Advertisement
ರೆಮಿಡೆಸಿವಿರ್ ಚುಚ್ಚುಮದ್ದಿನ ಬೇಡಿಕೆ ಹಿನ್ನೆಲೆಯಲ್ಲಿ ಕಾಳಸಂತೆಯಲ್ಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಬಹು ತೇಕ ಜಿಲ್ಲೆಗಳಲ್ಲಿ ವರದಿಯಾಗುತ್ತಲೇ ಇವೆ. ಸರಕಾ ರದ ಮಾರ್ಗಸೂಚಿಯಂತೆ ಖಾಸಗಿ ಆಸ್ಪತ್ರೆಗಳಿಗೂ ಪೂರೈಕೆಯಾಗುತ್ತಿದ್ದರೂ ಬಹುತೇಕ ಕಡೆ ಬೇಡಿಕೆಗೆ ತಕ್ಕಂತೆ ಬಳಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
Related Articles
Advertisement
1.62 ಲಕ್ಷ ರೆಮಿಡೆಸಿವಿರ್ ಲಭ್ಯ :
ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಮೇ 3ರಂದು 1.62 ಲಕ್ಷ ರೆಮಿಡೆಸಿವಿರ್ ಚುಚ್ಚು ಮದ್ದು ಪೂರೈಕೆಯಾಗಿದೆ. ಇದನ್ನು ಮುಂದಿನ (ಮೇ 3ರಿಂದ) ರವಿವಾರ (ಮೇ 9)ದ ವರೆಗೆ ಬಳಸಲಾಗುತ್ತದೆ. ವಾರದಿಂದ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿರುವುದು ನಿಜ. ಆದರೆ, ರೆಮಿಡೆಸಿವಿರ್ ಕೊರತೆ ಉಂಟಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದ.ಕ., ಉಡುಪಿ: ಲಭ್ಯ :
ಉಡುಪಿ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ 144 ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸ್ಟಾಕ್ ಇಲ್ಲ. ದಿನವೊಂದಕ್ಕೆ 300ರಷ್ಟು ಅಗತ್ಯ ಜಿಲ್ಲೆಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ 200 ರೆಮಿಡಿಸಿವಿರ್ ಔಷಧ ಲಭ್ಯವಿದೆ. ಆದರೆ ಖಾಸಗಿ ಆಸ್ಪತ್ರೆಯವರು ಕೆಪಿಎಂಇ ಪೋರ್ಟಲ್ ಮೂಲಕ ನೋಂದಣಿ ಮಾಡಬೇಕಾಗಿದೆ.
ಕಾಫಿನಾಡಲ್ಲಿ ಸದ್ಯಕ್ಕಿಲ್ಲ ಸಮಸ್ಯೆ ಚಿಕ್ಕಮಗಳೂರಲ್ಲಿ ಅಗತ್ಯಕ್ಕನುಗುಣವಾಗಿ ಪ್ರತಿದಿನ 42 ಡೋಸ್ ಬೆಂಗಳೂರು ಮತ್ತು ಹಾಸನದಿಂದ ಪೂರೈಕೆಯಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಔಷಧ ಕೊರತೆ ಸಮಸ್ಯೆ ತಲೆದೋರಿಲ್ಲ.
ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ? :
ಕಂಪೆನಿಯಲ್ಲಿ ಕಚ್ಚಾ ವಸ್ತುಗಳ ಕೊರತೆಯಿಂದ ರೆಮಿಡೆಸಿವಿರ್ ಉತ್ಪಾದನೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿರುವುದರಿಂದ ನಿಗದಿತ ವೇಳೆಗೆ ಸಿಗುವುದು ಕಷ್ಟಕರವಾಗುತ್ತಿದೆ. ಆದರೂ ಸದ್ಯ ಕೆಲವು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರೆಮಿಡೆಸಿವಿರ್‌ಗೆ ಬೇಡಿಕೆ ಇಲ್ಲದ್ದಕ್ಕೆ ಕೊರತೆ ಕಂಡುಬರುತ್ತಿಲ್ಲ. ರೆಮಿಡೆಸಿವಿರ್ ಕೊರತೆ ಸದ್ಯಕ್ಕಂತೂ ಇಲ್ಲ. ಇದರ ದುರುಪಯೋಗ ಆಗದಂತೆ ಕಠಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೆಳಗಾವಿಯ ಪ್ರಾದೇಶಿಕ ಉಪ ಔಷಧ ನಿಯಂತ್ರಕ ದೀಪಕ ಗಾಯಕವಾಡ ತಿಳಿಸಿದ್ದಾರೆ.