Advertisement
ಪ್ರಕರಣದ ವಿವರವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಕೃಷ್ಣಾಪುರದ ನಿವಾಸಿ, ಕುಖ್ಯಾತ ರೌಡಿ ಹಾಗೂ ಟಾರ್ಗೆಟ್ ಗ್ರೂಪ್‌ನ ಉಮ್ಮರ್ ಫಾರೂಕ್(32) ಪಚ್ಚನಾಡಿ ಮಾರ್ಗದಲ್ಲಿ ಓಡಾಡುತ್ತಿದ್ದಾನೆ ಎಂಬ ಮಾಹಿತಿ ಆಧಾರದಲ್ಲಿ ಆತನನ್ನು ಬಂಧಿಸಲು ರಾತ್ರಿ ಸುಮಾರು 12.30ರ ವೇಳೆಗೆ ಕಂಕನಾಡಿ ನಗರ ಪೊಲೀಸರು ತೆರಳಿದ್ದರು. ಈ ಸಂದರ್ಭ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಕಾನ್‌ಸ್ಟೆಬಲ್ ಸಂದೀಪ್ (35) ಗಾಯಗೊಂಡರು. ಕೂಡಲೇ ಪ್ರತಿ ದಾಳಿಗೆ ಮುಂದಾದ ಪೊಲೀ ಸರು ಗುಂಡು ಹಾರಿಸಿದ್ದು, ಆಗ ಉಮ್ಮರ್ ಫಾರೂಕ್‌ಗೂ ಗಾಯವಾಗಿದೆ. ಗಾಯಗೊಂಡಿರುವ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಸಮೀರ್‌ನ ಕೊಲೆಗೆ ಸ್ಕೆಚ್ ಹಾಕುತ್ತಿದ್ದ ಪ್ರಕರಣದ ಮತ್ತೋರ್ವ ಆರೋಪಿ ಉಳ್ಳಾಲದ ಟೊಮೆಟೋ ಫಾರೂಕ್ ಯಾನೆ ಎವರೆಸ್ಟ್ ಫಾರೂಕ್ ಎಂಬಾತನನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಮ್ಮರ್ ಫಾರೂಕ್ ಹಾಗೂ ಈತ ಬೈಕ್‌ನಲ್ಲಿ ಮಂಗಳವಾರ ತಡರಾತ್ರಿ ಪಚ್ಚನಾಡಿಯಲ್ಲಿ ಬರುತ್ತಿದ್ದಾಗ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದು ತಪ್ಪಿಸಿಕೊಳ್ಳುವ ಹಂತದಲ್ಲೇ ಉಮ್ಮರ್ ಫಾರೂಕ್ ಡ್ಯಾಗರ್‌ನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಆಗ ಆತನಿಗೆ ಶೂಟ್ ಮಾಡಲಾಗಿದೆ. ಈಗ ಇಬ್ಬರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ರೌಡಿಗಳು ದಾಳಿ ನಡೆಸಿರುವುದು ಒಂದು ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಮೇ 9ರಂದು ರೌಡಿ ಶೀಟರ್ ಗೌರೀಶನನ್ನು ಬಂಧಿಸಲು ಜಪ್ಪಿನಮೊಗರಿಗೆ ತೆರಳಿದ್ದ ಸಿಸಿಬಿ ಪೊಲೀಸರ ಮೇಲೆ ಆತ ಚಾಕುವಿನಿಂದ ಹಲ್ಲೆ ನಡೆಸಿದ್ದ. ಆಗ ಪೊಲೀಸರು ಪ್ರತಿ ದಾಳಿ ನಡೆಸಿ ರೌಡಿಯನ್ನು ಬಂಧಿಸಿದ್ದರು. ಆಗ ಗೌರೀಶ ಮತ್ತು ಸಿಸಿಬಿ ಪೊಲೀಸ್ ಸಿಬಂದಿ ಶೀನಪ್ಪ ಗಾಯ ಗೊಂಡಿದ್ದರು.
Advertisement
ಟಾರ್ಗೆಟ್ ಗ್ರೂಪ್ ಪುನಃಶ್ಚೇತನಕ್ಕೆ ಯತ್ನಿಸಿದ್ದಉಮ್ಮರ್ ಫಾರೂಕ್ ಟಾರ್ಗೆಟ್ ಗ್ರೂಪಿನ ದಿ| ಇಲಿಯಾಸ್‌ನ ಭಾವನಾಗಿದ್ದಾನೆ. 2018ರಲ್ಲಿ ಇಲಿಯಾಸ್ ಕೊಲೆಯಾದ ಬಳಿಕ ಟಾರ್ಗೆಟ್ ಗ್ರೂಪ್ ಹೆಚ್ಚು ಸಕ್ರಿಯವಾಗಿರಲಿಲ್ಲ. ಆ ಗ್ರೂಪನ್ನು ಮತ್ತೆ ಸಂಘಟಿಸಲು ಉಮ್ಮರ್ ಯತ್ನಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಇಲಿಯಾಸ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಸಮೀರ್‌ನನ್ನು ಕೊಲ್ಲಲು ಉಮ್ಮರ್ ತನ್ನ ಸಹಚರ ಸುರ್ಮಾ ಇಮ್ರಾನ್ ಹಾಗೂ ಇತರರ ಜತೆಗೂಡಿ ಸಂಚು ರೂಪಿಸಿದ್ದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದಲ್ಲದೆ ಎಂ.ಎ. ಹಸನ್ ಬಾವ ಎಂಬವರಿಂದ ಬಲವಂತವಾಗಿ ಹಣ ವಸೂಲಿ ಮಾಡಿರುವ ಬಗ್ಗೆ ಎರಡು ವಾರಗಳ ಹಿಂದೆ ಉಮ್ಮರ್ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎರಡು ಪ್ರಕರಣಗಳಿಗೆ ಸಂಬಂಧಿಸಿ ಆತ ನನ್ನು ಬಂಧಿ ಸಲು ಪೊಲೀಸ್ ತಂಡ ತೆರ ಳಿತ್ತು ಎಂದು ಆಯುಕ್ತ ಸಂದೀಪ್ ಪಾಟೀಲ್ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ. 9 ಪ್ರಕರಣಗಳ ಹಳೆ ಆರೋಪಿ
ಉಮ್ಮರ್ ಫಾರೂಕ್ ಹಳೆ ಆರೋ ಪಿಯಾಗಿದ್ದು, ಆತನ ಮೇಲೆ ಈ ಹಿಂದೆ 9 ಪ್ರಕರಣಗಳು ದಾಖ ಲಾಗಿವೆ. ಟಾರ್ಗೆಟ್ ಗ್ರೂಪ್‌ನಲ್ಲಿ ಗುರುತಿಸಿಕೊಂಡಿದ್ದ ಆತ ಜನ ರನ್ನು ಹೆದರಿಸುವುದು, ಸುಲಿಗೆ ಮಾಡುವುದು ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿದ್ದ. ಆತನ ಮೇಲೆ ಕಠಿನ ಕಾನೂನು ಕ್ರಮ ಜರಗಿಸಲಾಗುವುದು. ಈ ನಿಟ್ಟಿ ನಲ್ಲಿ ತನಿಖೆ ಮುಂದುವರಿದಿದೆ. ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ಕಠಿನ ಕ್ರಮ ಕೈಗೊ ಳ್ಳ ಲಾ ಗು ತ್ತಿದೆ. ಆದ್ದರಿಂದ ಯಾರಾ ದರೂ ಬೆದರಿಕೆ ಅಥವಾ ಹಣಕ್ಕಾಗಿ ಒತ್ತಾಯಿಸಿದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.