Advertisement

ನಾರ್ತ್‌ ಕಾರೋಲಿನಾ ವಿವಿಯಲ್ಲಿ ಗುಂಡಿನ ದಾಳಿ;ಇಬ್ಬರು ಸಾವು

09:13 AM May 02, 2019 | Vishnu Das |

ಚಾರ್ಲೋಟ್ಟೆ(ಅಮೆರಿಕಾ): ನಾರ್ತ್‌ ಕರೋಲಿನಾದ ವಿವಿಯೊಂದರಲ್ಲಿ ಮಂಗಳವಾರ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಸ್ಥಳೀಯ ಮಾಧ್ಯಮಗಳ ವರದಿಯಂತೆ ಶಂಕಿತ ವಿದ್ಯಾರ್ಥಿಯಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿವಿಯ ಕೆನ್ನೆಡಿ ಹಾಲ್‌ ಬಳಿ ಸಂಜೆ 5.45 ರ ವೇಳೆ ಗುಂಡಿನ ದಾಳಿ ನಡೆಸಲಾಗಿದೆ.

ಗಾಯಾಳುಗಳಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next