ಅಮೆರಿಕಾ: ಟೆಕ್ಸಾಸ್ ನ ಎ & ಎಂ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿ, ಮಗುವೊಂದು ಗಾಯಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ 2 ವರ್ಷದ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಟೆಕ್ಸಾಸ್ ಎ&ಎಂ ಪೊಲೀಸ್ ಅಧಿಕಾರಿ ಬ್ರಯಾನ್ ವಾಘನ್ ತಿಳಿಸಿದ್ದಾರೆ. ಮಹಿಳೆಯರು ಅಥವಾ ಮಗುವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲಿಲ್ಲ ಎಂದು ವರದಿಯಾಗಿದೆ
ಬೆಳಿಗ್ಗೆ 10: 17ಕ್ಕೆ ವಿದ್ಯಾರ್ಥಿಯೊಬ್ಬ ಫೋನ್ ಕರೆ ಮಾಡಿ ಅಪರಿಚಿತರು ಗುಂಡಿನ ದಾಳಿ ನಡೆಸಿರುವ ಕುರಿತು ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕಾಗಮಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಆದರೇ ಮೃತಪಟ್ಟವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಅಥವಾ ಕಾಲೇಜಿನ ಸಿಬ್ಬಂದಿಯೇ ಎಂಬುದು ಧೃಡಪಟ್ಟಿಲ್ಲ ಎಂದು ತಿಳಿಸಿದ್ದಾರೆ.
ಆ ಮೂಲಕ ಇತ್ತೀಚಿನ ದಿನಗಳಲ್ಲಿ ಅಮೆರಿಕಾದಲ್ಲಿನ ಕಾಲೇಜು ಮತ್ತು ಫ್ರೌಡ ಶಾಲೆಗಳಲ್ಲಿ ನಡೆದ ಶೂಟೌಟ್ ಪ್ರಕರಣಗಳಲ್ಲಿ ಇದು ಒಂದೆನಿಸಿದೆ.
ಸದ್ಯ ಎ & ಎಂ-ಕಾಮರ್ಸ್ ವಿಶ್ವವಿದ್ಯಾಲಯದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಕಾಲೇಜಿನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.