Advertisement

ಗುಂಡಿನ ಕಾಳಗ; ಯೋಧರಿಬ್ಬರು ಹುತಾತ್ಮ; 3 ಉಗ್ರರು ಫಿನಿಶ್‌

10:12 AM Aug 13, 2017 | Team Udayavani |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ಅವ್ನೀರಾ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಮೂವರು ಹಿಜ್ಬುಲ್‌ ಮುಜಾಯಿದ್ದೀನ್‌  ಉಗ್ರರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. 

Advertisement

ದಟ್ಟಾರಣ್ಯದಲ್ಲಿ ಉಗ್ರರ ಇರುವಿಕೆಯ ಖಚಿತ ಮಾಹಿತಿಯ ಮೇಲೆ ಜಂಟಿ ದಾಳಿ ನಡೆಸಿದ ಯೋಧರು ಮತ್ತು ಪೊಲೀಸರು ಭಾರೀ ಗುಂಡಿನ ಚಕಮಕಿ ನಡೆಸಿದ್ದಾರೆ . ಈ ವೇಳೆ ಇಬ್ಬರು ಯೋಧರು ಹುತಾತ್ಮರಾದರೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಓರ್ವನನ್ನು ಮೊದಲು ಹತ್ಯೆಗೈಯಲು ಯಶಸ್ವಿಯಾದರೆ  ಅಡಗಿದ್ದ ಇನ್ನಿಬ್ಬರು ಉಗ್ರರಿಗಾಗಿ ಭಾರೀ ಕಾರ್ಯಾಚರಣೆ ನಡೆಸಬೇಕಾಯಿತು ಎಂದು ಸೇನಾ ಮೂಲಗಳು ತಿಳಿಸಿವೆ.

ಉಗ್ರರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಗಾಯಾಳು ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶನಿವಾರೈ ಶೋಪಿಯಾನ್‌  ಸೇನಾ ಶಿಬಿರವೊಂದರ ಮೇಲೆ ಉಗ್ರರು ನಡೆಸಿದ್ದ ದಾಳಿ ಯಲ್ಲಿ ಗಾಯಗೊಂಡ ಯೋಧ ರೊಬ್ಬರು ತಡರಾತ್ರಿ ಹುತಾತ್ಮರಾಗಿರುವ ಬಗ್ಗೆ ವರದಿಯಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next