Advertisement

ಸುಮಿತ್‌, ರವಿಕುಮಾರ್‌ಗೆ ಉದ್ದೀಪನ ಕಳಂಕ! ಕ್ರೀಡಾ ಇತಿಹಾಸದಲ್ಲೇ ಅಪರೂಪ

10:05 AM Dec 12, 2019 | Team Udayavani |

ಹೊಸದಿಲ್ಲಿ: ಭಾರತದ ಕ್ರೀಡಾ ಇತಿಹಾಸದಲ್ಲೇ ಅಪರೂಪವೆನ್ನಿಸುವ ಘಟನೆಯೊಂದು ನಡೆದಿದೆ. ಬಾಕ್ಸರ್‌ ಸುಮಿತ್‌ ಸಾಂಗ್ವಾನ್‌ ಮತ್ತು ಶೂಟರ್‌ ರವಿಕುಮಾರ್‌ ನಿಷೇಧಿತ ಉದ್ದೀಪನ ಸೇವಿಸಿದ್ದು ಸಾಬೀತಾಗಿದೆ. ಶೂಟರ್‌ಗಳು, ಬಾಕ್ಸರ್‌ಗಳು ಉದ್ದೀಪನ ಸೇವಿಸಿದ ಘಟನೆ ನಡೆಯುವುದು ವಿರಳ. ಹೀಗಾಗಿ ಈ ಘಟನೆ ಎಲ್ಲರನ್ನೂ ಅಚ್ಚರಿಗೆ ಕೆಡವಿದೆ.

Advertisement

91 ಕೆಜಿ ವಿಭಾಗದ ಬಾಕ್ಸರ್‌ ಸುಮಿತ್‌ (26 ವರ್ಷ), ನಿಷೇಧಿತ ಅಸೆಟಝೊಲಾಮೈಡ್‌ ಎಂಬ ಔಷಧ ಸೇವಿಸಿದ್ದಾರೆ. ವಿಶ್ವಕಪ್‌ ಮತ್ತು ಕಾಮನ್‌ವೆಲ್ತ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಶೂಟರ್‌ ರವಿಕುಮಾರ್‌ (29 ವರ್ಷ) ನಿಷೇಧಿತ ಪ್ರೊಪ್ರಾನೊಲೊಲ್‌ ಸೇವಿಸಿರುವುದು ಪತ್ತೆಯಾಗಿದೆ.

 “ನನಗೆ ಗೊತ್ತಿರಲಿಲ್ಲ’
ಈ ಬಗ್ಗೆ ಪ್ರತಿಕ್ರಿಯಿಸಿರುವ ರವಿಕುಮಾರ್‌, “ನಾನು ಆಯಾಚಿತವಾಗಷ್ಟೇ ಉದ್ದೀಪನ ಸೇವಿಸಿದ್ದೇನೆ. ಅರೆ ತಲೆನೋವೆಂದು ನಾನು ಸೇವಿಸಿದ ಔಷಧ ನಿಷೇಧಕ್ಕೊಳಗಾಗಿತ್ತು ಎಂದು ನನಗೆ ಗೊತ್ತಿರಲಿಲ್ಲ. ಮೇ-ಜೂನ್‌ನಲ್ಲಿ ನಡೆದ ಸುರೇಂದ್ರನಾಥ್‌ ಕೂಟಕ್ಕೂ ಮುನ್ನ, ನನ್ನ ವೈದ್ಯರು ತಲೆನೋವಿಗೆ ಈ ಔಷಧ ತೆಗೆದುಕೊಳ್ಳಲು ಸೂಚಿಸಿದ್ದರು. ಗೊತ್ತಾಗದೇ ನಡೆದಿರುವುದರಿಂದ ನನಗೆ ಶಿಕ್ಷೆಯ ಪ್ರಮಾಣ ತಗ್ಗಬಹುದೆಂಬ ಭರವಸೆಯಿದೆ’ ಎಂದಿದ್ದಾರೆ.

ಈ ಬಗ್ಗೆ ರವಿಕುಮಾರ್‌ ನಾಡಾಕ್ಕೆ ಎಲ್ಲವನ್ನೂ ವಿವರಿಸಿದ್ದಾರೆ. ಇದನ್ನು ನಾಡಾ ಕೂಡ ಒಪ್ಪಿಕೊಂಡಿದೆ. ಅವರ ಒಂದೇ ಒಂದು ತಪ್ಪೆಂದರೆ, ಪರೀಕ್ಷೆಗೂ ಮುನ್ನ ಈ ಔಷಧ ತೆಗೆದುಕೊಂಡಿರುವುದನ್ನು ತಿಳಿಸದೇ ಇದ್ದದ್ದು ಎಂಬುದಾಗಿ ನಾಡಾ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next