Advertisement

ಶೂಟರ್‌, ಟೆನಿಸ್‌ ಪಟುಗಳಿಗೆ ದಿನಭತ್ಯೆಯೇ ಸಿಕ್ಕಿಲ್ಲ!

10:49 AM Aug 26, 2018 | Harsha Rao |

ಜಕಾರ್ತಾ: ಏಶ್ಯನ್‌ ಗೇಮ್ಸ್‌ ಬಹುತೇಕ ಮುಗಿಯುತ್ತ ಬಂದಿದೆ. ಇನ್ನೊಂದು ವಾರಕ್ಕೆ ಕೂಟವೇ ಮುಗಿಯುತ್ತದೆ. ವಿಪ ರ್ಯಾಸವೆಂದರೆ ಕೂಟ ಮುಗಿಸಿ ಮನೆಯತ್ತ ಹೊರಟಿದ್ದರೂ ಭಾರತೀಯ ಟೆನಿಸ್‌ ಹಾಗೂ ಶೂಟಿಂಗ್‌ ಸ್ಪರ್ಧಿಗಳಿಗೆ ದಿನ ಭತ್ಯೆಯೇ ಸಿಕ್ಕಿಲ್ಲ. ಪ್ರತಿ ಸ್ಪರ್ಧಿಗಳಿಗೆ ದಿನಭತ್ಯೆಯಾಗಿ ಪ್ರತಿದಿನ 3,500 ರೂ. ನೀಡಬೇಕು.

Advertisement

ಬಹುತೇಕ ಟೆನಿಸ್‌ ಆಟಗಾರರು ಏಶ್ಯಾಡ್‌ ಮುಗಿಸಿ ಬೇರೆ ಕೂಟಕ್ಕೆ ತೆರಳಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿರುವ ರೋಹನ್‌ ಬೋಪಣ್ಣ-ದಿವಿಜ್‌ ಶರಣ್‌ ಯುಎಸ್‌ ಓಪನ್‌ ಟೆನಿಸ್‌ಗೆ ತೆರಳಿದ್ದಾರೆ. ಶೂಟರ್‌ಗಳು ಚಾಂಗ್ವಾನ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ತೆರಳಿದ್ದಾರೆ. ಇದರಲ್ಲಿ ಬಹುತೇಕರಿಗೆ ದಿನಭತ್ಯೆ ಸಿಕ್ಕಿಲ್ಲ.

ಪ್ರತಿ ಆ್ಯತ್ಲೀಟ್‌ಗಳಿಗೂ ವಿದೇಶಿ ವಿನಿಮಯ ಕಾರ್ಡ್‌ ನೀಡಲಾಗಿದೆ. ಆದರೆ ಅದರಲ್ಲಿ ಹಣ ಮಾತ್ರ ಸಿಕ್ಕಿಲ್ಲ. ಕಾರಣ ಈ ಕಾರ್ಡ್‌ ಇನ್ನೂ ಸಕ್ರಿಯವಾಗಿಲ್ಲ. ಈ ಕಾರ್ಡ್‌ಗಳನ್ನು ದಿಲ್ಲಿಯಿಂದಲೇ ಸಕ್ರಿಯಗೊಳಿಸಬೇಕು. ಅದಾಗಿಲ್ಲ ಎಂದು ಭಾರತ ತಂಡದ ಉಪ ಮುಖ್ಯಸ್ಥ ಬಿ.ಎಸ್‌. ಕೃಷ್ಣ ಮಾಹಿತಿ ನೀಡಿದ್ದಾರೆ. ಹಣವನ್ನು ನೀಡದೇ ವಿಳಂಬ ಮಾಡುವುದರಿಂದ ಹಿರಿಯ ಆಟಗಾರರಿಗೆ ಹೆಚ್ಚು ಸಮಸ್ಯೆ ಯಾಗುವುದಿಲ್ಲ. ಆದರೆ ಕಿರಿಯರು ಮಾತ್ರ ಹಣದ ಕೊರತೆಯನ್ನು ತೀವ್ರ ಅನುಭವಿಸುವಂತಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next