Advertisement

ಶೂಟಿಂಗ್‌ ವಿಶ್ವಕಪ್‌ನಿಂದ ಹಿಂದೆ ಸರಿದ ಭಾರತ

09:05 AM Mar 01, 2020 | Suhan S |

ನವದೆಹಲಿ: ಕೊರೊನಾ ವೈರಸ್‌ನ ಪರಿಣಾಮ ಭಾರತ ಮುಂದಿನ ತಿಂಗಳು ಸೈಪ್ರಸ್‌ನಲ್ಲಿ ನಡೆಯಲಿರುವ ಶಾಟ್‌ಗನ್‌ ಶೂಟಿಂಗ್‌ ವಿಶ್ವಕಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಮಾ. 4ರಿಂದ 13ರ ವರೆಗೆ ವಿಶ್ವಕಪ್‌ ಕೂಟಕ್ಕೆ ವೇಳಾಪಟ್ಟಿ ನಿಗದಿಯಾಗಿದೆ. “ಕೊರೊನಾದಿಂದಾಗಿ ಕೆಲವೊಂದು ರಾಷ್ಟ್ರ ಗಳು ಪ್ರಯಾಣಕ್ಕೆ ನಿಷೇಧ ಹೇರಿವೆ. ಭಾರತ ಸರ್ಕಾರ ಕೂಡ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ’ ಎಂದು ಭಾರತ ರಾಷ್ಟ್ರೀಯ ರೈಫ‌ಲ್‌ ಸಂಸ್ಥೆ (ಎನ್‌ಆರ್‌ಎಐ) ತಿಳಿಸಿದೆ.

Advertisement

ಸೈಪ್ರಸ್‌ ವಿಶ್ವಕಪ್‌ ಬಳಿಕ ಮುಂದಿನ ಐಎಸ್‌ಎಸ್‌ಎಫ್ ವಿಶ್ವ ಕಪ್‌ ಮಾ. 16ರಿಂದ ನವದೆಹಲಿಯಲ್ಲಿ ನಡೆಯಲಿದೆ. ಹೀಗಾಗಿ ಭಾರತೀಯ ಶೂಟರ್‌ಗಳು ಮಾ. 12ರಿಂದು ತವರಿಗೆ ಮರಳಬೇಕಾಗಿದೆ. ಒಂದು ವೇಳೆ ತಂಡದ ಯಾರಿಗಾದರೂ ಸೋಂಕು ತಗುಲಿದರೆ ಅವರು ದಿಲ್ಲಿಯಲ್ಲಿ ನಡೆಯುವ ಕೂಟದಲ್ಲಿ ದೇಶವನ್ನು ಪ್ರತಿನಿಧಿಸಲು ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಭಾರತೀಯ ತಂಡ ಕೂಟದಿಂದ ಹಿಂದೆ ಸರಿದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next