Advertisement

ಅಮೆರಿಕದಲ್ಲಿ ಮತ್ತೊಂದು ಸಾಮೂಹಿಕ ಗುಂಡಿನ ದಾಳಿ; ಆಸ್ಪತ್ರೆ ಆವರಣದಲ್ಲಿ ನಾಲ್ವರ ಹತ್ಯೆ

10:56 AM Jun 02, 2022 | Team Udayavani |

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ನ ಶಾಲೆಯೊಂದಕ್ಕೆ ನುಗ್ಗಿದ್ದ 18 ವರ್ಷದ ಯುವಕನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿ 19 ಮಕ್ಕಳ ಹತ್ಯೆಗೈದ ಘಟನೆ ನಡೆದ ಬೆನ್ನಲ್ಲೇ ಶಸ್ತ್ರಾಸ್ತ್ರಧಾರಿ ವ್ಯಕ್ತಿಯೊಬ್ಬ ಆಸ್ಪತ್ರೆಯ ಆವರಣದೊಳಗಿದ್ದ ನಾಲ್ವರನ್ನು ಹತ್ಯೆಗೈದಿರುವ ಘಟನೆ ಬುಧವಾರ (ಜೂನ್ 01) ಓಕ್ಲಾಹೋಮಾದ ಟುಲ್ಸಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಉಪ್ಪಿನಂಗಡಿ: ಹಿಜಾಬ್ ಧರಿಸಿ ಕಾಲೇಜಿಗೆ ಬಂದ 6 ವಿದ್ಯಾರ್ಥಿನಿಯರ ಅಮಾನತು

ಟುಲ್ಸಾದಲ್ಲಿರುವ ಸೈಂಟ್ ಫ್ರಾನ್ಸಿಸ್ ಹೆಲ್ತ್ ಸಿಸ್ಟಮ್ ಆಸ್ಪತ್ರೆಯ ಕ್ಯಾಂಪಸ್ ನೊಳಕ್ಕೆ ನುಗ್ಗಿ ಸಾಮೂಹಿಕವಾಗಿ ನಾಲ್ವರನ್ನು ಹತ್ಯೆಗೈದಿದ್ದ ವ್ಯಕ್ತಿಯ ಬಳಿ ರೈಫಲ್ ಮತ್ತು ಹ್ಯಾಂಡ್ ಗನ್ ಹೊಂದಿದ್ದು, ಶೂಟರ್ ಕೂಡಾ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.

ಘಟನೆಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದು, ಶೂಟರ್ ಕೂಡಾ ಸಾವಿಗೀಡಾಗಿದ್ದಾನೆ. ಈತ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿ ಟುಲ್ಸಾ ಪೊಲೀಸ್ ಇಲಾಖೆಯ ಡೆಪ್ಯುಟಿ ಚೀಫ್ ಎರಿಕ್ ಡಾಲ್ಗೆಲಿಶ್ ತಿಳಿಸಿದ್ದಾರೆ.

ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಯ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next