Advertisement

ದಿಢೀರ್ ಮಾರ್ಗಸೂಚಿ ಬದಲಾವಣೆ : ಕಲಬುರಗಿಯಲ್ಲಿ ಅಂಗಡಿಗಳು ಬಂದ್

05:14 PM Apr 22, 2021 | Team Udayavani |

ಕಲಬುರಗಿ : ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿಗೆ ಕಡಿವಾಣ ಹಾಕಲು ಮಾರ್ಗಸೂಚಿ ಬದಲಿಸಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲಿಯೇ ಕಲಬುರಗಿ ನಗರದಲ್ಲಿ ಪೊಲೀಸ್ ಪಡೆ ಅಖಾಡಕ್ಕೆ ಇಳಿದಿದೆ. ಪ್ರಮುಖ ಪ್ರದೇಶದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಲು ಆರಂಭಿಸಲಾಗಿದೆ.

Advertisement

ಗುರುವಾರ ಮಧ್ಯಾಹ್ನದ ಹೊತ್ತಿಗೆ ಏಕಾಏಕಿ ಎಲ್ಲೆಡೆ ಅಘೋಷಿತ  ಲಾಕಡೌನ್ ಪರಿಣಾಮ ಜಿಲ್ಲೆಯಲ್ಲಿನ‌ ಅಂಗಡಿ‌ ಮಂಗಟ್ಟು ಬಂದ್ ಮಾಡಿಸುವ ಕೆಲಸ ಆರಂಭಿಸಿದ್ದಾರೆ.

ನಗರದ ಬಸ್ ನಿಲ್ದಾಣ, ಮಿಲ್‌ ರಸ್ತೆ , ಪಟೇಲ್  ಸರ್ಕಲ್ ಮೊದಲಾದ ಭಾಗದಲ್ಲಿರುವ ಅಂಗಡಿಗಳ ಬಾಗಿಲುಗಳನ್ನು ಪೊಲೀಸರು  ಬಂದ್ ಮಾಡಿಸುತ್ತಿದ್ದಾರೆ.

ಇನ್ನು ಕೇವಲ ಕಲಬುರಗಿ ಮಾತ್ರವಲ್ಲದೆ ಬೆಳಗಾವಿ ಸೇರಿದಂತೆ ಕೆಲವು ರಾಜ್ಯಗಲ್ಲಿಯೂ ತುರ್ತು ಸೇವೆಗಳನ್ನು ಹೊರತು ಪಡಿಸಿ ಎಲ್ಲ ಅಂಗಡಿಗಳನ್ನು ಮುಚ್ಚಿಸುತ್ತಿರುವ ಸನ್ನಿವೇಶಗಳು ಕಂಡು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next