ಮಲಪ್ಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ಕುರಿತ ಸಿನಿಮಾವನ್ನು ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅಪ್ ಡೇಟ್ ಮಾಡಿದ್ದಕ್ಕೆ ಆಕ್ರೋಶಗೊಂಡ ಕೆಲವು ವ್ಯಕ್ತಿಗಳು ಸಿಪಿಐ ಸ್ಥಳೀಯ ಮುಖಂಡ ಪ್ರಗೀಲೇಶ್ ಎಂಬವರ ಅಂಗಡಿಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದ್ದು, ಇದು ತಡವಾಗಿ ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕಿಡ್ ಆದ ಸ್ಕೂಟಿ; ಲಾರಿ ಹರಿದು ಯುವತಿ ದಾರುಣ ಅಂತ್ಯ
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿನ ಸಿ.ಪ್ರಗೀಲೇಶ್ ಮಾಲೀಕತ್ವದ ಲೈಟ್ ಆ್ಯಂಡ್ ಸೌಂಡ್ ಸರ್ವೀಸ್ ಅಂಗಡಿಯೊಂದನ್ನು ಜನವರಿ 1ರಂದು ರಾತ್ರಿ ಧ್ವಂಸಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
“ಮಲಿಕಪ್ಪುರಂ” ಸಿನಿಮಾವನ್ನು ಹೊಗಳಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ನಂತರ ಸಿಪಿಐ ಮುಖಂಡ ಪ್ರಗೀಲೇಶ್ ಅವರ ಅಂಗಡಿ ಮೇಲೆ ದಾಳಿ ನಡೆಸುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಒಡ್ಡಿದ್ದರು.
ನಟ ಉನ್ನಿ ಮುಕುಂದನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಬೇಕೆಂಬ ಬಲವಾದ ಆಸೆಯನ್ನು ಹೊಂದಿರುವ ಪುಟ್ಟ ಹಳ್ಳಿಯ ಕಥೆಯನ್ನೊಳಗೊಂಡಿದೆ ಮಲಿಕಪ್ಪುರಂ ಸಿನಿಮಾ.