Advertisement

ಟೋಕಿಯೊ ಒಲಿಂಪಿಕ್‌ ಟಿಕೆಟ್‌ ಪಡೆದ ಭಾರತೀಯರಿಂದ ಶೂಟಿಂಗ್‌ ಅಭ್ಯಾಸ

12:26 AM Jul 10, 2020 | Sriram |

ಹೊಸದಿಲ್ಲಿ: ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ ಕೂಟದ ಅರ್ಹತೆ ಪಡೆದ ಭಾರತದ ರೈಫ‌ಲ್‌ ಶೂಟರ್‌ಗಳಾದ ದಿವ್ಯಾಂಶ್‌ ಪನ್ವಾರ್‌, ದೀಪಕ್‌ ಕುಮಾರ್‌ ಮತ್ತು ಸ್ಕೀಟ್‌ ಶೂಟರ್‌ ಮಿರಾಜ್‌ ಅಹ್ಮದ್‌ ಖಾನ್‌ ಇಲ್ಲಿನ “ಕರ್ಣಿ ಸಿಂಗ್‌ ರೇಂಜ್‌’ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಕೋವಿಡ್‌-19 ಲಾಕ್‌ಡೌನ್‌ ಬಳಿಕ ಇದೇ ಮೊದಲ ಬಾರಿಗೆ ಶೂಟಿಂಗ್‌ ರೇಂಜ್‌ನ ಬಾಗಿಲು ತೆರೆದಿದೆ.

Advertisement

ಕೋವಿಡ್‌ ಮಾರ್ಗಸೂಚಿ
“ನಾವು ಕೋವಿಡ್‌ ಮಾರ್ಗಸೂಚಿಯಂತೆ, ಇಬ್ಬರ ನಡುವೆ 5 ಲೇನ್‌ಗಳ ಅಂತರ ಕಾಯ್ದುಕೊಂಡು ಅಭ್ಯಾಸ ನಡೆಸುತ್ತಿದ್ದೇವೆ. ಇಲ್ಲಿ 10 ಅಡಿಗಳಷ್ಟು ಅಂತರ ವಿದೆ. ಎಲ್ಲರೂ ತಮಗಾಗಿ ನಿರ್ಮಿಸಲಾದ ಬ್ಯಾರಿಕೇಡ್‌ಗಳಲ್ಲೇ ನಿಲ್ಲುತ್ತೇವೆ’ ಎಂದು ದೀಪಕ್‌ ಕುಮಾರ್‌ ಹೇಳಿದರು.

ವಿಶ್ವದ ನಂ.1 ಏರ್‌ ರೈಫ‌ಲ್‌ ಶೂಟರ್‌ ದಿವ್ಯಾಂಶ್‌ ಪನ್ವಾರ್‌ ಮತ್ತು ಅವರ ಕೋಚ್‌ ದೀಪಕ್‌ ದುಬೆ ಬೆಳಗ್ಗೆ ಆಗಮಿಸಿ ಸತತ 4 ಗಂಟೆಗಳ ಕಾಲ ಅಭ್ಯಾಸ ನಡೆಸಿದರು. ಇಲ್ಲಿಯ ತನಕ ಪನ್ವಾರ್‌ ಮನೆಯಲ್ಲೇ ಅಭ್ಯಾಸ ಮಾಡುತ್ತಿದ್ದರು.

“ಶೂಟಿಂಗ್‌ ರೇಂಜ್‌ಗೆ ಮರಳಿದ್ದಕ್ಕಾಗಿ ಪನ್ವಾರ್‌ಗೆ ಬಹಳ ಖುಷಿಯಾಗಿದೆ. ಅವರು 90 ಸುತ್ತುಗಳ ಅಭ್ಯಾಸ ನಡೆಸಿದರು. ಇಲ್ಲಿ ಎಂದಿನ ಜನಸಂದಣಿ ಇರ ಲಿಲ್ಲ. ಇಡೀ ಹಾಲ್‌ನಲ್ಲಿ ಇಬ್ಬರೇ ಶೂಟರ್‌ಗಳಿದ್ದರು’ ಎಂದು ಕೋಚ್‌ ದೀಪಕ್‌ ದುಬೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next