Advertisement

ಶಾರ್ಟ್ ಸರ್ಕ್ಯೂಟ್ ಅಂಗಡಿಗಳು ಭಸ್ಮ: ಸುಟ್ಟು ಕರಕಲಾದ ಲಕ್ಷಾಂತರ ಮೌಲ್ಯದ ವಸ್ತುಗಳು!

10:07 AM May 07, 2023 | Team Udayavani |

ಕುರುಗೋಡು: ಪಟ್ಟಣದ ತೇರುಬೀದಿಯಲ್ಲಿ ಬೆಳಂಬೆಳ್ಳಗ್ಗೆ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದ ನಾಲ್ಕು ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಭಾನುವಾರ ಬೆಳಗಿನ ಜಾವ 3.40ಕ್ಕೆ ಜರುಗಿದೆ.

Advertisement

ಅದೃಷ್ಟವಶಾತ್ ಯಾವುದೇ ಸಾವು,ನೋವು ಸಂಭವಿಸಿಲ್ಲ. ಇನ್ನೂ ತೇರುಬೀದಿ ರಸ್ತೆಯಲ್ಲಿ ಒಂದಕ್ಕೊಂದು ಅಂಟಿಕೊಂಡಿರುವಂತೆ ಇರುವ ಈ ಅಂಗಡಿಗಳು. ಮೆಕಾನಿಕ್ ಅಂಗಡಿ ಮಾಲಿಕ ಮೆಕಾನಿಕ್ ದಾದ,ಸೋಡಾ ಅಂಗಡಿಯ ಮಾಲಿಕ ಸೀನ,ಜನರಲ್ ಸ್ಟೋರ್ ಅಂಗಡಿಯ ಮಾಲಿಕ ವೀರೇಶ್, ಲೈಟಿಂಗ್ ಅಂಗಡಿಯ ಮಾಲೀಕ ದುರ್ಗಾ ರವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಘಟನೆಗೆ ಶಾರ್ಟ್ ಸರ್ಕ್ಯೂಟ್ ಮುಖ್ಯ ಕಾರಣವೆಂದು ತಿಳಿದು ಬಂದಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಅಗ್ನಿ ಶಾಮಕದಳದ ನಿರ್ಲಕ್ಷ್ಯಕ್ಕೆ ಸ್ಥಳಿಯರ ಖಂಡನೆ
ಅಗ್ನಿ ಅವಘಡ ಸಂಭವಿಸಿದ ಕೂಡಲೇ ಸ್ಥಳಿಯರು ಅಗ್ನಿಶಾಮಕ ಠಾಣೆಗೆ ಕರೆಮಾಡಿ ವಿಷಯ ತಿಳಿಸಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವ ಕಾರ್ಯಕ್ಕೆ ಮುಂದಾದರೂ ಪ್ರಯೋಜನವಾಗಿಲ್ಲ.

ಪ್ರಾರಂಭದಲ್ಲಿ ಎರಡು ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ,ಅಗ್ನಿ ಶಾಮಕ ಸಿಬ್ಬಂದಿ ತಂದ ವಾಹನದಲ್ಲಿ ನೀರು ಖಾಲಿಯಾದ ಪರಿಣಾಮ ಇನ್ನೊಂದು ವಾಹನ ತರುವಂತೆ ಜನ ಕೇಳಿಕೊಂಡರೂ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಇನ್ನೆರಡು ಅಂಗಡಿಗಳಿಗೂ ಬೆಂಕಿ ಹೊತ್ತಿಕೊಂಡಿದೆ.ಈ ಸಂದರ್ಭದಲ್ಲಿ ಸ್ಥಳೀಯ ಜನರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನೆಡೆದಿದೆ.

Advertisement

ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಇನ್ನೊಂದು ನೀರಿನ ಟ್ಯಾಂಕರ್ ಕರೆಸಿದ್ದರೆ ಹೆಚ್ಚಿನ ಅಪಾಯ ತಪ್ಪಿಸಬಹುದಿತ್ತು ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.

ಉಳಿದ ಮೂರು ಜೀವಗಳು
ಜನರಲ್ ಸ್ಟೋರ್ ಅಂಗಡಿಯ ಮಾಲೀಕ ವೀರೇಶ್ ಅದೇ ಅಂಗಡಿಯ ಹಿಂದುಗಡೆಯೇ ಮನೆಯಿದ್ದು ಗಂಡ, ಹೆಂಡತಿ ಮಕ್ಕಳು ಮಲಗಿದ್ದರು.

ಈ ಸಂದರ್ಭದಲ್ಲಿ ಅಗ್ನಿ ಅವಘಡ ಕಂಡ ಸ್ಥಳೀಯರು ಬಾಗಿಲು ಬಡಿದು ಅವರನ್ನು ಹೊರಗೆ ಕರೆತಂದಿದ್ದರಿಂದ ಮೂರು ಜೀವಗಳು ಉಳಿಯಲು ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next