ಜೀವನದಲ್ಲಿ ಅನ್ನದ ಹಿಂದೆ ಹೋಗು, ತೃಪ್ತಿ ಸಿಗುತ್ತೆ. ದುಡ್ಡೆಂಬ ಮಾಯಾಲೋಕದ ಹಿಂದೆ ಹೋದ್ರೆ ಇರೋ ಸುಖ, ನೆಮ್ಮದಿ, ಖುಷಿ, ಮಾಯವಾಗಿ ಸಾವು ಎನ್ನುವ ಬಾಗಿಲು ತೆರೆದುಕೊಳ್ಳುತ್ತೆ. ಆಲ್‌ ದಿ ಬೆಸ್ಟ್‌ ಅಂತ ಹೇಳಿದ್ದ.

Advertisement

ಮೊದಲೇ ಹೇಲಿದಂತೆ, ನನ್ನ ಗೆಳೆಯ ಚಿಕ್ಕಂದಿನಿಂದಲೂ ಒಳ್ಳೆಯ ಯೋಚನೆಗಲೊಂದಿಗೆ, ಸಂಸ್ಕಾರದೊಂದಿಗೆ ಬೆಲೆದವನು. ಒಂದು ತಲೆಮಾರಿಗೆ ಆತ ರೋಲ್‌ಮಾಡೆಲ್‌ ಆಗುತ್ತಾನೆ ಎಂಬ ಭರವಸೆ ನಮ್ಮ ಊರಿನ ಜನರಿಗೆಲ್ಲಾ ಇತ್ತು. ಯಶಸ್ಸು ಪಡೆಯಲು ಇರುವ ರಾಜಮಾರ್ಗವನ್ನು ನನ್ನಂಥ ಹಲರಿಗೆ ತೋರಿಸಿಕೊಟ್ಟ ಈತ, ತಾನು ಮಾತ್ರ ಯಾವುದೋ ಕೆಟ್ಟ ಘಳಿಗೆಯಲ್ಲಿ ಅಡ್ಡದಾರಿಯ ಮೂಲಕವೇ ಯಶಸ್ಸಿನ ಏಣಿ ಹತ್ತಲು ಹೋಗಿ ಗುರಿತಪ್ಪಿ ಪ್ರಪಾತಕ್ಕೆ ಬಿದ್ದುಬಿಟ್ಟ. ಆ ಮೂಲಕ “ಖಜಟ್ಟಠಿcuಠಿ, cuಠಿs ಠಿಜಛಿ lಜಿfಛಿ’ ಎಂಬ ಮಾತಿಗೆ ಸಾಕ್ಷಿಯಾಗಿಬಿಟ್ಟ.

ಇಂಥದ್ದೊಂದು ದುರ್ಭರ ಪ್ರಸಂಗ ನಡೆಯಲೇಬಾರದಿತ್ತು ಅಂದುಕೊಂಡಾಗಲೆಲ್ಲ ನನ್ನ ಗೆಳೆಯ, ಅವನಿಗಿದ್ದ ಪ್ರತಿಭೆ, ಅವನ ಸೌಜನ್ಯದ ನಡವಳಿಕೆ ಮತ್ತು ಆತನಿಗೆ ಒದಗಿದ ದುರಂತ ಅಂತ್ಯ… ಎಲ್ಲವೂ ಬಿಟ್ಟೂಬಿಡದೆ ನೆನಪಾಗುತ್ತದೆ.

– ಇರ್ಫಾನ್‌ ಜಾಲವಾದ,  ಬೊಮ್ಮನಜೋಗಿ (ವಿಜಯಪುರ ಜಿಲ್ಲೆ)

Advertisement

Udayavani is now on Telegram. Click here to join our channel and stay updated with the latest news.

Next