Advertisement
48 ಶಾಟ್‌ಗಳ ಫೈನಲ್‌ನಲ್ಲಿ ಅಪೂರ್ವಿ ಚಾಂಡೇಲ-ರವಿ ಕುಮಾರ್ 429.9 ಅಂಕ ಸಂಪಾದಿಸಿ ತೃತೀಯ ಸ್ಥಾನಿಯಾದರು. ಚೈನೀಸ್ ತೈಪೆಯ ಯಿಂಹ್‌ಶಿನ್ ಲಿನ್-ಶೊಚುವಾನ್ ಲು ಚಿನ್ನ ಗೆದ್ದರೆ (494.1 ಅಂಕ), ಚೀನದ ರೌಝು ಜಾವೊ-ಹೊರಾನ್ ಯಾಂಗ್ ರಜತವನ್ನು ತಮ್ಮದಾಗಿಸಿಕೊಂಡರು (492.5 ಅಂಕ).
ಇದು ಅಪೂರ್ವಿ ಚಾಂಡೇಲ ಪಾಲಾದ ಮೊದಲ ಏಶ್ಯಾಡ್ ಪದಕ. 10 ಮೀ. ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲೂ ಅವರು ಕಣಕ್ಕಿಳಿಯುವರು. ಇದೇ ವಿಭಾಗದ 2014ರ ಗ್ಲಾಸೊY ಕಾಮನ್ವೆಲ್ತ್ ಗೇಮ್ಸ್ ಸ್ಪರ್ಧೆಯಲ್ಲಿ ಅವರು ಬಂಗಾರದಿಂದ ಸಿಂಗಾರಗೊಂಡಿದ್ದರು.
Related Articles
“ಅಪೂರ್ವಿಯಿಂದಾಗಿ ಈ ಕಂಚು ನನಗೆ ಲಭಿಸಿತು. ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಫೈನಲ್ ಸ್ಪರ್ಧೆ ನಿರಾಸೆ ತಂದಿದೆ. ನಮ್ಮಿಬ್ಬರಿಗೆ ಒಟ್ಟಾಗಿ ಅಭ್ಯಾಸ ನಡೆಸಲು ಹೆಚ್ಚಿನ ಅವಕಾಶ ಲಭಿಸಲಿಲ್ಲ’ ಎಂಬುದು ರವಿ ಕುಮಾರ್ ಪ್ರತಿಕ್ರಿಯೆ.
Advertisement
“ವಿಶ್ವಕಪ್‌ನಲ್ಲಿ ನಾವಿಬ್ಬರೂ 4ನೇ ಸ್ಥಾನ ಸಂಪಾದಿಸಿದ್ದೆವು. ಇದು ನನ್ನ ಮೊದಲ ಏಶ್ಯಾಡ್ ಪದಕ ಹಾಗೂ ಈ ಕೂಟದಲ್ಲಿ ದೇಶಕ್ಕೆ ಲಭಿಸಿದ ಮೊದಲ ಪದಕವೂ ಆಗಿದೆ. ಇದಕ್ಕಾಗಿ ಬಹಳ ಖುಷಿಯಾಗುತ್ತಿದೆ. ಇದು ನಾಳಿನ 10 ಮೀ. ರೈಫಲ್ ಸ್ಪರ್ಧೆಗೆ ಸ್ಫೂರ್ತಿ ತುಂಬಿದೆ’– ಅಪೂರ್ವಿ ಚಾಂಡೇಲ