Advertisement

“ಶೂಟರ್‌ ದಾದಿ’ಚಂದ್ರೊ ನಿಧನ : 60 ವರ್ಷದ ಬಳಿಕ ಶೂಟಿಂಗ್‌ ರೇಂಜ್‌ಗೆ ಇಳಿದ ಸಾಹಸಿ!

10:09 PM Apr 30, 2021 | Team Udayavani |

ಮೀರತ್‌ : ಭಾರತದ ಅತ್ಯಂತ ಹಿರಿಯ ರಾಷ್ಟ್ರೀಯ ವನಿತಾ ಶೂಟರ್‌, “ಶೂಟರ್‌ ದಾದಿ’ ಎಂದೇ ಗುರುತಿಸಲ್ಪಟ್ಟಿದ್ದ ಚಂದ್ರೊ ತೋಮರ್‌ ಕೋವಿಡ್‌ಗೆ ಬಲಿಯಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು.

Advertisement

ಕೊರೊನಾ ಪಾಸಿಟಿವ್‌ ಬಂದ ಬಳಿಕ ಚಂದ್ರೊ ತೋಮರ್‌ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಈ ವಾರದ ಆರಂಭದಲ್ಲಿ ಮೀರತ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಶುಕ್ರವಾರ ನಿಧನ ಹೊಂದಿದರು.

ಮೂಲತಃ ಉತ್ತರಪ್ರದೇಶದವರಾದ ಚಂದ್ರೊ ತೋಮರ್‌ ಶೂಟಿಂಗ್‌ ಕಣಕ್ಕೆ ಧುಮುಕಿದಾಗ ಆಗಲೇ 60 ವರ್ಷ ದಾಟಿತ್ತು.

ಮೊಮ್ಮಗಳೊಂದಿಗೆ ಶೂಟಿಂಗ್‌ ಕ್ಲಬ್‌ ಒಂದಕ್ಕೆ ಭೇಟಿ ನೀಡಿದ ವೇಳೆ ಆಕಸ್ಮಿಕವಾಗಿ ಚಂದ್ರೊ ಅವರ ಗುರಿಗಾರಿಕೆಯ ಸಾಮರ್ಥ್ಯ ಅನಾವರಣಗೊಂಡಿತ್ತು. ಗನ್‌ ಒಂದನ್ನು ಎತ್ತಿಕೊಂಡ ಅವರು ನಿಖರವಾಗಿ “ಬುಲ್‌ ಐ’ಗೆ ಗುರಿ ಇರಿಸಿದ್ದರು. ಅನೇಕ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗ್ಳಲ್ಲಿ ಗೆದ್ದು ಬಂದದ್ದು ಚಂದ್ರೊ ಅವರ ಶೂಟಿಂಗ್‌ ಸಾಹಸಕ್ಕೆ ಸಾಕ್ಷಿ. ಪ್ರತಿಷ್ಠಿತ “ಸ್ತ್ರೀ ಶಕ್ತಿ ಸಮ್ಮಾನ್‌’ ಗೌರವಕ್ಕೂ ಭಾಜನರಾಗಿದ್ದರು.

Advertisement

ಇದನ್ನೂ ಓದಿ :ಸಲಿಂಗಕಾಮ ತೀರ್ಪು: ತಾನೇ ಶಿಕ್ಷಣ ಪಡೆಯಲು ನಿರ್ಧರಿಸಿದ ನ್ಯಾಯಮೂರ್ತಿ!

ಚಂದ್ರೊ ಸಾಹಸ ಬಾಲಿವುಡ್‌ ಚಿತ್ರವೊಂದಕ್ಕೂ ಸ್ಫೂರ್ತಿಯಾಗಿತ್ತು. 2019ರಲ್ಲಿ ಬಿಡುಗಡೆಯಾದ ಈ ಚಿತ್ರದ ಹೆಸರು “ಸಾಂಡ್‌ ಕೀ ಆಂಖ್‌’. ತುಷಾರ್‌ ಹೀರಾನಂದಾನಿ ನಿರ್ದೇಶನದ ಈ ಚಿತ್ರದಲ್ಲಿ ಭೂಮಿ ಪೆಂಡೇಕರ್‌ ಅವರು ಚಂದ್ರೊ ತೋಮರ್‌ ಪಾತ್ರದಲ್ಲಿ ಅಭಿನಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next