ಹೊಳೆನರಸೀಪುರ: ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಿರುವ ರಸಗೊಬ್ಬರ ಕೀಟ ನಾಶಕ ಔಷಧಿಗಳ ಕೊರತೆಯಿದ್ದು, ಅವುಗಳನ್ನು ತರಿಸಲು ತಾವು ಕೃಷಿ ಅಧಿಕಾರಿಗಳೊಂದಿಗೆ ಮಾತ ನಾಡುವುದಾಗಿ ಮಾಜಿ ಸಚಿವ ಹಾಗು ಶಾಸಕ ಎಚ್.ಡಿ.ರೇವಣ್ಣ ನುಡಿದರು.
ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಪ್ರಸ್ತುತ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆ ಗರಿಗೆದರಿದೆ. ಈ ವೇಳೆ ರೈತರ ಕೃಷಿ ಚಟು ವಟಿಕೆಗಳಿಗೆ ಅವಶ್ಯವಾಗಿ ಬೇಕಾಗಿರುವ ರಸಗೊಬ್ಬರ ಸೇರಿದಂತೆ ಹಲವು ಸರಿಯಾಗಿ ದೊರಕುತ್ತಿಲ್ಲ ಎಂಬ ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕಿ ಸ್ವಪ್ನ ಅವರ ಮಾಹಿತಿ ಅಧರಿಸಿ ತಾವು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಅವಶ್ಯವಾಗಿ ಬೇಕಾಗಿರುವ ರಸಗೊಬ್ಬರ ಪೂರೈಕೆ ಮಾಡಲು ಸೂಚಿಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶ ಗಳು ಸೇರಿದಂತೆ ಹಲವು ರಸ್ತೆಗಳು ಮಳೆಯಿಂದ ಗುಂಡಿಗಳು ಬಿದ್ದಿವೆ. ಜತೆಗೆ ಕೆಲವು ಕಡೆ ಮಳೆ ನೀರಿನ ರಭಸದಕ್ಕೆ ಕೊಚ್ಚಿ ಹೋಗಿದೆ. ಈ ರಸ್ತೆ ಗಳ ದುರಸ್ತಿಗೆ ರಾಜ್ಯ ಸರ್ಕಾರ ಪ್ರತಿ ಕಿ.ಮೀಗೆ 60 ಸಾವಿರ ನಿಗದಿ ಮಾಡಿದೆ, ಆದರೆ ಸರ್ಕಾರ ನಿಗದಿ ಪಡಿಸಿರುವ 60 ಸಾವಿರದಿಂದ ಗುಂಡಿಗಳನ್ನು ಮುಚ್ಚಲುಸಾದ್ಯವೆ ಇಲ್ಲ. ಆದ್ದರಿಂದ ಈ ಬಗ್ಗೆ ಸರ್ಕಾರದ ಜತೆ ಮಾತನಾಡುವುದಾಗಿ ತಿಳಿಸಿ, ಅಧಿಕಾರಿಗಳು ಗುಂಡಿ ಬಿದ್ದ ಮತ್ತು ದುರಸ್ತಿ ರಸ್ತೆಯ ವರದಿ ಸಿದ್ಧ ಮಾಡಿಕೊಳ್ಳಿ ಅವಶ್ಯಕತೆ ಬಿದ್ದರೆ ಅಧಿಕಾರಿಗಳು ಗುಂಡಿಗಳು ಹೆಚ್ಚಾಗಿಬಿದ್ದಿದೆ ಎಂದು ದಾಖಲೆ ತೋರಿಸಿ ಹೆಚ್ಚು ಅನುದಾನ ತಂದು ಗುಂಡಿ ಬಿದ್ದ ರಸ್ತೆಗಳು ಮತ್ತು ಕೊಚ್ಚಿಹೋಗಿರುವ ರಸ್ತೆಗಳನ್ನು ದುರಸ್ತಿ ಮಾಡಿಕೊಳ್ಳ ಬೇಕು ಎಂದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆ ಆಧಿಕಾರಿಗಳು ತಂತಮ್ಮ ಇಲಾಖೆಗಳ ಪ್ರಗತಿ ಬಗ್ಗೆಮಾಹಿತಿ ನೀಡಿದರು. ಶಾಸಕ ರೇವಣ್ಣ ಅವರೊಂದಿಗೆತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ತಾಪಂ ವ್ಯವಸ್ಥಾಪಕ ಅರುಣ್ ಇತರರಿದ್ದರು.