Advertisement

ಶೂಟಿಂಗ್‌: ಭಾರತದ ಭವಿಷ್ಯದ ಶೂಟರ್‌ ಸಿಫ್ಟ್ ಕೌರ್‌ ಸಮ್ರಾಗೆ ಕಂಚು

10:26 PM Mar 26, 2023 | Team Udayavani |

ಭೋಪಾಲ್‌: ಭಾರತದ ಭವಿಷ್ಯದ ಶೂಟರ್‌ ಸಿಫ್ಟ್ ಕೌರ್‌ ಸಮ್ರಾ ಐಎಸ್‌ಎಸ್‌ಎಫ್ ರೈಫ‌ಲ್‌-ಪಿಸ್ತೂಲ್‌ ವಿಶ್ವಕಪ್‌ನಲ್ಲಿ ಕಂಚಿನ ಪದಕಕ್ಕೆ ಗುರಿ ಇರಿಸಿದ್ದಾರೆ. ಭಾನುವಾರದ 50 ಮೀ. ರೈಫ‌ಲ್‌ 3ಪಿ ವಿಭಾಗದಲ್ಲಿ ಅವರು ಈ ಸಾಧನೆಗೈದರು. ಅಂತಾರಾಷ್ಟ್ರೀಯ ಮಟ್ಟದ ಸೀನಿಯರ್‌ ಸ್ಪರ್ಧೆಯಲ್ಲಿ ಸಮ್ರಾ ಗೆದ್ದ ದ್ವಿತೀಯ ಪದಕ ಇದಾಗಿದೆ.

Advertisement

ಹಾಲಿ ರಾಷ್ಟ್ರೀಯ ಚಾಂಪಿಯನ್‌ ಕೂಡ ಆಗಿರುವ ಸಿಫ್ಟ್ ಕೌರ್‌ ಸಮ್ರಾ ರ್‍ಯಾಂಕಿಂಗ್‌ ರೌಂಡ್‌ನ‌ಲ್ಲಿ 403.9 ಅಂಕಗಳೊಂದಿಗೆ ತೃತೀಯ ಸ್ಥಾನಿಯಾದರು. ಚೀನಾದ ಝಾಂಗ್‌ ಕ್ವಿಯೊಂಗ್ಯು ಚಿನ್ನ(414.7) ಮತ್ತು ಜೆಕ್‌ ಗಣರಾಜ್ಯದ ಅನೆಟಾ ಬ್ರಬ್ಕೋವಾ(411.3) ಬೆಳ್ಳಿ ಗೆದ್ದರು. ಅಂಜುಮ್‌ ಮೌದ್ಗಿಲ್‌, ಮಾನಿನಿ ಕೌಶಿಕ್‌ ವಿಫ‌ಲರಾದರು.

ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಪ್ರಭುತ್ವ ಮುಂದುವರಿದಿದೆ. ಅದು 7 ಚಿನ್ನ, 2 ಬೆಳ್ಳಿ, 2 ಕಂಚು ಗೆದ್ದು ಅಗ್ರಸ್ಥಾನ ಅಲಂಕರಿಸಿದೆ. ಭಾರತ ದ್ವಿತೀಯ ಸ್ಥಾನದಲ್ಲಿದೆ. ಒಂದು ಚಿನ್ನ, ಒಂದು ಬೆಳ್ಳಿ ಹಾಗೂ 5 ಕಂಚು ಜಯಿಸಿದ್ದು ಭಾರತದ ಸಾಧನೆ.

Advertisement

Udayavani is now on Telegram. Click here to join our channel and stay updated with the latest news.

Next