ಅರ್ಹತೆ ಪಡೆದಿದ್ದಾರೆ. ಇದು ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿದ 5ನೇ ಒಲಿಂಪಿಕ್ ಕೋಟಾ.
Advertisement
ಶನಿವಾರ ನಡೆದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ಒಟ್ಟು 242.7 ಅಂಕ ಸಂಪಾದಿಸಿದ ಅಭಿಷೇಕ್ ಚಿನ್ನ ಗೆದ್ದರು. ರಶ್ಯದ ಅರ್ಟೆಮ್ ಚೆನೌìಸೋವ್ ಬೆಳ್ಳಿ (240.4) ಮತ್ತು ಕೊರಿಯದ ಸಿಂಗ್‌ವೊ ಹ್ಯಾನ್ (220.0) ಕಂಚಿನ ಪದಕ ಗೆದ್ದರು. ಅಭಿಷೇಕ್ ವರ್ಮ ಪಾಲಿಗೆ ಇದು ಮೊದಲ ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌ವಾಗಿತ್ತು. ಏಶ್ಯಾಡ್‌ನಲ್ಲಿ ಇದೇ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ ಹೆಗ್ಗಳಿಕೆ ಇವರ ಪಾಲಿಗಿದೆ.
ಈ ಮೂಲಕ ಭಾರತ ಇಲ್ಲಿಯ ವರೆಗೆ ಒಟ್ಟು 5 ಒಲಿಂಪಿಕ್ ಕೋಟಾಗಳನ್ನು ಸಂಪಾದಿಸಿದಂತಾ ಯಿತು. ವರ್ಷದ ಆರಂಭದಲ್ಲಿ ಹೊಸದಿಲ್ಲಿಯಲ್ಲಿ ನಡೆದ ವಿಶ್ವಕಪ್ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ಒಲಿಂಪಿಕ್ ಅರ್ಹತೆ ಪಡೆದಿದ್ದರು. ಈಗ ಈ ವಿಭಾಗದ ಎರಡೂ ಒಲಿಂಪಿಕ್ ಕೋಟಾಗಳು ಭಾರತದ ಪಾಲಾಗಿವೆ. ಹೊಸದಿಲ್ಲಿಯಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಅಭಿಷೇಕ್, ತವರಿನಲ್ಲಿ ಫೈನಲ್ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಶನಿವಾರದ ಅರ್ಹತಾ ಸುತ್ತಿನಲ್ಲಿ 585 ಅಂಕ ಪಡೆದು 4ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದರು.
Related Articles
Advertisement
ಉಳಿದಂತೆ ಅಂಜುಮ್ ಮೌದ್ಗಿಲ್ ಮತ್ತು ಅಪೂರ್ವಿ ಚಾಂಡೇಲ (ವನಿತೆಯರ 10 ಮೀ. ಏರ್ ರೈಫಲ್), ದಿವ್ಯಾಂಶ್ ಸಿಂಗ್ ಪನ್ವಾರ್ (ಪುರುಷರ 10 ಮೀ. ಏರ್ ರೈಫಲ್) ಟೋಕಿಯೊ ಒಲಿಂಪಿಕ್ ಅರ್ಹತೆ ಸಂಪಾದಿಸಿದ್ದಾರೆ.