ಹೈದರಬಾದ್: ಯುವತಿಯರು ಕಾಲೇಜಿಗೆ ತುಂಡು ಉಡುಗೆ ಧರಿಸಿ ಬರುವುದನ್ನು ನಿಷೇಧಿಸಲು ಗಂಭೀರ ಚಿಂತನೆ ನಡೆಸಿರುವ ಮಹಿಳಾ ಕಾಲೋಜೊಂದು ವಿಭಿನ್ನ ಉಪಾಯ ಮಾಡಿದೆ.
ಹೈದರಬಾದ್ ಮಹಿಳಾ ಕಾಲೇಜು ಜಾರಿ ಮಾಡಿರುವ ವಸ್ತ್ರಸಂಹಿತೆಯ ಪ್ರಕಾರ ಯಾವುದೇ ಯುವತಿಯರು ಶಾರ್ಟ್ಸ್ ಮತ್ತು ತೋಳು ಇಲ್ಲದ ಬಟ್ಟೆಗಳನ್ನು ಧರಿಸುವಂತಿಲ್ಲ. ಆದರೇ ಈ ಕಾಲೇಜಿನಲ್ಲಿ ಹೆಚ್ಚಿನ ಹುಡುಗಿಯರು ಶಾರ್ಟ್ಸ್ ಧರಿಸಿಕೊಂಡೇ ಬರುತ್ತಿದ್ದರು. ಇದು ಕಾಲೇಜು ನಿಯಮದ ಉಲ್ಲಂಘನೆಯಾಗಿದ್ದರಿಂದ ಆಡಳಿತ ಮಂಡಳಿ ಭಿನ್ನ ಚಿಂತನೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ.
ಕಾಲೇಜಿನ ವಿಭಿನ್ನ ಉಪಾಯ: ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ಮಂಡಿ ಮುಚ್ಚುವ ರೀತಿಯಲ್ಲಿನ ಉದ್ದನೆ ಕುರ್ತಿಗಳನ್ನು ಧರಿಸಿದರೇ ಭವಿಷ್ಯದಲ್ಲಿ ಉತ್ತಮ ಮದುವೆ ಪ್ರಸ್ತಾಪಗಳು ಬರುತ್ತವೆ. ಇದರಿಂದ ಜೀವನದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಲಹೆ ನೀಡಿತ್ತು. ಆ ಮೂಲಕ ತುಂಡು ಉಡುಗೆಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು.
ಅದರೂ ಹೆಚ್ಚಿನ ವಿದ್ಯಾರ್ಥಿನಿಯರು ತಮ್ಮ ನೆಚ್ಚಿನ ಶಾರ್ಟ್ಸ್ ಧರಿಸಿಕೊಂಡೇ ಕಾಲೇಜಿಗೆ ಬಂದಿದ್ದರು. ಇದರಿಂದ ಕಾಲೇಜು ಆಡಳಿತ ಮಂಡಳಿ ತರಗತಿಗೆ ಹಾಜರಾಗದಂತೆ ಸೂಚನೆ ನೀಡಿದ್ದರಿಂದ ವಿದ್ಯಾರ್ಥಿನಿಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.